________________
vk ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, ನಿಸಿಕೊಂಡನು; ಆತನು ತನ್ನ ಸಾಮಾರ್ಥ್ಯದಿಂದ ಈ ವನವನ್ನು ನಿರ್ಮಿಸಿದನಲ್ಲದೆ ಉಳಿದ ದಾನವರಹಾಗೆ ಬ್ರಹ್ಮ ದೇವರನ್ನು ಕುರಿತು ತಪಸ್ಸು ಮಾಡಿ ಇಂಥಾ ಸದ್ದತಿಯನ್ನು ಕೊಡುವಂಥ ಅರಮನೆಯನ್ನು ನಿರ್ಮಿಸಲಿಲ್ಲ; ಆತನು ಅಂತ ಮನೋಹರವಾದ ಈ ವನವನ್ನ ಅರಮನೆಯನ್ನೂ ನಿರ್ಮಿಸಿ ಅಲ್ಲಿ ಹೇಮಾಯೆ ಎಂಬ ಆಪ್ಪರ ಯೊಡನೆ ರಮಿಸಿಕೊಂಡು ಕೆಲವುಕಾಲವಿಗ್ಗನು; ಆಮೇಲೆ ಆತನ ಸಂಪತ್ತನ್ನು ಸಹಿಸಲಾರರೆ ದೇವೇಂದ್ರನು ತನ್ನ ಸಿಡಿಲಾಯುಧವನ್ನು ತೆಗೆದುಕೊಂಡು ಆತನನ್ನು ಕೊಂದನು ; ಆಗ ಬ್ರಹ್ಮದೇವನು ಹೇಮಾಯೆ ಎಂಬ ಅಪ್ಪರ ಸ್ತ್ರೀಗೆ ಸುವರ್ಣಮಯವಾದ ಈ ಗೃಹವನ್ನ ದಿವ್ಯವಾದ ಭೋಗವನ್ನೂ ಕೊಟ್ಟನು ; ನಾನು ಮಹಾಮೇರು ಪರ್ವತದಲ್ಲಿರುವ ಮೇರುಸುವರ್ಣ ಎಂಬ ಖಮೀರನ ಮಗಳು ; ನನ್ನ ಹೆಸರು ಸ್ವಯಂಪ್ರಭೆಯು ; ನಾನು ಹೇಮಾಯೆಯ ಮನೆಯನ್ನು ಕಾದುಕೊಂಡಿದ್ದೇನೆ ; ಆ ದೇವರು ನನ್ನ ಪ್ರಿಯಸಖಿಯ ನೃತ್ಯಗೀತಗಳಲ್ಲಿ ಮಹಾ ಥೆ ಯ ಆಗಿರುವದಲ್ಲದೆ ಆಕೆಯು ನನಗೆ ವರವನ್ನೂ ಕೊಟ್ಟಳಾದಕಾರಣ ನಾನು ಈ ಮನೆಯನ್ನು ಕಾದುಕೊಂಡಿದ್ದೇನೆ ! ಎಲೈ ಕಪೀಶ್ವರನೆ, ನೀನು ಇಲ್ಲಿಗೆ ಬಂದ ಕಾರಣವೇನು ? ನಿನ್ನ ಕಾಲ್ಬವೇನು ? ಈ ವನವ ನ್ನು ನೀವು ಹಾಗೆ ಕಂಡಿರಿ ! ಈ ವನವನ್ನು ಹೊಕ್ಕು ಬರುವದು ಪ್ರಾಣಿಗಳಿಗೆ ದುರ್ಘಟವಾಗಿರುವದು ; ಯಾವ ಪ್ರಕಾರದಿಂದಾದರೂ ನೀವು ಬಂದದ್ದು ಒಳ್ಳೆದಾಯಿತು ; ನೀವು ಶುಚಿಯಾಗಿ ದಿವ್ಯಗಂಧವುಳ ಕಂದಮೂಲ ಫಲಗ ಳನ್ನು ಆಹಾರಮಾಡಿ ಅಮೃತೋಪಮಾನವಾದ ಉದಕವನ್ನು ಪಾನಮಾಡಿ ದಾರೀ ಬಳಲಿಕೆಯನ್ನು ಪರಿಹಾರವಾಗಿ ಕೊಂಡು ನೀವು ಬಂದ ವೃತ್ತಾಂತವನ್ನು ಸವಿಸ್ತಾರವಾಗಿ ಹೇಳಿ ?” ಅಂದಳು. ೫೦ ನೆ ಅ ಧ್ಯಾ ಯ . ಸ್ಮ ಯ ೦ – ಭ ಯು ಹ ನು ಮ೦ ತಾ ದಿ ಗ ಳ ಬಿ ದಿ೦ದ ಹೊರ ಗೆ ತ೦ದು ಬಿ ಟ್ಟಿ ದ್ದು. ಈ ಮುರಾದೆಯಲ್ಲಿ ನುಡಿದು ಧರ್ಮರಹಸ್ಯವನ್ನು ಎಲ್ಲ ಸ್ವಯಂಪ್ರಭೆಯು ಆ ಕವಿನಾಯಕರು ಫಲಹಾರ ವನ್ನು ಮಾಡಿದ ಬಳಿಕ ಅವರನ್ನು ಕುರಿತು ಈ ಎಲೆ, ಕಪಿನಾಯಕರುಗಳಿರಾ, ನಿಮ್ಮ ಬಳಲಿಕೆಯು ಪರಿಹಾರವಾದ ಪಕ್ಷದಲ್ಲಿ ನೀವು ಬಂದ ವೃತ್ತಾಂತವನ್ನು ಸವಿಸ್ತಾರವಾಗಿ ಹೇಳಬೇಕೆಂದು ನನ್ನ ಮನಸ್ಸಿನಲ್ಲಿ ಮಹಾಲವಲವಿಕೆಯಾ ಗಿದೆ ; ನಿಮ್ಮ ಕಾರ್ಯಸ್ಥಿತಿಯನ್ನು ಸವಿಸ್ತಾರವಾಗಿ ಹೇಳಿ ” ಅಂದಳು. ಆ ಮಾತನ್ನು ಕೇಳಿ ಹನುಮಂತನು ಆಕೆಯನ್ನು ಕುರಿತು ತಮ್ಮ ವೃತ್ತಾಂತವನ್ನು ಹೇಳುತ ಈ ಎಲೆ ಸ್ನ ಯಂಪ್ರಭೆಯೇ ಕೇಳು : ಸಮಸ್ತ ಲೋಕಕ್ಕೂ ಒಡೆಯನಾಗಿ ದೇವೇಂದ್ರ ವರುಣರಿಗೆ ಸಮಾನನಾಗಿ ಅತ್ಯಂತ ಐ ಕೈರ್ಯವಂತನಾದ ಶ್ರೀರಾಮನು ತನ್ನ ತಮ್ಮನಾದ ಆಕ್ಷಣನನ್ನೂ ತನ್ನ ಪಟ್ಟದ ರಾಣಿಯಾದ ಸೀತಾದೇವಿಯ ನ್ನೂ ಕರೆದುಕೊಂಡು ದಂಡಕಾರಣ್ಯಕ್ಕೆ ಬಂದನು ; ಆ ಅರಣ್ಯದಲ್ಲಿರುವ ಜನಸ್ಥಾನದಲ್ಲಿ ಆತನ ಸ್ತ್ರೀಯಾದ ನೀ ತಾದೇವಿಯನ್ನು ಮೋಸದಿಂದ ರಾವಣನು ಅಪಹರಿಸಿಕೊಂಡು ಹೋದನು ; ನಾವೆಲ್ಲರೂ ಆ ದೇವಿಯನ್ನ ರಸಿಕಂ ಡು ಬಂದು ಈ ತೆಂಕಣದಿಕ್ಕಿನ ಸಮಸ್ಯ ಸ್ಥಾನಗಳಲ್ಲಿಯೂ ಕಾಣದೆ ಹಸಿವು ತೃಪೆಗಳಿಂದ ಕಂಗೆಟ್ಟು ಒಂದು ಮ ರದಡಿಯನ್ನು ಸೇರಿ ನೀತಾದೇವಿಯನ್ನು ಕಾಣದ್ದರಿಂದ ಚಿಂತಾಸಮುದ್ರದಲ್ಲಿ ಮುಳುಗಿ ಮುಖಕಾಂತಿ ಗುಂದಿ ಧಸ್ಥಿ ನಮಾಡುತ ನಾನಾದಿಕ್ಕುಗಳನ್ನ ನೋಡುತ ಈ ಬಿಲದ್ವಾರವನ್ನು ಕಂಡೆವು ; ಈ ಬಿಲದ್ವಾರವು ಅನೇಕ ವೃಕ್ಷ ಗಳಿಂದಲೂ ಬಳ್ಳಿಗಳಿಂದಲೂ ಕೌಟಿಕೊಂಡು ಅಂಧಕಾರವು ಕವಿಯಲ್ಪಟ್ಟಿತ್ತು ; ಈ ಗುಹೆಯ ಬಾಗಲಿಂದ ಹಂಸ ಚಕ್ರವಾಕ ಸರಸ ಕಳರ್ವಕ್ಕೆ ಮೊದಲಾದ ಪಕ್ಷಿಗಳು ಗರಿನೆನೆದು ಬರುತ್ತಿರಲು ಅವುಗಳನ್ನು ಕಂಡು ಈ ಬಿಲ ದಲ್ಲಿ ಉದಕವಿರಬಹುದೆಂದೆಣಿಸಿ ನಾವು ಈ ಬಿಲವನ್ನು ಹೊಕ್ಕು ಅಂಧಕಾರದಲ್ಲಿ ಬಿದ್ದು ಒಬ್ಬರನ್ನೊಬ್ಬರು ಕೈಗಳ ೩ಡಿದುಕೊಂಡು ಅತಿ ಪ್ರಯಾಸದಿಂದ ಈ ಸ್ವಯಂಪಕಾಶದೇಶಕ್ಕೆ ಬಂದು ಧರ್ಮ ಸ್ವರೂಪಳಾದ ನಿನ್ನನ್ನು