ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದವೇ ಅಥವಾ ಬಂಡವಾಳವಾದವೇ? ಅಧ್ಯಾಯ-7 وله ಒಂದನೇ ಮಹಾಯುದ್ಧ (1914-18) ವಿರಸಪೂರಿತ ಬಂಡವಾಳಶಾಹಿ ವ್ಯವಸ್ಥೆಯ ಪ್ರತಿಬಿಂಬವಾಯಿತು. ಲಾಭ ತರಬಲ್ಲ ಮಾರುಕಟ್ಟೆಗಳಿಗಾಗಿ ಪ್ರಮುಖ ಬಂಡವಾಳಶಾಹಿ ರಾಷ್ಟ್ರಗಳಾದ ಇಂಗ್ಲೆಂಡ್, ಫ್ರಾನ್ಸ್, ಅಮೆರಿಕಾ ಗಳಿಗೂ ಮತ್ತು ಎದುರಾಳಿ ಜರ್ಮನಿಗೂ ಉಂಟಾದ ಯಾದವೀಕಲಹ ದಿಂದ ಉಂಟಾದ ಪರಿಣಾಮಗಳು ಅಷ್ಟಿಷ್ಟಲ್ಲ. ಯುದ್ಧದಿಂದ ನೊಂದ ರಷ್ಯಾದ ಜನಸಮುದಾಯ ಕ್ರಾಂತಿಕಾರಕ ಮಾರ್ಗವನ್ನು ಹಿಡಿಯಿತು; ಯುದ್ಧಕ್ಕೆ ಮತ್ತು ಶೋಷಣೆಗೆ ಕಾರಣಭೂತವಾದ ಬಂಡವಾಳಶಾಹಿ ವ್ಯವಸ್ಥೆಯನ್ನು ಕ್ರಾಂತಿಯ ಮೂಲಕ ದಮನಮಾಡಿತು ; ಸಮಾಜವಾದೀ ವ್ಯವಸ್ಥೆಯ ಉದಯವನ್ನು ಘೋಷಿಸಿತು. ರಷ್ಯಾದಲ್ಲಿ ಉಂಟಾದ ಸಮಾಜವಾದೀ ಕ್ರಾಂತಿ, ಇತರ ಬಂಡ ವಾಳಶಾಹಿ ರಾಷ್ಟ್ರಗಳ ಕಾರ್ಮಿಕವರ್ಗಕ್ಕೆ ಕ್ರಾಂತಿಪಥವನ್ನು ತೋರಿ ಸಿತು. ಜನತೆಯ ಸಮ್ಮು ಖ ದಲ್ಲಿ ಬ೦ಡ ವಾ ರಾ ಹಿ ಸರ್ಕಾರ ಮತ್ತು ಬಂಡವಾಳ ಶಾಹಿ ವ್ಯವಸ್ಥೆ ಅಪರಾಧಿಗಳಾಗಿ ಕಂಡುಬಂದವು. ಕಾರ್ಮಿಕವರ್ಗದ ಮುಂದಾಳತ್ವದಲ್ಲಿ ಸಮಾಜವಾದೀ ಕ್ರಾಂತಿಯನ್ನು ನಡೆಸಲು ಜನಸಮುದಾಯ ಸಿದ್ಧವಾಯಿತು, ಈ ಸಂದರ್ಭದಲ್ಲಿ ಸುಧಾರಕರು (1) ಕಾರ್ಲ್ ಕಾಟ್ಸ್ಕೀ, ಬರ್ ಸ್ಟೈನ್, ಹಿಲ್ ಫರ್‌ಡಿಂಗ್, ಮ್ಯಾಕ್‌ ನಾಲ್ಡ್, ಹಿಂಡನ್, ಟುರಾಟ, ವಾನಡ್‌ರ್‌, ಚರ್‌ನಾವ್, ಮಾ ಟಾವ್, ಲಾಂಗ್ ಮತ್ತು ಇತರರು, ಇವರಲ್ಲಿ ಅನೇಕರು ತಾವೂ ಸಹ ಮಾರ್ಕ್ಸ್ ವಾದಿಗಳೆಂದು ಕರೆದುಕೊಳ್ಳುತ್ತಿದ್ದರು. ಆದರೆ ಮಾರ್ಕ್ಸ್ ವಾದದ ತಿರುಳಾದ ಕಾರ್ಮಿಕರ ಕ್ರಾಂತಿಕಾರಿ ಚಳವಳಿಯನ್ನಾಗಲೀ, ಬಂಡವಾಳವರ್ಗದಿಂದ ಬರುವ ಪ್ರತಿಭಟನೆಯನ್ನು ಮುರಿಯಲಿಕ್ಕಾಗಿ ಕಾರ್ಮಿಕರು ರಾಜ್ಯಶಕ್ತಿಯನ್ನು ಉಪಯೋಗಿ ಸುವುದನ್ನಾಗಲೀ ಅನುಮೋದಿಸಲಿಲ್ಲ. ಪ್ರಜಾಸತ್ತೆ ಮಾರ್ಗವನ್ನು ಅನುಸರಿಸುವ ಸಮಾಜವಾದೀ ಪ್ರಜಾಸತ್ತಾತ್ಮಕರು (Social Democrats) ಎಂದು ಕರೆದು ಕೊಂಡರು. ಚೈತನ್ಯದಾಯಕ ರೀತಿಯಲ್ಲಿ ಮಾರ್ಕ್ಸ್ ವಾದವನ್ನು ಮಂಡಿಸಿದ ಮತ್ತು ಮಾರ್ಕ್ಸ್‌ ವಾದದ ಕ್ರಾಂತಿಕಾರೀ ಅಂಶಗಳನ್ನು ಎತ್ತಿ ಹಿಡಿದ ಲೆನಿನ್ನನು ಸಮಾಜ ಎತ್ತಿಹಿಡಿದ I