ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ MMMMMMMMM ಸವಿಾಪಕ್ಕೆ ಹೋಗಿ ಪಾಕಿಯಿಂದಿಳಿದು ಆತನನ್ನು ಕಾಣಿಸಿಕೊಂಡು ಸಮಸ್ತ ಕವಿನಾಯಕರೂ ಕೈಮುಗಿದು ಕಂಡಿರಲು ಸಾಏಾಂಗವಾಗಿ ಎರಗಿದನು ; ಮಹತ್ತಾದ ತಟಾಕದಲ್ಲಿ ತಾವರೇ ಮೊಗ್ಗುಗಳು ಅಟ್ಟಣಿಸಿರುವಂತೆ ಒಪ್ಪುತಿದ್ದ ಆ ಕಪಿಸೇನೆಯನ್ನು ಕಂಡು ಶ್ರೀರಾಮನು ಅತ್ಯಂತ ಪ್ರೀತಿಯುಳ್ಳವನಾಗಿ ಸುಗ್ರೀವನನ್ನು ತನ್ನ ಹಸ್ತ ಗಳಿಂದ ಹಿಡಿದೆತ್ತಿ ತೋಳುಗಳಿಂದ ತಬ್ಬಿಕೊಂಡು ಕುಳ್ಳಿರಿಸಿ ಆತನನ್ನು ಕುರಿತು “ ಎಲೈ ಸುಗ್ರೀವನೆ, ಲೋಕ ದಲ್ಲಿ ಯಾವನೊಬ್ಬನು ಅರ್ಥವನ್ನು ಸಂಪಾದಿಸುವ ಕಾಲದಲ್ಲಿ ಧರ್ಮ ಕಾಮಗಳಿಗೆ ವಿರುದ್ಧ ವಿಲ್ಲದಹಾಗೂ ಧರ್ಮವ ನ್ನು ಸಂಪಾದಿಸುವ ಕಾಲದಲ್ಲಿ ಅರ್ಥಕಾವಗಳಿಗೆ ವಿರುದ್ಧ ವಿಲ್ಲದಹಾಗೂ ಕಾಮವನ್ನು ಸಂಪಾದಿಸುವ ಕಾಲದಲ್ಲಿ ಧ ರ್ಮಾರ್ಥಗಳಿಗೆ ವಿರುದ್ಧ ವಿಲ್ಲದಹಾಗೂ ಆ ಪುರುಷಾರ್ಥಗಳನ್ನು ಸಂಪಾದಿಸುವನೋ ಆತನೇ ಲೋಕನಾಯಕನಾ ಗುವನು; ಹಾಗಲ್ಲದೆ ಧರ್ಮಾರ್ಥ ಗಳನ್ನು ಕಡಿಸಿ ಕಾಮವನ್ನು ಸಂಪಾದಿಸುವವನು ವೃಕ್ಷದ ಭಾಗದಲ್ಲಿ ಮುರಿದು ಮಲಗಿದ್ದ ಮೇಲೆ ಎಚ್ಚೆತವನಂತೆ ವ್ಯರ್ಥವಾಗುವನು ; ಮಿತ್ರಸಂಗ್ರಹಮಾಡಿಕೊಂಡು ಶತ್ರುಗಳನ್ನು ನಿಗ್ರಹಿಸಿ ಧರ್ಮಾರ್ಥಕಾಮಗಳೆಂಬ ಪುರುಷಾರ್ಥತ್ರಯವನ್ನು ಕಲವರಿತು ಸಂಪಾದಿಸುವ ಪುರುಷನು ಧರ್ಮದಿಂದ ಬಿಡು ಗಡೆಯ ದದೆ ಸುಖವಾಗಿರುವನು! ಎಲೈ ಸುಗ್ರೀವನೆ, ಈಗ ದಂಡಯಾತ್ರೆ ಹೊರಡುವ ಸಮಯವು ; ನೀನು ನಿನ್ನ ಮಂತ್ರಿಗಳ ಕೂಡೆ ಯೋಚನೆಯನ್ನು ಮಾಡಿ ಸನ್ನ ನಗು ಎಂದು ನುಡಿದನು. ಸುಗ್ರೀವನು ಶ್ರೀರಾಮನನ್ನು ಕುರಿತು ಎಲೈ ಶ್ರೀರಾಮನೆ, ನಾನು ನಮ್ಮವಾದ ರಾಜ್ಯ ಐಶ್ಚಈ ಕೀರ್ತಿ ಗಳನ್ನು ನಿನ್ನ ಕೃಪೆಯಿಂದ ತಿರಿಗಿ ಪಡೆದೆನು ; ಲೋಕದಲ್ಲಿ ಪರರು ಮಾಡಿದ ಉಪಕಾರವನ್ನು ಮರೆತವನೇ ಪುರು ಪ್ರಾಧವನು ; ಭೂಮಂಡಲದಲ್ಲಿ ಬಲವಂತವಾಗಿರುವ ಸಕಲ ಕರಡಿಗಳು ಮುಸುವುಗಳು ಕಪಿಗಳು ಮೊದಲಾದವ ನ್ನೂ ಕರೆದುಕೊಂಡು ಬಂದಿರುವ ಈ ಕಪಿನಾಯಕರು ಬಡವರಲ್ಲ; ಇವರೆಲ್ಲರು ಮಹಾ ಬಲವಂತರು ; ತಮ್ಮ ತನ್ನ ಸೇನೆಗಳನ್ನು ಕೂಡಿಕೊಂಡು ಬಂದಿದ್ದಾರೆ; ಈ ಕವಿನಾಯಕರ ಸೇನೆಗಳು ಹತ್ತು ಸಾವಿರ ಶಂಖಗಳು; ಮಿಕ್ಕ ಕಪಿಗಳ ಲೆಕ್ಕವನ್ನು ತಿಳಿಯಲಾಗದು ; ಈ ಕಪಿಗಳನ್ನು ಸೇನಾರಚನೆಯಾಗಿ ನಿಲ್ಲಿಸಿದರೆ ಸಮುದ್ರ ಪರ್ಯ೦ ತರವಾದ ಭೂಮಿಯು ಸಾಲದು ; ಇವರು ಮೇಘಗಳಗೂ ಪರ್ವತಗಳಿಗೂ ಸಮಾನವಾದ ಆಕಾರವುಳ್ಳವರಾದರೂ ಕಾಮರೂಪಿಗಳಾದಕಾರಣ ಸೂಕ್ಷ್ಮರೂಪಿಗಳಾಗಿ ಅಡಕವಾಗಿದ್ದಾರೆ; ಇವರೆಲ್ಲರೂ ವಿಂಧ್ಯಪರ್ವತ ಮಹಾಮೇರು ಪರ್ವತ ಮೊದಲಾದ ಸ್ಥಾನಗಳಿಂದ ಬಂದಿದ್ದಾರೆ; ಇವರನ್ನು ಲೆಕ್ಕ ಮಾಡುವದಕ್ಕೆ ಕೂಡದು ; ಇವರೆಲ್ಲರು ನಿನಗೆ ಸಹಾಯವಾಗಿ ಬಂದು ನಿನ್ನ ಶತವಾದ ರಾವಣನನ್ನು ಆತನ ಪರಿವಾರ ಸಹಿತವಾಗಿ ಸಂಹರಿಸಿ ಸೀತಾದೇವಿಯನ್ನು ಕರೆದುಕೊಂಡು ಬರುವರು” ಎಂದು ನುಡಿದನು. ಆ ಮಾತನ್ನು ಕೇಳಿ ಶ್ರೀರಾಮನು ಅತಿ ಹರ್ಷಯುಕ್ತನಾಗಿ ಸುಗ್ರೀವನನ್ನು ಸನ್ಮಾನಿಸಿ ಮುಂದಣ ಕಾರ್ ಸ್ಥಿತಿಗೆ ತಕ್ಕ ಯೋಚನೆಯನ್ನು ಮಾಡುತ್ತಿದ್ದನು. - ೩೯ ನೆ ಅ ಧ್ಯಾಯ ,

  • ಪಿ ಸ ನ ಗ ಳು ಬ೦ದ ದ್ದು , ಆ ಬಳಿಕ ಶ್ರೀರಾಮನು ಕೈಮುಗಿದುಕೊಂಡು ನಿಂತಿದ್ದ ಸುಗ್ರೀವನನ್ನು ತೋಳುಗಳಿಂದ ತಬ್ಬಿಕೊಂಡು ಅತಿ ವಿನಯದಿಂದ “ ಎಲೈ ಸುಗ್ರೀವನೆ, ದೇವೇಂದ್ರನು ಮಳೆಗರೆಯುವದೂ ಸರೀನು ತನ್ನ ಪ್ರಭೆಯಿಂದ ಅಂತರಿ ಕ್ಷಮಾರ್ಗವನ್ನು ಬೆಳಕುಮಾಡುವದೂ ಚಂದ್ರನ ಬೆಳದಿಂಗಳಿಂದ ರಾತ್ರಿಯ ಅಂಧಕಾರವನ್ನು ತೊಲಗಿಸಿ ನಿರ್ಮ ಲವಾಗಿ ಮಾಡುವ ಸ್ವಭಾವವಲ್ಲದೆ ಆಶ್ಚರ್ಯವಲ್ಲ; ಹಾಗೆ ನೀನು ಮಿತ್ರಕಾರವನ್ನು ಸಾಧ್ಯವಾಡಿಕೊಟ್ಟು ಪ್ರತ್ಯುಪಕಾರವನ್ನು ಮಾಡಿಸುವದು ಆಶ್ಚರ್ಯವಲ್ಲ ! ಎಲೈ ಸುಗ್ರೀವನೆ, ನೀನು ಯಾವಾಗಲೂ ಪ್ರಿಯಾಮಿಯೆಂಬ