ರಷ್ಯಾದಲ್ಲಿ ಸಮಾಜವಾದ ೯f ಬೇಸಾಯ ಕ್ಷೇತ್ರಗಳಲ್ಲಿ ಒಟ್ಟುಗೂಡಿಸಲು (Co-operative Farm- ing) ಯತ್ನಿ ಸಲಾಯಿತು, ಇದರ ಜೊತೆಗೆ ಸಾಮೂಹಿಕ ಬೇಸಾಯ ಕ್ಷೇತ್ರಗಳನ್ನು (Collective Farming) ನಿರ್ಮಿಸಲಾಯಿತು. ಇದರ ಫಲವಾಗಿ ಮತ್ತು ಉತ್ಪಾದನೆ ಹೆಚ್ಚಿಸಲು ಉಪಯೋಗಿಸಲಾದ ಆಧುನಿಕ ಉಪಕರಣಗಳು, ವಿಜ್ಞಾನ, ಔದ್ಯೋಗಿಕ ಪರಿಶ್ರಮ ಇವುಗಳ ನೆರವಿನಿಂದಲೂ ಕೈಗಾರಿಕಾ ಮತ್ತು ಬೇಸಾಯದ ರಂಗಗಳಲ್ಲಿ ಉತ್ಪಾದನೆ ಹೆಚ್ಚಲಾರಂಭಿಸಿತ್ತು. ಒಟ್ಟಿನಲ್ಲಿ ಆದ ಬದಲಾವಣೆಗಳು ಜನಸಮುದಾಯವನ್ನು ಆಕರ್ಷಿ ಸಿದವು, ಸಮಾಜವಾದೀ ಆರ್ಥಿಕ ವ್ಯವಸ್ಥೆಯ ಮೇಲೆ ಪ್ರದರ್ಶನವಾಯಿತು. ನಿರುದ್ಯೋಗವಿಲ್ಲದಂತಾಯಿತು. ಪ್ರತಿಯೊಬ್ಬನೂ ತನ್ನ ಯೋಗ್ಯತಾನು ಸಾರದ ದುಡಿಮೆಗೆ ತಕ್ಕ ಫಲವನ್ನು ಹೊಂದುವ ಅವಕಾಶವನ್ನು ಕಣ್ಣಾರೆ ಕಂಡನು, ಶೋಷಣೆ, ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ಯಾಮ್ಯ ಲಾಭಕ್ಕಾಗಿ ಉತ್ಪಾದನೆ ಇವುಗಳಿಲ್ಲದಿರುವ ಸುಗಮ ಸಮಾಜವಾದೀ ಆರ್ಥಿಕ ವ್ಯವಸ್ಥೆಯನ್ನು ಜನತೆ ಕಂಡಿತ್ತು. ಸಮಾಜವಾದೀ ಆರ್ಥಿಕ ವ್ಯವಸ್ಥೆಯಲ್ಲಿ ವ್ಯಕ್ತಿಗಳು ತಮ್ಮ ಸ್ಥಾನಮಾನಗಳನ್ನು ವೀಕ್ಷಿಸಿ ನೋಡಿದರು. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿರುವ ಸಮಾನತೆಯ ಜೊತೆಗೆ ಆರ್ಥಿಕ ಕ್ಷೇತ್ರದಲ್ಲೂ ಸಮಾನತೆಯು ಇರುವುದನ್ನು ಕಂಡರು. ಸಮಾಜದ ಉತ್ಪಾ ದನಾ ವಸ್ತುಗಳು ಯಾರಿಗೂ ಸೇರಿರದೆ, ಎಲ್ಲರೂ ಅವುಗಳಿಗೆ ಬಾಧ್ಯರಾಗಿ ರುವುದನ್ನು ಕಂಡರು ಅವರವರ ಮಡಿಮೆಗೆ ತಕ್ಕಂತೆ ಪ್ರತಿಫಲ ಹೊಂದಲು ಮತ್ತು ತಾವುಗಳು ಕೆಲಸ ಮಾಡುವ ಕಾರ್ಖಾನೆ ಮತ್ತು ಬೇಸಾಯ ಕೇಂದ್ರಗಳ ಆಡಳಿತದಲ್ಲಿ ಭಾಗವಹಿಸಲು ಇರುವ ಅವಕಾಶವನ್ನು ಜನರು ಕಂಡರು, ಸಮಾಜವಾದೀ ವ್ಯವಸ್ಥೆ ಸುಗಮವಾಗಿ ಯೋಜನೆಗಳ ಮೂಲಕ ಮುಂದೆ ಸಾಗುತ್ತಿರುವಾಗ ಸಮಾಜವಾದೀ ವ್ಯವಸ್ಥೆಯ ಬಗ್ಗೆ ಕೆಲವು ತಪ್ಪು ಅಭಿಪ್ರಾಯಗಳು ಕಾಣಿಸಿಕೊಂಡವು. ಈ ತಪ್ಪು ಅಭಿಪ್ರಾಯಗಳಿಗೆ ಸಮಾಜಿ ವಾದ ಮನ್ನಣೆ ಇತ್ತಿದೆ ಎಂದೂ ಅಪಪ್ರಚಾರ ನಡೆಯಿತು. ಇಂತಹ ಅಭಿಪ್ರಾಯಗಳಲ್ಲಿ ಸಮಾನತೆಯ ಬಗ್ಗೆ ಬಂದ ತಪ್ಪು ವಿವರಣೆ 'ಬಹು ಮುಖ
ಪುಟ:ಕಮ್ಯೂನಿಸಂ.djvu/೧೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.