od ವೈಜ್ಞಾನಿಕ ಸಮಾಜವಾದ ರಾಜಕೀಯ ಪಕ್ಷಗಳು ತಮ್ಮ ಇರುವಿಕೆಯನ್ನು ಸಮರ್ಥಿಸಿಕೊಂಡಿರುವುದೂ ಮತ್ತು ಬಗೆಹರಿಯದ ಭಿನ್ನಾಭಿಪ್ರಾಯವು ಸಮಾಜದಲ್ಲಿ ಪ್ರವೇಶಿಸಿ ವರ್ಗ ವಿರಸಕ್ಕೆ ಕಾರಣವಾಗಿರುವುದೂ ಅರ್ಥವಾಗುತ್ತದೆ, ಆದರೆ ಈಗ ಕಾರ್ಮಿ ಕರ ಕ್ರಾಂತಿಯು ವಿವಿಧ ರಾಜಕೀಯ ಪಕ್ಷಗಳ ಇರುವಿಕೆಗೆ ಆಧಾರವಾಗಿದ್ದ ಖಾಸಗೀ ಸ್ವಾಮ್ಯವನ್ನು ನಾಶಪಡಿಸಿದೆ, ಮತ್ತು ಹಾಗೆಯೇ ಭಿನ್ನಾಭಿ ಪ್ರಾಯದಲ್ಲಿದ್ದ ಪ್ರತ್ಯೇಕತೆ ಅಥವ ವಿಶೇಷಣತೆಯೂ ಸಹ ನಾಶಹೊಂದಿದೆ. ಎರಡನೆಯದು ಆರ್ಥಿಕ ಸಮಾನತೆ ಇರುವ ವ್ಯವಸ್ಥೆಯಲ್ಲಿ ಬರಬಹು ದಾದ ಭಿನ್ನಾಭಿಪ್ರಾಯಗಳು ಈ ವರ್ಗರಹಿತ ಸಮಾಜ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳಿಗೆ ವಿಶೇಷಣತೆಯಾಗಲೀ ಅಥವಾ ಪ್ರತ್ಯೇಕತೆಯಾಗಲೀ ಇರುವುದಿಲ್ಲ; ವಿಶೇಷಣಕ್ಕೆ ಕಾರಣವಾಗಿದ್ದ ಸ್ವಾಮ್ಯವನ್ನು ನಾಶಪಡಿಸ ಲಾಗಿದೆ. ಸಮಾಜವಾದೀ ವ್ಯವಸ್ಥೆ ವ್ಯಕ್ತಿಗಳಿಗೆ ಆರ್ಥಿಕವಾಗಿ ಸಮಾನ ಸ್ಥಾನಮಾನಗಳನ್ನು ಗಳಿಸಿಕೊಟ್ಟಿದೆ. ಇಂತಹ ವ್ಯವಸ್ಥೆಯಲ್ಲಿ ಸಂಭವಿಸುವ ಭಿನ್ನಾಭಿಪ್ರಾಯಗಳು ಸಾಮಾನ್ಯ ಸ್ವಭಾವದ್ದಾಗಿವೆ. ಆದುದರಿಂದಲೇ ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವನ್ನು ರಕ್ಷಿಸಲು ಇರುವ ವಿವಿಧ ರಾಜಕೀಯ ಪಕ್ಷಗಳಿಗೆ ಸ್ಥಳವಿಲ್ಲ. ಸಂಭವಿಸುವ ಸಾಮಾನ್ಯ ಭಿನ್ನಾಭಿ ಪ್ರಾಯಗಳು ಬಹುಮತದ ತದ ಮೇಲೆ ನಿರ್ಧಾರವಾಗುವುದರಿಂದ, ಅಭಿವೃದ್ಧಿ ಸಾಧಿಸಬೇಕಾಗಿರುವ ರಷ್ಯಾದ ಸಮಾಜವಾದೀ ವ್ಯವಸ್ಥೆಯಲ್ಲಿ ಮುಂದಾಳತ್ವ ವಹಿಸಲು ಕಮ್ಯೂನಿಸ್ಟ್ ಪಕ್ಷಕ್ಕೆ ಮುಂದಾಳು' ಸಮೂಹ ಮಾತ್ರ ಅವಕಾಶವಿದೆ. ಈ ಪಕ್ಷದ ಪ್ರಥಮ ಕರ್ತವ್ಯವೆಂದರೆ ಕ್ರಾಂತಿಯಿಂದ ಲಭಿಸಿರುವ ಸಮಾಜವಾದೀ ವ್ಯವಸ್ಥೆಯನ್ನು ಸಂರಕ್ಷಿಸುವುದು ಮತ್ತು ಸಮಾಜವಾದೀ ವ್ಯವಸ್ಥೆಗೆ ಕುಂದು ತರುವ ಪ್ರತಿಗಾಮಿ ಶಕ್ತಿಗಳನ್ನು (Reactionary forces) ದಮನಮಾಡುವುದು, ಸಮಾಜವಾದೀ ವ್ಯವಸ್ಥೆ ಕ್ರಮೇಣ ಬಲಗೊಂಡ ಹಾಗೆ ಬೇರೂರಿದಹಾಗೆ, ಯಾವ ಪಕ್ಷದ ಆವಶ್ಯಕತೆಯೂ ಇಲ್ಲವಾಗುತ್ತದೆ. ಸಮಾನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಾನಮಾನಗಳನ್ನು ಪಡೆದಿರುವ ಜನ ಸಮುದಾಯ ಬಹುಮತ ಅಭಿಪ್ರಾಯದಂತೆ ಸಮಾಜವನ್ನು ನಿರ್ವಹಿಸುತ್ತದೆ. (1) ಆರ್ಥಿಕ ಸಮಾನತೆ ಇರುವ ಮತ್ತ ಇಲ್ಲದಿರುವ ಎರಡು ವ್ಯವಸ್ಥೆ ಗಳಲ್ಲೂ ಬಹುಮತ ತತ್ವಕ್ಕೆ (Majority Principle) ಮಾನ್ಯತೆ ಇದ್ದರೂ, ಆರ್ಥಿಕ ಸಮಾನತೆ ಇಲ್ಲದಿರುವ (ಖಾಸಗಿ ಸ್ವಾಮ್ಯವಿರುವ) ವ್ಯವಸ್ಥೆಯಲ್ಲಿ ಅಭಿಪ್ರಾಯ ಸೂಚನೆಯಲ್ಲಿ ಸ್ವಾಮ್ಯವರ್ಗಕ್ಕಿರುವ ಸೌಲಭ್ಯಗಳನ್ನು ಗಮನಿಸು ವುದು ಅಗತ್ಯವಾಗಿದೆ.
ಪುಟ:ಕಮ್ಯೂನಿಸಂ.djvu/೧೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.