ಕನ್ನಡ ಪರಮಾರ್ಥ ಸೋಪಾನ
ಆಷ್ಟವಿಧ ಪ್ರಾಣಲಿಂಗಪೂಜೆಯು ( ರಾಗ-ಭೂಪ ತಾಲ-ದೀಪಚಂದಿ )
ಲಿಂಗಪೂಜೆಯ ಮಾಡಿರೋ | ನಿಮ್ಮೊಳು ಪ್ರಾಣ- 1 ಲಿಂಗಪೂಜೆಯ ಮಾಡಿಕೊ
ಗಂಗೆ ಯಮುನೆಗಳ ಸಂಗಮದೊಳು ಮಿಂದು | ಶೃಂಗಾಟ ಕದುಪರಿ ರಂಗಮಂಟಪದೊಳು
ಪರಭಕ್ತಿ ಜಲವ ನೀಡಿ | ಮಜ್ಜ ನಗೈದು | ವಿರತಿ ಗಂಧವನೆ ತೀಡಿ ||
ಕರಣ ಇಂದ್ರಿಯ ಎಂಬ | ಮಿರುಗುವಕ್ಷತೆಯಿಟ್ಟು | ಅರಿವೆಂಬ ನಿರ್ಮಲ ಸರಸ ಪುಷ್ಪವ ಸೂಡಿ
ಹರ್ಷವೆಂಬುವ ಧೂಪವ | ಸಮರ್ಪಿಸೆ | ಪರಬಿಂದು ರುಚಿ ದೀಪವ |
ನಿರದೆ ಪರಿಪೂರ್ಣ ನೈವೇದ್ಯವನೆ ಮಾಡಿ | ಮೆರೆವ ತ್ರಿಗುಣವೆಂಬ ವರ ತಾಂಬೂಲವ ಕೊಟ್ಟು
ಕರದಿಷ್ಟಲಿಂಗವಿದೆ | ಶರೀರದಲ್ಲಿ | ಪರವಸ್ತು ತಾನಾಗಿದೆ ||
ಹೊರವೊಳಗೆರಡೆನ್ನದರಿದರಿವನೆ ಮೀರಿ | ಗುರುಸಿದ್ದನಂಯೋಳ್ ಬೆರೆದೇಕಮಯವಾಗಿ
ಅಂತರಂಗದಲ್ಲಿಯ ಕಲ್ಪವೃಕ್ಷವನ್ನು ಕಾಣಿರಯ್ಯ | ( ರಾಗ- ಪುರಿಯಾ ಧನಾತ್ರಿ, ತಾಲ- ದೀಪಚಂದಿ)
ಕಲ್ಲು ಮೆತ್ತಗೆ ಮಾಡಿಕೊಳ್ಳಣ್ಣಾ | ಬಲ್ಲವನ ಕೇಳಿ
ಕಲ್ಲು ಮೆತ್ತಗೆ ಮಾಡಿಕೊಳ್ಳೋ | ಕಲ್ಲುಸಕ್ಕರೆಗಿಂತ ಸವಿಯೊ | ಅಮೃತ ತ ಸುರಿದು ನೀನು | ಜ್ಞಾನಜ್ಯೋತಿ ತುಂಬಿಕೊಳ್ಳೋ
ಕಲ್ಲಿನೊಳಗೆ ಪರುಷ ಕಾಣಣ್ಣಾ | ಪರಬ್ರಹ್ಮನರಿಯದೆ | ಕೈಯ ಒಳಗೆ ಬಂದೀತು ಹ್ಯಾಂಗಾ ||
ಕಲ್ಲುಕುಟ್ಟಿಗೆ ಅಲ್ಲಮ ಪ್ರಭು | ಶಿಲೆಯ ಒಡೆದು ಸೆಲೆಯ ತೆಗೆದ | ನೀರು ನೀರು ಕೂಡಿದ ಬಳಿಕ | ಭೇದಭಾವಗಳ್ಯಾಕ ಬೇಕೊ