ಈ ಪುಟವನ್ನು ಪ್ರಕಟಿಸಲಾಗಿದೆ



ಸಮಾಜ ವಾದದ ಜನನ

ಉಪಟಳಗಳಿಂದ ತಪ್ಪಿಸಿಕೊಳ್ಳಲು ಯುದ್ದ ಸಿದ್ದತೆ, ಕೋಟೆ ಕೊತ್ತಲು
ಗಳ ಕಟ್ಟಡ ಆ ಸಮಾಜಗಳ ಪ್ರಥಮ ಕರ್ತವ್ಯವಾಗಿತ್ತು. ಈಗಲೂ ಸಹ
ಇದು ತಪ್ಪಿಲ್ಲ. ಗುಲಾಮರಾಗಿ ಬಂದವರು ಒಡೆಯನಿಗಾಗಿ ದುಡಿಯ
ಬೇಕು, ಅವನಿಗೆ ಯಾವ ಹಕ್ಕು ಬಾಧ್ಯತೆಗಳೂ ಸಹ ಇರುವುದಿಲ್ಲ.
ಅವರು ಒಡೆಯನ ಸ್ವತ್ತು. ಅವರನ್ನು ಒಡೆಯ ಏನು ಬೇಕಾದರೂ ಮಾಡ
ಬಹುದು. ಆದರೂ ಗುಲಾಮರ ದುಡಿಮೆಯಮೇಲೆಯೇ ನಾಗರಿಕತೆಯನ್ನು
ಕಟ್ಟಿದ ಪ್ರಾಚೀನ ಸಮಾಜಗಳಲ್ಲಿ (ಈಜಿಪ್ಟ್, ಗ್ರೀಸ್, ರೋಮ,
ಇಂಗಿಯಾ) 1 ಒಡೆಯರ ಕೂರ ವರ್ತನೆಯನ್ನು ತಾಳಲಾರದೆ ಗುಲಾಮರು
ಅನೇಕವೇಳೆ ದಂಗೆ ಎದ್ದಿದ್ದಾರೆ. ಹೀಗೆ ಎದ್ದ ದಂಗೆಗಳಲ್ಲಿ ರೋಮ್
ಸಾಮ್ರಾಜ್ಯದಲ್ಲಿ “ ಸ್ಪಾರ್ಟಾಕಸ್ ” ಎಂಬ ಗುಲಾಮನ ನೇತೃತ್ವದಲ್ಲಿ
ನಡೆದ ದಂಗೆ ಬಹಳ ಮುಖ್ಯವಾದದ್ದು, ಪ್ರಾಚೀನ ಕಾಲದಲ್ಲಿ ಪ್ರತಿಭಟನೆ
ಗುಲಾಮರಿಂದ ಮಾತ್ರವಲ್ಲದೆ, ಅದೇ ಸಮಾಜದಲ್ಲಿ ಕೀಳು ವರ್ಗದವ
ರಿಂದಲೂ ಸಹ ಬಂದಿದೆ. ಇದಕ್ಕೆ ಕೀಳು ವ ಗ ೯ ದ ವ ರಿ ಗೂ ಮೇಲು ವರ್ಗದವರಿಗೂ
ಇದ್ದ ವೈಷಮ್ಯವೇ ಕಾರಣವೆಂದು ಅನೇಕ
ನಿದರ್ಶನಗಳಿಂದ ವೇದ್ಯವಾಗುತ್ತದೆ. ಉತ್ತಮ ವರ್ಗದವರೊಡನೆ ಕೀಳು
ವರ್ಗದವರು ಹೋರಾಟ ನಡೆಸಿ ಸಮಾನ ಹಕ್ಕುಗಳನ್ನು ಪಡೆದಿದ್ದಾರೆ.
ಗ್ರೀಸ್ ದೇಶದಲ್ಲಿ ಅನೇಕ ಸಮಾಜ ಸುಧಾರಕರು (ಸೋಲನ್ ಮತ್ತು
ಕೈನೀಸ್) ಅಸಮಾಧಾನಕ್ಕೆ ಕಾರಣವಾಗಿದ್ದ ವರ್ಗಭೇದವನ್ನೂ ಇತರ
ಭಿನ್ನತೆಗಳನ್ನೂ ಸುಧಾರಣೆಗಳ ಮೂಲಕ ಪರಿಹರಿಸಿದರು, ರೋಮ್
ದೇಶದಲ್ಲಿ ಪ್ಲೇಬಿಯನರು (ಕೀಳುವರ್ಗ) ಪೆಟ್ರಶಿಯನರೊಡನೆ ( ಉತ್ತಮ
ವರ್ಗ) ಹೋರಾಡಿ ಸಮಾನ ಹಕ್ಕುಗಳನ್ನು ಪಡೆದಿದ್ದಾರೆ. ಪ್ರಾಚೀನ ಭಾರತ
ದಲ್ಲ ಶೋಷಣೆಗೆ ಆವಾಸಸ್ಥಾನವಾಗಿದ್ದ ಜಾತಿ ಪದ್ದತಿಯನ್ನು (caste
System) ಬಹು ಮಟ್ಟಿಗೆ ವಿರೋಧಿಸಿ ಜೈನ, ಬೌದ್ಧ ಸುಧಾರಕರು ಚಳ
ವಳಿಗಳನ್ನು ನಡೆಸಿದ್ದಾರೆ.
ಪಾಶ್ಚಾತ್ಯ ಮತ್ತು ಪೌರ್ವಾತ್ಯ ದೇಶಗಳಲ್ಲಿ ಭೂಸ್ವಾಮ್ಯ ಉಳ್ಳ
_____________
(1) ಭಾರತದಲ್ಲಿ ಗುಲಾಮಗಿರಿ ಇತ್ತೆಂಬುದಕ್ಕೆ ಕಣ ಟಿಲ್ಯನ 'ಅರ್ಥಶಾಸ್ತ್ರ'
ದಲ್ಲಿ ಸಮರ್ಥನೆ ದೊರೆಯುತ್ತದೆ, ಕಣ ಟಲ್ಯನ - 'ಅರ್ಥಶಾಸ್ತ್ರ': ಡಾ. ಶಾಮಾ
ಶಾಸ್ತ್ರಿಗಳ ಸಂಪುಟ.(ಹತ್ತನೇ ಅಧ್ಯಾಯ ನೋಡಿ.)