ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-ಗ್ರಂಥಪಶಸ್ತಿ ಸಂಸ್ಕೃತ ಸಹಾಯವಿಲ್ಲದೆ ಕನ್ನಡದಲ್ಲಿ ಕಾವ್ಯವನ್ನು ರಚಿಸುವದು ಆಸಾ ಧ್ಯವೆಂದೂ ಆದುದರಿಂದಲೇ ಪಂಪನೇ ಮೊದಲಾದ ಮಹಾಕವಿಗಳು ಮಿಶ್ರಭಾ ಷೆಯಲ್ಲಿ ಕಾವ್ಯವನ್ನು ಬರೆದರೆಂದೂ ಕೆಲವರು ಆಕ್ಷೇಪಿಸಿದಂತೆಯೂ, ಅದು ಸಾ ಧ್ಯವೆಂದು ತೋರಿಸಲು ಈ ಗ್ರಂಧವನ್ನು ಈ ಕವಿಯು ರಚಿಸಿದಂತೆಯೂ ಪ್ರವಾ ದವಿದೆ. ಅದರಂತೆಯೇ ಈ ಗ್ರಂಧವು ಸಂಸ್ಕೃತಪದಗಳ ಮಿಶ್ರವಿಲ್ಲದೆ ದೇಶ್ಯ ಪದ ಗಳಿಂದಲೂ, ತದ್ಭವ ಪದಗಳಿಂದಲೂ ವಿರಚಿತವಾಗಿದೆ. ಈ ಗ್ರಂಧಕ್ಕೆ “ಕಬ್ಬಿ ಗರಕಾವ” “ಮದನವಿಜಯ,” ಕಾವನ ಗೆಲ್ಲ” “ಸೊಬಗಿನ ಸುಗ್ಗಿ” ಎಂಬ ಹೆಸ ರುಗಳುಂಟು. ಇದರಲ್ಲಿ ಮನ್ಮಥನ ವಿಜಯವನ್ನು ವಣರ್ಿಸುವದರಿಂದ “ಮದ ನವಿಜಯ” ಅಥವಾ “ಕಾವನ ಗೆಲ್ಲ” ವೆಂದೂ, ಕವಿಗಳ ಮೇಲೆ ಬಂದ ಅಪವಾ ದವು ಇದರಿಂದ ಹೋದುದರಿಂದ “ಕಬ್ಬಿಗರಕಾವ” (ಅಂದರೆ ಕವಿಗಳ ರಕ್ಷಕ) ಎಂದೂ, ಬಹಳ ರಮ್ಯವಾಗಿರುವದರಿಂದ “ಸೊಬಗಿನ ಸುಗ್ಗಿ”ಯೆಂದೂ ಹೆಸರು ಬಂದಿರಬಹುದು, ಉದಯಾದಿತ್ಯಾಲಂಕಾರದಲ್ಲಿ ಹೇಳಿರುವ “ಗದ್ಯದ ಪದ್ಯದ ಮಿಶ್ರದೆ! ಹೃ –ಂಚಂಪೂಸಮಾಖ್ಯಕಾವ್ಯಂ* ಎಂಬ ಲಕ್ಷಣಕ್ಕೆ ಅನುಸಾರವಾಗಿರುವದರಿಂದ, ಇದು ಚಂಪೂಪ್ರಬಂಧ. ಇದರಲ್ಲಿ ಆಶ್ವಾಸ ವಿಭಾಗವಿಲ್ಲ. ಈ ಗ್ರಂಧದ ೩೧೮ನೆಯ ಪದ್ಯವು ಶಬ್ದಾನುಶಾ ಸನದಲ್ಲಿಯೂ, ೧೪, ೨೨, ೨೪, ೩೫, ೪೨, ೯೮ ನೆಯ ಪದ್ಯಗಳು ಅಭಿನವವಾ ದಿ ವಿದ್ಯಾನಂದನ ಕಾವ್ಯಸಾರದಲ್ಲಿಯೂ ಉದಾಹರಿಸಿವೆ.