________________
ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ ೯. ವರ್ಗಗಳು ಪರಸ್ಪರ ಕಾದಾಡುವ ಪ್ರಮೇಯ ಬಂದಿತು ಈ ಸಮಯದಲ್ಲಿ ನೈಜ ಮಾರ್ಕ್ಸ್ ವಾದಿಗಳು ಕಾರ್ಮಿಕವರ್ಗವನ್ನು ಎಚ್ಚರಿಸಿ ಯುದ್ಧವನ್ನು ಬಹಿಷ್ಕರಿಸುವಂತೆಯೂ ಯುದ್ಧಕ್ಕೆ ಕಾರಣವಾದ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ಮೂಲೋತ್ಪಾಟನೆ ಮಾಡುವಂತೆಯೂ ಕರೆಯಿತ್ತರು. ಆದರೆ ಸುಧಾರಣಾ ಸಮಾಜವಾದಿಗಳ (Reformists) ಮಾರ್ಗವೇ ಬೇರೆಯಾಗಿತ್ತು. ಬಂಡವಾಳವರ್ಗದ ಯುದ್ದ ಸಿದ್ಧತೆಗೆ ಸಹಾಯಮಾಡಲು ನಿಂತರು. ಯುದ್ಧವನ್ನು ತಾಯ್ಯಾಡಿನ ಸಂರಕ್ಷಣಾ ಯುದ್ಧವೆಂದು ಬೊಬ್ಬೆ ಇಟ್ಟರು, ಕಾರ್ಮಿಕವರ್ಗಕ್ಕೆ ದ್ರೋಹಬಗೆಯುವ ಸುಧಾರಣಾತ ದಿಂದಲೂ ಮತ್ತು ಸಮಯಸಾಧಕ ಮುಂದಾಳುಗಳಿಂದಲೂ ಕಾರ್ಮಿಕವರ್ಗ ಒಡೆದು ಚೂರು ಚೂರಾಯಿತು. ಒಂದು ದೇಶದ ಕಾರ್ಮಿಕ ವರ್ಗದ ಮೇಲೆ ಇನ್ನೊಂದು ದೇಶದ ಕಾರ್ಮಿಕವರ್ಗ ಯುದ್ದಕ್ಕೆ ನಿಂತಿತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಷ್ಯಾ ದೇಶದ ಕಾರ್ಮಿಕ ಮುಖಂಡನೂ ಆಜನ್ಮ ಕ್ರಾಂತಿಕಾರಿಯೂ ಆದ ಲೆನಿನ್ನನ ವಾಣಿ ಕೇಳ ಬಂದಿತು, 1 ಸುಧಾರಕ ಕಾರ್ಮಿಕಮುಖಂಡರ ಮುಖಹೇಡಿತನವನ್ನೂ, (1) ಲೆನಿನ್ : (1870-1924)-22 ನೇ ಏಪ್ರಿಲ್ 1870 ರಲ್ಲಿ ರಷ್ಯದ ko ಬ್ರಿಸ್ಟ್ (ಈಗ ಯುನಾಸ್ ಎಂದು ಹೆಸರು) ಎಂಬ ಸ್ಥಳದಲ್ಲಿ ಜನಿಸಿದನು. ಈತನ ತಂದೆ ಇಲ್ಯಾ ನಿಕಲಾ ಯಿಚ್ ಯುನಾನ್, ಸಿಂಬ್ರಿಸ್ಟ್ ಪ್ರಾಂತ್ಯದ ಶಾಲೆಗಳ ಇನ್ಸ್‌ಪೆಕ್ಟರ್ ಆಗಿದ್ದರು, ತನ್ನ ವಿದ್ಯಾರ್ಥಿ ಜೀವನದಲ್ಲೇ ಕ್ರಾಂತಿ ಕಾರೀ ಚಟವಟಿಕೆಗಳ ಮೂಲಕ ಸರ್ಕಾರದ ಗಮನಕ್ಕೆ ಬಂದಿದ್ದನು. ಈತನ ಅಣ್ಣ ಕ್ರಾಂತಿಕಾರಕ ಚಟವಟಕೆಗಳಿಗಾಗಿ ಗಲ್ಲಿಗೇರಿಸಲ್ಪಟ್ಟ ಧ್ವನು, ಲೆನಿನ್ ಕೆಲವು ಕಾಲ ವಕೀಲವೃತ್ತಿಯಲ್ಲಿದ್ದು, ತರುವಾಯ ಪೀಟರ್ ಬಡ್ಸ್ ನಗರದಲ್ಲಿದ್ದ ಮಾರ್ಕ್ಸ್‌ವಾದೀ ಕಾರ್ಮಿಕರ ಗುಂಪನ್ನು ಸೇರಿದನು. ರಷ್ಯನ್ ಕಾರ್ಮಿಕರ ಮುಕ್ತಿಯನ್ನು ಮಾರ್ಕ್ ರತ್ನದಲ್ಲಿ ಕಂಡನು, ಮಾರ್ಕ್ ತತ್ತ್ವವನ್ನು ರಷ್ಯಾದ ಪರಿಸ್ಥಿತಿಗೆ ಅನ್ವಯವಾಡಿ, ರಷ್ಯಾದ ಕಾರ್ಮಿಕರು ಕೈಗೊಳ್ಳ ಬೇಕಾದ ಪಥವನ್ನು ಸೂಚಿಸಿದನು. ಈತನ ನೇತೃತ್ವದಲ್ಲಿ ಒಂದುಗೂಡಿದ ಕಾರ್ಮಿಕಪಕ್ಷ ಬಿ ವಿಕ್ಸ್ ಎಂಬ ಹೆಸರು ಪಡೆಯಿತು, ಸ್ವಾಮ್ಮವರ್ಗದ ನೇತೃತ್ವದಲ್ಲಿ ಸಾಂಕುಶ ಪ್ರಭುತ್ವದ ಸ್ಥಾಪನೆಗಾಗಿ ನಡೆಯುವ ಕ್ರಾಂತಿಯಲ್ಲೇ ಕಾರ್ಮಿಕರು ಸಂತೃಪ್ತರಾಗದೆ ಸಮಾಜವಾದೀ ಕ್ರಾಂತಿಯ ಮೂಲಕ ಸಮಾಜವಾದೀ ಸಮಾಜದ ಸ್ಥಾಪನೆಗೆ ಕಾಂತಿಯನ್ನು ಮುಂದುವರಿಸಬೇಕೆಂದು ಕರೆ ಕೊಟ್ಟನು, ಈತನ ನೇತೃತ್ವದಲ್ಲಿ ಕಾರ್ಮಿಕರ ಕ್ರಾಂತಿ ಯಶಸ್ವಿಯಾಯಿತು.