ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ

ಹೆಡಿಯ ಮೇಲಕ್ಕೇರಿಸಿ | ಮ್ಯಾಗಿನ ಬಾಲಾ ಕೆಳಭಾಗಕ್ಕಿಳಿಸಿ |

ಒಳಗಿರುವ ತ್ರಿಕೋಣ | ಗಳಿಗೆಯೊಳಗೆ ಪೊಕ್ಕು | ಕಳೆನಾದ ಸರ್ಪದ | ಫಣಿರತ್ನ ಪಡೆದಂಥ

ಸದ್ಭಾವವೆಂಬೊ ಬುಟ್ಟಿಯಲಿ | ಈ ಪಾವ ಹಿಡಿದು ಒಳಗೆ ಹಾಕಿದೆವಿಲ್ಲಿ ||

ದೇವ ದೇವರಿಗೆಲ್ಲಾ | ದೇವಶಿಖಾಮಣಿ | ದೇವ ಬಲಭೀಮನ | ಮೂಲವ ತಿಳಿದಂಥ

ಪಾರಮಾರ್ಥಿಕ ಅನುಭವದ ಸಂಕ್ಷೇಪರೂಪ . ( ರಾಗ-ಅಲೈಯ್ಯಾ ಬಲಾವಲಿ, ತಾಲ-ದೀಪಚಂದಿ)

ಕಣ ನೊಳಗೆ ನೋಡೊ ಹರಿಯ ಒಳಗಣ್ಣಿನೊಳಗೆ ನೋಡೋ ಮೂಜಗದೊಡೆಯನ

ಆಧಾರ ಮೊದಲಾದ ಆರು | ಚಕ್ರ | ಶೋಧಿಸಿ, ಬಿಡಬೇಕು ಈಷಣ ಮರು ||

ಸಾಧಿಸಿ ಸುಷುಮ್ಮಾ ಏರು | ಅಲ್ಲಿ | ಭೇದಿಸಿ ನೀ ಪರಬ್ರಹ್ಮನ ಸೇರು

ಎವೆ ಹಾಕದೆ ಮೇಲೆ ನೋಡಿ | ಬೇಗ | ಪವನನಿಂದಲಿ ವಾಯುಬಂಧನ ಮಾಡಿ ||

ಸವಿದು ನಾದವ ಪಾನ ಮಾಡಿ | ಅಲ್ಲಿ | ನವವಿಧ ಭಕ್ತಿಲಿ ನಲಿನಲಿದಾಡಿ

ಅಂಡಜದೊಳಾಡುತ್ತಾನೆ | ಭಾನು- 1 ಮಂಡಲದೊಳು ನಾರಾಯಣನೆಂಬೊವನೆ ||

ಕುಂಡಲಿ ತುದಿಯೊಳಿದ್ದಾನೆ | ಶ್ರೀ ಪು- | ರಂದರವಿಠಲ ಪಾಲಿಸುತ್ತಾನೆ

ಶ್ರೀಗಿರಿಯನ್ನು ಅಂತರಂಗದಲ್ಲಿ ಕಾಣಬೇಕು ( ರಾಗ-ಆನಂದಭೈರವಿ, ತಾಲ-ದೀಪಚಂದಿ)

ಶ್ರೀಗಿರಿಯ ಸುಕ್ಷೇತ್ರಕಿಂದು | ಹೋಗಿ ಯಾತ್ರೆಯ ಮಾಡಿ ಬಂದೆ