ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

fo ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, ಯು ಹೇಳದಳಲ್ಲವೆ! ದೇವೇಂದ್ರನು ಮಯನನ್ನು ಕೊಂದನಲ್ಲದೆ ಈ ಬಿಲವನು ಕೆಡಿಸುವದಕ್ಕೆ ಸಮರ್ಥನಾಗ ಲಿಲ್ಲ; ಲಕ್ಷ್ಮಣನು ತನ್ನ ನಿಶಿತಬಾಣಗಳಿಂದ ಒಂದು ದೊನ್ನೆ ಯನ್ನು ತನ್ನ ಬೆರಳಿನಿಂದ ಸೀಳುವ ಮರದೆಯಲ್ಲಿ ಈ ಬಿಲವನ್ನು ಒಡೆದುಹಾಕುವನು; ಲಕ್ಷಣನಿಗೆ ವಜ್ರಾಯುಧಕ್ಕ ಸಿಡಿಲಿಗೂ ಸಮಾನವಾಗಿ ಪರ್ವತಗಳನ್ನು ಪೂರ್ಣ ಮಾಡುವಂಥಾ ಅನೇಕ ಬಾಣಗಳುಂಟು ; ನೀನು ಈ ಗುಹೆಯಲ್ಲಿರಬೇಕೆಂದು ಯೋಚನೆಮಾಡುವಶಕದಲ್ಲಿ ಕಪಿನಾ ಯಕರೆಲ್ಲರು ಹಸಿವು ತೃಪೆಗಳಿಂದ ಕಂಗೆಟ್ಟು ನಾನಾಪ್ರದೇಶಗಳನ್ನೂ ತಿರಿಗಿ ದುಃಖಪಟ್ಟಿರುವದರಿಂದ ತಮ್ಮ ಸ್ತ್ರೀ ಯರನ್ನ ಮಕ್ಕಳನ್ನ ನೆನೆದು ನಿನ್ನನ್ನು ಬಿಟ್ಟು ಹೋಗುವರಲ್ಲದೆ ನಿನ್ನ ಕೂಡೆ ಇರಲಾರರು ; ನೀನು ನಿನ್ನ ಆತ್ಮ ಬಂಧುಗಳನ್ನೂ ಸ್ನೇಹಿತರನ್ನೂ ಬಿಟ್ಟು ಇಲ್ಲಿದ್ದರೆ ಒಂದು ತೃಣಕ್ಕಿಂತಲು ಕಡೆಯಾಗಣಿಸಲ್ಪಡುವೆ; ಲಕ್ಷ ಣನ ಬಾಣಗಳು ಮಹಾ ಉಗ್ರವಾಗಿ ಅತಿ ವೇಗವುಳವಾಗಿ ಯಾರಿಗೂ ಸಹಿಸುವದಕ್ಕೆ ಅಸಾಧ್ಯವಾದಂಥವು ; ಅಪರಾಧಿಯನ್ನು ಕಂಡರೆ ಸಂಹರಿಸುವವಲ್ಲದೆ ತಳಹರಿಸುವಂಥಾವಲ್ಲ ; ನೀನು ನಮ್ಮ ಕೂಡೆ ಬಂದಮೇಲೆ ನಾವು ಹೇಳಿದಂತೆ ಇದ್ದ ಯಾದರೆ ಸುಗ್ರೀವನು ಕ್ರಮವಾಗಿ ನಿನಗೆ ರಾಜಾಧಿಪತ್ಯವನ್ನು ಕೂಡುವನು ; ನಿನ್ನ ಚಿಕ್ಕಪ್ಪನಾ ದ ಸುಗ್ರೀವನು ಹಿತವನ್ನು ಬಲ್ಲವನು ; ಧರ್ಮಿಷ್ಟನು ; ದೃಢವ್ರತವುಳ್ಳವನು; ಕುಚಿತ್ವವುಳ್ಳವನು ; ಪ್ರತಿಜ್ಞಾ ಪರಿಪಾಲಕನು ; ಅಂಥಾವನು ನಿನ್ನ ನ್ನು ಸನ್ಮಾನಿಸುವನಲ್ಲದೆ ದಂಡಿಸನು ; ನಿನ್ನ ತಾಯದ ತಾರಾದೇವಿಗೆ ಸಂತೋ ಪವನ್ನುಂಟುಮಾಡಬೇಕೆಂಬ ಬುದ್ದಿಯಿಂದ ತನ್ನ ಪ್ರಾಣವನ್ನಾದರೂ ಕೊಡುವನು ; ಆತನಿಗೆ ನೀನಲ್ಲದೆ ಬೇರೆ ಮಕ್ಕಳಲ್ಲ; ಆದಕಾರಣ ನೀನು ಸುಗ್ರೀವನ ಮನಸ್ಸಿಗೂ ಶ್ರೀರಾಮನ ಮನಸ್ಸಿಗೂ ಸಂತೋಷವಾಗುವ ಮಯ್ಯಾ ದೆಯಲ್ಲಿ ಇನ್ನೂ ಉಳಿದಿರುವ ಸ್ಥಾನಗಳಲ್ಲಿ ಸೀತಾದೇವಿಯನ್ನರಸಿ ಕಾಣುವದಕ್ಕೆ ತಕ್ಕ ಉಪಾಯವನ್ನು ಕಾಣು” ಎಂದು ಸಂತವಿಟ್ಟನು. ೫೫ ನೆ ಅಧ್ಯಾಯ - ಅ೦ ಗ ದಾ ದಿ ಗ ಳು ಪ ಯೋ ಪ ವ ಶ ಕ್ಕೆ ಕು ೪ ತ ದು . ಈ ಮಂದೆಯಲ್ಲಿ ಹನುಮಂತನು ಅಂಗದಕುಮಾರನಕೂಡೆ ಅನೇಕ ಸತ್ಕಾರಪೂರ್ವಕವಾಗಿ ಧರ್ಮರಹ ಸ್ಥವಾದ ಮಾತುಗಳನ್ನು ನುಡಿಯಲು ಆತನು ಹನುಮಂತನಿಗೆ ಪ್ರತ್ಯತ್ತರವನ್ನು ನುಡಿಯುತ ಆತನನ್ನು ಕುರಿತು * ಎಲೈ ಹನುಮಂತನ, ಸುಗ್ರೀವನಲ್ಲಿ ಸ್ಟಿರಬುದ್ದಿಯು ಮನಸ್ಸಿನಲ್ಲಿ ದೃಢತ್ನವು ಇಂದ್ರಿಯನಿಗ್ರಹವು ಅನಾಸ ಯೆಯು ರುಜಮಾರ್ಗವು ಪರಾಕ್ರಮವು ಧೆರ್ಯವು ಮೊದಲಾದ ಸದ್ಗುಣಗಳಿದ್ದರೆ ಹಿರೀ ಅಣ್ಣನು ತಂದೆಗೆ ಸಮಾನನೆಂದೂ ಆತನ ಸ್ತ್ರೀಯು ಹೆತ್ತ ತಾಯಿಗೆ ಸಮಾನವೆಂದೂ ಹೇಳುವ ಲೋಕವಾರ್ತೆಯನ್ನು ಬಿಟ್ಟು ತನ್ನ ಹಿ ರೀ ಅಣ್ಣನಾದ ವಾಲಿಯ ಸ್ತ್ರೀಯನ್ನು ಅಂಗೀಕರಿಸುವನೆ ! ಲೋಕದಲ್ಲಿ ಇಂಥಾ ಹೀನಕೃತ್ಯವನ್ನು ಮಾಡಿದವರಾ ರು ! ತನ್ನ ಅಣ್ಣನಾದ ವಾಲಿಯು ಒಬ್ಬ ದಾನವನಕೂಡೆ ಯುದ್ಧಕ್ಕೆ ಹೋಗಿ ಆ ದಾನವನು ಒಂದು ಗುಹೆಯನ್ನು ಹೆಕ್ಕಲು ಆ ಗುಹೆಯ ಬಾಗಲಲ್ಲಿ ತನ್ನನ್ನು ಕಾವಲಿರಿಸಿ ಅಣ್ಣನು ಆ ಗುಹೆಯನ್ನು ಹೊಕ್ಕು ಹೋದಮೇಲೆ ಆ ಗುಹೆಯು ಬಾಗಲಿಗೆ ದೊಡ್ಡ ಕಲ್ಲನ್ನು ಚಾಚಿ ಆತನು ತಿರಿಗಿ ಬರದಂತೆ ಮಾಡಿ ರಾಜ್ಯಾಧಿಪತೃವನ್ನು ಕಟ್ಟಿಕೊಂಡ ಸುಗ್ರೀವನಿಗೆ ಸತ್ಯಧರ್ಮಗಳೆ ಹಣವು ! ಅದಲ್ಲದೆ ಶ್ರೀರಾಮನ ಕಾರ್ಯವನ್ನು ಸಾಧ್ಯಮಾಡಿಕೊಡುವದಾಗಿ ನಂಬಿ ಕೆಕೊಟ್ಟು ಆತನಿಂದ ತನ್ನ ಕಾರ್ಯವನ್ನು ಆಗಮಾಡಿಕೊಂಡು ಪ್ರತ್ಯುಪಕಾರ ಮಾಡುವದನ್ನು ಮರೆತು ಕಡೆಗೆ ಲಕ್ಷಣನು ಬಂದು ಬೆದರಿಸಲು ಅಂಟಿಕೊಂಡು ನಮ್ಮನ್ನು ಕಳುಹಿಸಿದನಲ್ಲದೆ ತನ್ನ ಬುದ್ದಿ ಪುರ್ವಕವಾಗಿ ಶ್ರೀರಾ ಮನು ಮಾಡಿದ ಉಪಕಾರವನ್ನು ನೆನೆದು ಸೀತಾದೇವಿಯನ್ನ ರಸಿಕೊಂಡು ಬರಹೇಳಿ ನನ್ನನ್ನು ಕಳುಹಿಸಿದನೆ ! ಅ೦ ಥಾಮದೋನ್ಮತ್ತನಾಗಿ ಚಂಚಲಚಿತ್ತನಾಗಿ ಮಾಡಿದ ಉಪಕಾರವನ್ನು ಮರೆತವನಾಗಿ ಶಾಮಿತ್ರನಾದ ಸುಗ್ರಿವನಲ್ಲಿ