ಕನ್ನಡ ಪರಮಾರ್ಥ ಸೋಪಾನ
ಪಾಪವಳಿದಾಗ ಕಾಣುವ ಹಾಗೂ ಕಾಣಿಸಿದಾಗ ಪಾಪವನ್ನಳಿಸುವ ದಿವ್ಯ ರತ್ನದ ದರ್ಶನ ( ರಾಗ-ಭೂಪ, ತಾಲ- ದೀಪಚಂದಿ )
ರತ್ನ ಬಂದಿದೆ ನೋಡಿರೋ | ಉನ್ನತ ಜೀವಾ | ರತ್ನ ಬಂದಿದೆ ನೋಡಿರೋ
ಪೃಥ್ವಿಗಧಿಕ ಬ್ರಹ್ಮಪುರದಿಂದ ಬಂದಿದೆ | ರತ್ನ ಪರೀಕ್ಷೆಯ ಬಲ್ಲ ಸತ್ಪುರುಷರೆ
ಶಿರದೊಳು ಅಡಗಿ ಅದೆ | ಯಾವಾಗಲೂ | ಕರದಲ್ಲಿ ಕಾಣುತಿದೆ ||
ಪರಚಂದ್ರ ಸೂರ್ಯ ಬೀದಿಗಳೊಳಗಿಟ್ಟದೆ | ದುರಿತ ಕರ್ಮಗಳಳಿದವಗೆ ಕಾಣುತಿದೆ
ಅಷ್ಟ ದಳಗಳಿಂದ | ಆ ರತ್ನ ವು | ದಿಟವಾಗಿಹುದರಿಂದ ||
ದೃಷ್ಟಿಯನಗಲದೆ ನೋಡಿದ ಪುರುಷನು | ನಷ್ಟ ಪಾತಕನಾಗಿ ಶ್ರೇಷ್ಠನಾಗುವನಂತೆ
ಕಳ್ಳರ ಭಯವಿಲ್ಲವೋ | ಆ ರತ್ನಕ್ಕೆ | ಸುಳ್ಳರ ಸುಳವಿಲ್ಲ ||
ಎಲ್ಲೆಲ್ಲಿ ನೋಡಲು ಅಲ್ಲಿ ಕಾಂಬುದು ತಾನು | ಒಲ್ಲೆನೆಂದರೆ ಬಿಡದೆದುರಿಗೆ ನಿಲ್ಲುವದು
ಶಿರದೊಳು ರತ್ನವನ್ನು | ಧರಿಸಿದಂಥಾ | ಉರಗನ ಹೃದಯವನ್ನು
ಉರಗಭೂಷಣ ಪಕ್ಷಿ-ಹಂಸವಾಹನ ಮುಖ್ಯ | ಸುರಮುನಿ ಹೃದಯದಿ ನಿತ್ಯ ಬೆಳಗುವಂಥಾ
ದೊರೆ ದೇಸಾಯಿಗಳಲ್ಲಿಯೂ | ನವಕೋಟಿ | ನರ ನಾರಾಯಣನಲ್ಲಿಯ ||
ನೆರೆ ಚಕ್ರವರ್ತಿ ಬೊಕ್ಕ ಸದೊಳಗಿಲ್ಲ ಶ್ರೀ- | ಗುರುಮಹಾಲಿಂಗ ರಂಗನ ಭಾಂಡಾರದೊಳಿಹ