ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, M ೫೬ ನೆ ಆ ಧ್ಯಾ ಯ , ಸ೦ ಪಾ ತಿ ಯ ಜ ಟಾ ಯು ವಿ ನ ವೈ ತಾಂ ತ ನ ನ್ನು ಕೆ ೪ ದ್ದು , ಎಲೈ ಕುಶಲವರುಗಳರಾ, ಈ ಮರ್ಯಾದೆಯಲ್ಲಿ ಅಂಗದನು ಮೊದಲಾದ ಕಪಿನಾಯಕರು ಸಮುದ್ರತೀರ ದಲ್ಲಿದ್ದ ವಿಂಧ್ಯಪರತದ ತಪ್ಪಲಲ್ಲಿ ಪ್ರಾಯೋಪವೇಶದಿಂದ ಶರೀರತ್ಯಾಗವನ್ನು ಮಾಡಬೇಕೆಂದು ಕುಳಿತಿದ್ದ ಸಮಯ ದಲ್ಲಿ ಜಟಾಯುವಿನ ಅಣ್ಣನಾಗಿ ಮಹಾ ಪರಾಕ್ರಮಿಯಾಗಿ ಸ್ಥಿರಜೀವಿಯಾದ ಸಂಗತಿ ಎಂಬ ಗೃಢರಾಜನು ಆ ಪ ರತದ ಕೋಡುಗಲ್ಲಿನಿಂದಿಳಿದು ಆ ಕವಿನಾಯಕರು ಪ್ರಯೋಪವೇಶಕ್ಕೆ ಕುಳಿತಿದ್ದ ಸ್ಥಳಕ್ಕೆ ಬಂದು ಅವರನ್ನು ನೋಡಿ ಅತಿ ಹರ್ಷಬಟ್ಟು ವಿಂಧ್ಯಪರತವನ್ನು ಕುರಿತು " ಎಲೈ ವಿಂಧ್ಯಪರ್ವತರಾಜನೇ, ಲೋಕದಲ್ಲಿ ಬ್ರಹ್ಮ ದೇವನು ತಾನು ಸೃಷ್ಟಿಸಿದ ಪ್ರಾಣಿಗಳಿಗೆ ಕಲ್ಪಿಸಿದ ಆಹಾರವನ್ನು ತಾನೇ ಕೂಡಿಸಿ ಕೂಡುವನು ; ಆದ್ದರಿಂದ ಈ ಕವಿನಾಯಕರು ನನ್ನ ಭಕ್ಷಣಕ್ಕೆ ಒದಗಿಬಂದರು ; ನನಗೆ ಬಹುಕಾಲದಿಂದ ಆಹಾರವಿಲ್ಲದಿತ್ತು ; ಈಗ ಪ್ರಾಯೋ ಪವೇಶಕ್ಕೆ ಕುಳಿತು ದೇಹತ್ಯಾಗವನ್ನು ಮಾಡುವದಕ್ಕಿರುವ ಇವರನ್ನು ಭಕ್ಷಿಸುತ್ತೇನೆ” ಎಂದು ಹೇಳಿದನು. - ಪಕ್ಷಿರಾಜನಾದ ಸಂಗಾತಿಯ ಆ ಮಾತನ್ನು ಕೇಳಿ ಅಂಗದಕುಮಾರನು ಮನಸ್ಸಿನಲ್ಲಿ ಭಯಪಟ್ಟು ಹನುಮಂ ತನನ್ನು ಕುರಿತು “ ಎಲೈ ಹನುಮಂತನೆ, ಸಾಕ್ಷಾತೆ ಯಮನೇ ಈ ಹದ್ದಿನ ಸ್ವರೂಪದಿಂದ ನಮ್ಮೆಲ್ಲರನ್ನೂ ನಾಶ ಮಾಡಬೇಕೆಂದು ಈ ಸ್ಥಳಕ್ಕೆ ಬಂದಿದ್ದಾನೆ! ಕಟಕಟಾವರಣವಂತೂ ತಪ್ಪದು ; ನಾವು ಸುಗ್ರೀವನ ಕಾರೈವ ನ್ನು ಸಲ್ಲಿಸಲಿಲ್ಲ ; ಶ್ರೀರಾಮನ ಕಾರವನ್ನೂ ಮಾಡಲಿಲ್ಲ; ಇಷ್ಟುಮಂದಿ ಕವಿನಾಯಕರಿಗೂ ಒಂದೇಭಾರಿ ಮತ್ತು ವು ಬಂತು ; ಜಟಾಯುವು ಸೀತಾದೇವಿಗೆ ಹಿತವನ್ನು ಬಯಸಿ ಆ ದೇವಿಯ ನಿಮಿತ್ತವಾಗಿ ಶರೀರವನ್ನು ಬಿಟ್ಟು ಕೃತಾರ್ಥನಾದನು ; ಆ ಮರ್ಯಾದೆಯಲ್ಲೇ ಮತ್ತು ಕೆಲವು ಪಶುಪ್ರಾಣಿಗಳ ಶ್ರೀರಾಮನ ಕಾದ್ಯವನ್ನು ಮಾಡಿ ಕೊಟ್ಟು ಪವಿತ್ರವಾದವು ; ದಯಾಶೀಲವುಳ ಮತ್ತು ಅನೇಕ ಪ್ರಾಣಿಗಳು ತಮ್ಮ ಸದ್ಭುದ್ಧಿಯಿಂದ ಶ್ರೀರಾಮನ ಕಾರನಿಮಿತ್ತವಾಗಿ ಶರೀರವನ್ನು ಬಿಟ್ಟು ಪಾವನವಾದವು ; ಜಟಾಯುವೆಂಬ ಪಕ್ಷಿರಾಜನು ಶ್ರೀರಾಮನಿಗೆ ಪ್ರಿಯ ವನ್ನು ಮಾಡಬೇಕೆಂಬ ಬುದ್ಧಿಯಿಂದ ರಾವಣನಕಡೆ ಯುದ್ಧವನ್ನು ಮಾಡಿ ತನ್ನ ಶರೀರವನ್ನು ಬಿಟ್ಟು ಕೃತಾ ರ್ಥನಾದನು ; ನಾವು ಶ್ರೀರಾಮನ ಕಾರ್ಯನಿಮಿತ್ತವಾಗಿ ಹೊರಟುಬಂದು ನಮ್ಮ ಕೈಲಾದಷ್ಯ ವನಾಂತರಗಳಲ್ಲಿ ಸಂಚರಿಸಿ ಸೀತಾದೇವಿಯನ್ನು ಕಾಣದೇ ಹೋದೆವು ; ಜಟಾಯುವು ರಣರಂಗದಲ್ಲಿ ರಾವಣನಿಂದ ಘಾಯಪಡೆದು ಶರೀ ರವನ್ನು ಬಿಟ್ಟು ಸುಗ್ರೀವನ ಭಯವಿಲ್ಲದೆ ಸದ್ಧತಿಯನ್ನೆ ದಿದನು; ನಮಗೆ ನಾವು ಬಂದ ಕಾರ್ಯವು ಕೈಗೂಡಲಿಲ್ಲ ; ಸುಗ್ರೀವನ ಭಯವು ಬಿಡಲಿಲ್ಲ ; ಶ್ರೀರಾಮನ ವನವಾಸದಿಂದ ದಶರಥರಾಯನು ಸ್ವರ್ಗಸ್ಥನಾದನು ; ರಾವಣನು ಸೀತಾ ದೇವಿಯನ್ನ ಪಹರಿಸಿಕೊಂಡು ಹೋದನು ; ಸೀತಾದೇವಿಯ ನಿಮಿತ್ತವಾಗಿ ಜಟಾಯುವು ಸ್ವರ್ಗಸ್ಥನಾದನು ; ಹೀಗಿ ರುವಲ್ಲಿ ಶ್ರೀರಾಮನ 'ಕಾರ್ಯನಿಮಿತ್ತವಾಗಿ ಬಂದ ನನ್ನಂಥಾ ಕವಿನಾಯಕರಿಗೆ ಜೀವದಮೇಲಣ ಆಕೆಯನು ! ದಕ ರಥರಾಯನ ಕೈಕೆಯಿಾದೇವಿಗೆ ವರವನ್ನು ಕೊಟ್ಟಿದ್ದರಿಂದ ಶ್ರೀರಾಮಲಕ್ಷ್ಮಣ ಸೀತಾದೇವಿಯರಿಗೆ ವನವಾಸವಾ ಯಿತು ; ಶ್ರೀರಾಮನ ಕೋಪದಿಂದ ಅನೇಕ ರಾಕ್ಷಸರ ನಾಶವಾದರಿ ?” ಎಂದು ಹಂಬಲಿಸುತ ನುಡಿದನು. ಆ ಮಾತನ್ನು ಕೇಳಿ ಸಂಪಾತಿಯು ಮನಕರಗಿ ದಯಹುಟ್ಟಿ ಅಂಗದಾದಿಗಳನ್ನು ಕುರಿತು " ಎಲೈ ಕಪಿನಾಯ ಕರುಗಳರ, ನೀವ್ಯಾರು ? ನನ್ನ ಚಿತ್ರಣಗಳಿಗೆ ಸಮಾನವಾಗಿ ನನ್ನ ಪ್ರಿಯಸಹೋದರನಾದ ಜಟಾಯುವಿನ ಮರಣವಾ ತಯನ್ನು ಹೇಳುವರು ? ಆ ಮಾತನ್ನು ಕೇಳಿ ನನ್ನ ಎದೆಯು ನಡುಗುತ್ತಿದೆ ! ಎಲೆ ಕವಿನಾಯಕರುಗಳಿರಾ, ನನ್ನ ತಮ್ಮನಾದ ಜಟಾಯುವಿನ ಪ್ರಸಂಗವನ್ನು ಬಹುಕಾಲಕ್ಕೆ ಕೇಳಿ ನನ್ನ ಮನಸ್ಸಿಗೆ ಸಂತೋಷವಾಗುತ್ತಿದೆ; ಆದಕಾರಣ ನಿಮ್ಮನ್ನು ಈ ವಿಂಧ್ಯಪರ್ವತವನ್ನು ದಾಟಿಸಿ ಬಿಡುತ್ತೇನೆ ; ನೀವು ಅಂಜಬೇಡೀ ! ಜನಸ್ತನದಲ್ಲಿದ್ದ ಜಟಾಯುವಿಗೆ ಕಸಲದೇಶದಲ್ಲಿದ್ದ ದಶರಥರಾಯನು ಹಗೆ ಸಖನಾದನು ! ದಶರಥರಾಯನ ಪುತ್ರನಾಗಿ G