ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೪ ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, ಣಿಸಿದ್ದ ಸ್ತನಗಳನ್ನೂ ಅತಿ ರಮಣೀಯವಾಗಿದ್ದ ಮುಖವನ್ನೂ ಚಕ್ರಾಕಾರವಾಗಿ ಘನಗಾತ್ರವಾಗಿದ್ದ ಪೊರವಾರವ ನ್ಯೂ ಅನಿದಾಗಿ ವೃತ್ತವಾಗಿದ್ದ ಮಧ್ಯಪ್ರದೇಶವನ್ನೂ ಕಂಡು ಕಾಮಮೋಹಿತನಾಗಿ ಆಕೆಯನ್ನು ತಬ್ಬಿಕೊಂಡನು ; ಆಕೆಯು ಆತನನ್ನು ಕುರಿತು ' ಎಲೆ ಪುರುಷನೆ, ಲೋಕದಲ್ಲಿ ಮನಃಪುರ್ವಕವಾಗಿ ಅನುಕೂಲವಾಗದಿರುವ ಪತಿ ವ್ಯತಾಸ್ತ್ರಿಯರನ್ನು ವ್ರತಗೆಡಿಸುವದು ಪುರುಷರಿಗೆ ಉಚಿತವೇ ?' ಎಂದು ಕೇಳಿದಳು,

  • ವಾಯುವು * ಎಲೇ ಶೋಭನಾಂಗಿಯೆ, ನಾನು ನಿನ್ನ ವ್ರತಭಂಗವನ್ನು ಮಾಡುವವನಲ್ಲ; ನೀನು ಅಂದ ಬೇಡ ; ನಾನೂ ನೀನೂ ದೈವಯತ್ನದಿಂದ ಏಕಾಂತಸ್ಥಳದಲ್ಲಿ ಕೂಡಿದೆವು ; ನೀನು ನನ್ನನ್ನು ತಬ್ಬಿಕೊಂಡು ನ ನೊ ಡನೆ ರಮಿಸಿದೆಯಾದರೆ ನಿನಗೆ ಮಹಾ ಬಲವಂತನಾಗಿ ಬುದ್ದಿವಂತನಾಗಿ ಮಹಾ ಸತ್ಯವುಳ್ಳವನಾಗಿ ಅತಿ ತೇಜ ಸ್ವಂತಾದ ಮಗನು ಹುಟ್ಟುವನು ; ಅತಿ ದೂರವಾಗಿ ದಾಟುವದರಲ್ಲಿಯೂ ಕುಪ್ಪಳಿಸುವದರಲ್ಲಿಯೂ ನನಗೆ ಸಮಾನ ವಾದ ವೇಗವುಳ್ಳವನಾಗುವನು' ಎಂದು ಸಂತವಿಟ್ಟನು.

(( ಆ ಬಳಕ ನಿನ್ನ ತಾಯಾದ ಅಂಜನಾದೇವಿಯು ವಾಯುದೇವನಿಗನುಕೂಲವಾಗಿದ್ದು ಕೆಲವು ಕಾಲಕ್ಕೆ ಒಂ ದು ಗುಹೆಯಲ್ಲಿ ನಿನ್ನನ್ನು ಪಡೆದಳು ; ನೀನು ಅವತರಿಸಿದಾಗ ಸೂರ್ಯೋದಯವಾಗಲು ಕೆಂಪಾದ ಸೂರಮಂಡಲ, ವನ್ನು ಕಂಡು ಅದು ಪಕ್ಷವಾದ ಒಂದು ಫಲವೆಂದೆಣಿಸಿ ಸೂಮಂಡಲವನ್ನು ತೆಗೆದು ನುಂಗಬೇಕೆಂದು ಮುನ್ನೂ ರುಗಾವುದದೂರ ಅಂತರಿಕ್ಷ ಮಾರ್ಗದಲ್ಲಿ ಮೇಲಕ್ಕೆ ನೆಗೆದು ಹೋಗುತ ಸೂರತೇಜಸ್ಸಿನಿಂದ ತನುಕಾಂತಿ ಗುಂದದಿರ ಲು ದೇವೇಂದ್ರನು ಅತ್ಯಂತ ಕೋಪದಿಂದ ತನ್ನ ವಜ್ರಾಯುಧದಿಂದ ನಿನ್ನನ್ನು ಹೊಡೆದನು; ಆ ಆಯುಧವು ನಿನ್ನ ಮುಸುಳನ ವಾಮಭಾಗದಲ್ಲಿ ತಾಕಿ ಹೊಕ್ಕು ಹೋಯಿತು ; ಆದ್ದರಿಂದ ನಿನಗೆ ಹನುಮಂತನು ಎಂಬ ಪ್ರಸಿದ್ದವಾದ ಹೆಸರುಂಟಾಯಿತು ! ಆಮೇಲೆ ನಿನ್ನ ತಂದೆಯಾದ ವಾಯುದೇವನು ಭಯಪಡೆದ ನಿನ್ನನ್ನು ಕಂಡು ಅತ್ಯಂತ ದುಃಖ ಪಟ್ಟು ಕೋಪಯುಕ್ತನಾಗಿ ಸಮಸ್ತ ಪ್ರಾಣಿಗಳಲ್ಲಿಯೂ ವಾಯುವು ಸಂಚರಿಸದಂತೆ ಮಾಡಲು ಇಂದ್ರಾದಿ ಸಮಸ್ಯೆ ದೇವತೆಗಳೂ ಚೈತನ್ಯಗುಂದಿದ ಪ೯ಣಿಸಮೂಹಗಳು ಕಂಗೆಟ್ಟಿದ್ದನ್ನು ನೋಡಿ ನಿನ್ನ ತಂದೆಯಾದ ವಾಯುದೇವ ನನ್ನು ಸಂತವಿಟ್ಟರು ; ಆಗ ಬ್ರಹ್ಮದೇವನು ನಿನಗೆ ಶಸ್ತ್ರಾಸ್ತ್ರಗಳಿಂದ ಮರಣವಿಲ್ಲದಹಾಗೆ ವರವನ್ನು ಕೊಟ್ಟನು; ನಿನ್ನ ಮೇಲೆ ವಜ್ರಾಯುಧವನ್ನು ಪ್ರಯೋಗಿಸಿ ಅದರಿಂದ ಇಂದ್ರನು ಘಾಯವಡೆಯದಿದ್ದ ನಿನ್ನ ಶರೀರವನ್ನು ಕಂಡು ಸುಪ್ರೀತನಾಗಿ ನಿನಗೆ ಸ್ನೇಚ್ಛಾಮರಣವಲ್ಲದೆ ಮತ್ತೊಂದರಿಂದ ಮರಣವಿಲ್ಲದಹಾಗೆ ವರವನ್ನು ಕೊಟ್ಟನು! ನೀನು ಕೇಸರಿಯೆಂಬ ಕಏರಾಜನಿಗೆ ಕ್ಷೇತ್ರಜಕುಮಾರನು ; ವಾಯುವಿನ ಅಂಶಪುತ್ರನು ; ಆದ್ದರಿಂದ ನೀನು ಸಮುದ್ರಾದಿ ಗಳನ್ನು ದಾಟುವಲ್ಲಿ ವಾಯುವಿಗೆ ಸಮಾನವಾದ ವೇಗವುಳ್ಳವನು ; ಈಗ ನಾನು ವೃದ್ದಾಪ್ಯವಸ್ಥೆಯನ್ನು ಪಡೆದು ಸತ್ವಗುಂದಿ ಬಲಹೀನನಾಗಿದ್ದೇನೆ ; ನೀನು ಸರ್ವಗುಣಸಂಪನ್ನನು ; ಈ ಕಪಿನಾಯಕರಲ್ಲಿ ಈ ಸಮುದ್ರವನ್ನು ದಾಟಿ ಹೋಗುವದಕ್ಕೆ ನೀನೇ ಸಮರ್ಥನು; ನಾನು ನಾರಾಯಣನ ತ್ರಿವಿಕ್ರಮಾವತಾರಕಾಲದಲ್ಲಿ ಈ ಭೂಮಿಯನ್ನು ಏಳುಬಾರಿ ಪ್ರದಕ್ಷಿಣಮಾಡಿದೆನು ; ಅಲ್ಲಲ್ಲಿ ಸರ್ವಶಾಂತರಗಳಲ್ಲಿದ್ದ ಔಷಧಿಗಳನ್ನು ತಂದುಕೊಟ್ಟು ದೇವತೆಗಳ ಕೈ ಯಲ್ಲಿ ಕ್ಷೀರಸಮುದ್ರವನ್ನು ಮಥನವಾಡಿಸಿದೆನು ; ಈಗ ನನಗೆ ಅಂಥಾ ಸಾಮರ್ಥ್ಯವಿಲ್ಲ; ಈ ಕಪಿಸೇನೆಯು ನಿನ್ನ ಸಾಮರ್ಥ್ಯವನ್ನು ನೋಡಬೇಕೆಂದು ಮಹಾ ಲವಲವಿಕೆಯುಳ್ಳವರಾಗಿದ್ದಾರೆ ! ಎಲೈ ಹನುಮಂತನೆ ಏಳು ; ನಿನ್ನ ಶರೀರವನ್ನು ಬೆಳಸಿ ಈ ಸಮುದ್ರವನ್ನು ದಾಟು ; ಸಮಸ್ತ ಪ್ರಾಣಿಗಳಿಗೂ ನೀನೇ ಗತಿ ; ಈ ಕವಿನಾಯಕರೆಲ್ಲರೂ ಕಂಗೆಡಿಕೆಯುಂಟಾಗಿದ್ದಾರೆ; ನೀನು ಯಾವ ಕಾರಣ ಉಪೇಕ್ಷೆಮಾಡುತ್ತಿದ್ದೀ! ನಾರಾಯಣನು ತ್ರಿವಿಕ್ರಮಾವತಾ ರದಲ್ಲಿ ಭೂಮಂಡಲವನ್ನು ತನ್ನ ಪಾದದೊಳಗೆ ಅಡಕಮಾಡಿಕೊಂಡಂತೆ ನೀನು ಈ ಸಮುದ್ರವನ್ನು ನರುಗಾ ವುದದಾರಿ ಪರ್ಯ೦ತರ ನಿನ್ನ ಪಾದದೊಳಗೆ ಅಡಕಮಾಡಿಕೊ ಎಂದು ನುಡಿದನು. ಆ ಮಾತನ್ನು ಕೇಳಿ ಹನುಮಂತನು ಅತಿ ಹರ್ಷದಿಂದ ಉಬ್ಬಿ ಸಮಸ್ಯೆ ಕಪಿಸೇನೆಗೂ ಸಂತೋಷವುಂಟು ಮಾಡುತ ಆಕಾಶಕ್ಕೂ ಭೂಮಿಗೂ ಕೀಲಿಟ್ಟಂತೆ ವಿರಾಡ್ರಪನಹಾಗೆ ಬೆಳೆದನು.