ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ

ಕದಿ ಹರಿಸ್ಮರಣೆಯ ಮಾಡಿ ಜನರ ಮುಂದೆ | ವ' ಸಂಭ್ರಮದಿ ತಾನುಂಬ ಊಟ ಬಯಸಿ ||

ಂಬುಜವ ಪಿತನ ಆಗಮಗಳರಿಯದೆ | ತಂಬೂರಿ ಮೀಟುವವ ಹರಿದಾಸನೇ ?

ಮಾಯವಾದನ ಮಾಡಿ ವಿಪ್ರರಿಗೆ ಮೃಷ್ಟಾನ್ನ | ಪ್ರಿಯದಲೆ ತಾನೊಂದು ಕೊಡದ ಲೋಭಿ ||

ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು | ಗಾಯನವ ಮಾಡಿದವ ಹರಿದಾಸನೇ ?

ಪಾತಕನ ತೆರನಂತೆ ಪದಗಳನು ತಾ ಬೊಗಳಿ | ಕೂಟ ಜನರ ಮನವ ಸಂತೋಷಪಡಿಸಿ ||

ಗೂಟನಾಮವನಿಟ್ಟು ಕೊಟ್ಟರಿಗೆ ತಾನೆನುತ | ತೋಟಕ ಮಾಡಿದವ ಹರಿದಾಸನೇ ?

ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯ | ವಾತಸುತನಲ್ಲಿಹನ ವರ್ಣಿಸುತಲಿ |

ಗೀತನರ್ತನದಿಂದ ಕೃಷ್ಣನ್ನ ಪೂಜಿಸುವ | ಪೂತಾತ್ಮ ಪುರಂದರದಾಸನಿವನಯ್ಯ

ಭಕುತಿ ಭಾವವಿಲ್ಲದ ಗಾನವು ಪರಮಾತ್ಮನಿಗೆ ರುಚಿಸದು (ರಾಗ-ಭೈರವಿ, ತಾಲ-ದೀಪಚಂದಿ)

ಹೇಳನೋ ಹರಿ ತಾಳನ ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ

ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು | ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ||

ತು೦ಬರ ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಿಕರ ಕೂಗಾಟ

ನಾನಾ ಬಗೆಯ ರಾಗ ಭಾವ ತಿಳಿದು ಸ್ವರ | ಜ್ಞಾನ ಮನೋಧರ್ಮ ಜಾತಿಯಿದ್ದು |

ದಾನವಾರಿಯ ದಿವ್ಯ ನಾಮರಹಿತವಾದ | ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು

ಅಡಿಗಡಿಗಾನಂದಬಾಷ್ಪ ಪುಳಕದಿಂದ | ನುಡಿ ನುಡಿಗೆ ಶ್ರೀಹರಿ ಎನ್ನುತ

ದೃಢ ಭಕ್ತರನು ಕೂಡಿ ಹರಿಕೀರ್ತನೆ ಮಾಡಿ | ಕಡೆಗೆ ಪುರಂದರವಿಠಲನೆಂದರೆ ಕೇಳುವ