ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮುನ್ನುಡಿ ಮೈಸೂರು ವಿದ್ಯಾಭ್ಯಾಸದ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಪ್ರಾಥಮಿಕ, ಮಾಧ್ಯಮಿಕ ಮತ್ತು ಹೈಸ್ಕೂಲು ತರಗತಿಗಳಲ್ಲಿ ಓದುವ ವಿದ್ಯಾರ್ಥಿಗಳ ಉಪಯೋಗಕ್ಕೆ ಬೇಕಾದ ಕನ್ನಡ ವ್ಯಾಕರಣಗಳನ್ನು ಸಿದ್ಧಗೊಳಿಸುವುದಕ್ಕಾಗಿ ಮ|| ರಾ || ಗಳಾದ ಬಿ. ವೆಂಕಟನಾರಣಪ್ಪ, ಎಂ. ಎ., (ಅಧ್ಯಕ್ಷರು), ಪಂಡಿತ ತಿರುವಳ್ಳೂರು ಶ್ರೀನಿವಾಸ ರಾಘವಾ ಚಾರರು, ಡಾ|| ಎ. ರ್ಎ. ನರಸಿಂಹಯ್ಯ, ಎಂ.ಎ., ಎಲ್.ಟಿ., ಪಿಹೆಚ್.ಡಿ., ಟಿ. ಎಸ್. ವೆಂಕಣ್ಣಯ್ಯ, ಎಂ.ಎ., ಎ. ಆರ್. ಕೃಷ್ಣ ಶಾಸ್ತ್ರಿ, ಎಂ.ಎ. ಮತ್ತು ಟಿ, ಎ೯. ಶ್ರೀಕಂಠಯ್ಯ ಎಂ.ಎ., ಇವರನ್ನೊಳಗೊಂಡ ಒಂದು ಸಮಿತಿಯನ್ನು ಸರ್ಕಾರದವರು ನಿಯಮಿಸಿ, ಈ ಸಮಿತಿಯ ಸಲಹೆಗಳಿಗನುಸಾರವಾಗಿ ಡಾ|| ಎ. ಎ. ನರಸಿಂಹಯ್ಯ ನವರು, ಪ್ರಾಥಮಿಕ ತರಗತಿಗಳಿಗಾಗಿಯೂ, ಟಿ. ರ್ಎ. ಶ್ರೀಕಂಠಯ್ಯ ನವರು, ಮಾಧ್ಯಮಿಕ ತರಗತಿಗಳಿಗಾಗಿಯೂ, ಟಿ. ಎಸ್. ವೆಂಕಣ್ಣಯ್ಯ ನವರು, ಹೈಸ್ಕೂಲು ತರಗತಿಗಳಿಗಾಗಿಯೂ ಒಂದೊಂದು ವ್ಯಾಕರಣ ವನ್ನು ಬರೆಯಬೇಕೆಂದು ಗೊತ್ತು ಮಾಡಿದರು, ಈಚೆಗೆ ಶ್ರೀರ್ಮಾ ಬಿ. ವೆಂಕಟನಾರಣಪ್ಪನವರು ಕಾರಣಾಂತರದಿಂದ ಸಮಿತಿಯ ಸದಸ್ಯತ್ವ ವನ್ನು ಬಿಟ್ಟಿದ್ದರಿಂದ ಶ್ರೀರ್ಮಾ ಟಿ. ಎಸ್. ವೆಂಕಣ್ಣಯ್ಯನವರಿಗೆ ಸಮಿತಿಯ ಅಧ್ಯಕ್ಷತೆಯನ್ನು ವಹಿಸಲಾಯಿತು. ಮೇಲೆ ಹೇಳಿದ ಸಮಿತಿಯ ಸಲಹೆಗಳಿಗನುಸಾರವಾಗಿ ರಚಿತ ವಾದ ಗ್ರಂಥಗಳಲ್ಲಿ ಡಾ|| ಎ. ರ್ಎ. ನರಸಿಂಹಯ್ಯನವರು ಬರೆದ ಈ

  • ಕನ್ನಡ ಪ್ರಥಮ ವ್ಯಾಕರಣ ವು ಮೊದಲನೆಯದು. ಮಿಕ್ಕ ಎರಡು

ವ್ಯಾಕರಣಗಳು ಪ್ರಕಟಣಿಗೆ ಸಿದ್ಧವಾಗುತ್ತಿವೆ.