ಈ ಪುಟವನ್ನು ಪರಿಶೀಲಿಸಲಾಗಿದೆ

ಭೂಮಿಕೆ

ವಂಶೋಪನ್ಯಾಸ ಸೃಷ್ಟಿಯಲ್ಲಿ ವಿಶೇಷವಾದ ಯಶಸ್ಸನ್ನು ಸಂಪಾದಿಸಿಕೊಂಡಿರುವ, ಬಾಬೂ ತಾರಕನಾಧವಿಶ್ವಾರವರ ಗ್ರಂಥಗಳಲ್ಲಿ ಸ್ವತ್ವಾಧಿಕಾರವನ್ನುಳ್ಳವರಿಂದ ಅನುಮತಿಯನ್ನು ಪಡೆದು ಕೊಂಡು, "ಕಮಲಕುಮಾರಿ"ಯನ್ನು ಅನುವಾದಿಸಿ ಇದೀಗಲೇ ಪ್ರಚುರಗೊಳಿಸಿದುದಾಯ್ತು. ಈ ಗ್ರಂಥದಲ್ಲಿ ಜಹಾಂಗೀರ, ಮಾನಸಿಂಹ ಪ್ರಕೃತಿಗಳ ಗುಣದೋಷಗಳೂ ಪರಸ್ಪರೋದ್ದೇಶ ಸಾಧನೆಗಳ ಯುಕ್ತಿಕುಯುಕ್ತಿಗಳೂ, ಇತಿಹಾಸನಾಯಕರಾದವರ ಯೋಗ್ಯತಾನುಸಾರವಾಗಿಯೇ, ವರ್ಣಿತವಾಗಿವೆ. ಪ್ರಣಯ ಪಿಪಾಸಾತುರರಾದ ಸ್ತ್ರೀಪುರುಷ ಜೀವನವು ಅಗೆಂತು ಕೊನೆಗಾಣಬಹುದೆಂಬುದು ಈ ಪುಸ್ತಕದಲ್ಲಿ ಸೃಷ್ಟಿಕರಿಸಲ್ಪಟ್ಟಿದೆ.

ಗ್ರಂಥವು, ಕಾರ್ಯಬಾಹುಲ್ಯದಿಂದ ಇದಕ್ಕೆ ಮೊದಲಾಗಿಯೇ ಪ್ರಕಟಿಸಲಾರದಾಯ್ತು. ಆದರೂ ಕಾದಂಬರಿಗಳ ಮಾಲೆಯಲ್ಲಿ ಪೋಣಿಸಲ್ಪಡುವ ಅಮೋಘವಾದ ಪುಷ್ಪಗಳಲ್ಲಿ ಇದೊಂದಾಗಿ ಪರಿಗಣಿಸಲ್ಪಟ್ಟುದಕ್ಕೆ, ಆ ಮಾಲೆಯ ಸಂಪಾದಕರಿಗೆ ಕಮಲಕುಮಾರಿಯು ಚಿರ ಕೃತಜ್ಞಳಾಗಿರುವಳು. ಪಾಠಕಮಹಾಶಯರ ಉದಾರಹಸ್ತವು; ಕಮಲಕುಮಾರಿಯನ್ನು ಇದಕ್ಕೆ ಮೊದಲಿನ ಗ್ರಂಥಗಳನ್ನಾದರಿಸಿದಂತೆಯೇ ಪಾಲಿಸುವುದೆಂದು ಭರವಸೆ ಇದೆ.

ರಾಕ್ಷಸ ಜ್ಯೇಷ್ಠ,
ಬಂಟವಾಳ.
M. N. KAMATH.