ಸಮಾಜವಾದವೇ ಅಥವಾ ಬಂಡವಾಳವಾದವೇ ? ಯುದ್ಧಾನಂತರ ಈ ಬಂಡವಾಳಶಾಹಿ ರಾಷ್ಟ್ರಗಳು ಆರ್ಥಿಕ ಪೈಪೋಟ ನಡೆಸಿ ತಮ್ಮ ಸರಕುಗಳನ್ನು ಪ್ರಪಂಚದ ಮಾರುಕಟ್ಟೆಯಲ್ಲಿ ಮಾರುವ ಪರಿಸ್ಥಿತಿ ಬಂದಿತು. ಎರಡನೆಯದಾಗಿ, ಯುದ್ಧಾನಂತರ ವಸಾಹತುಗಳು ಮತ್ತು ಆಶ್ರಿತ ರಾಷ್ಟ್ರಗಳು ವಿಮುಕ್ತರಾಗಲು ಸ್ವಾತಂತ್ರ್ಯ ಚಳವಳಿಯನ್ನು ಹೂಡಿದವು. ಮೊದಲಿನಂತೆ ವಸಾಹತುಜನರ ಶೋಷಣೆ ದುಸ್ಸಾಧ್ಯವಾಯಿತು. ಬಂಡ ವಾಳಶಾಹಿ ಪ್ರಜಾಸತ್ತೆ ರಾಷ್ಟ್ರಗಳು ತಮ್ಮ ಬಂಡವಾಳದ ರಕ್ಷಣೆಗಾಗಿ ವಸಾಹತುಗಳಲ್ಲಿನ ಚಳವಳಿಗಳನ್ನು ದಮನಮಾಡುವ ಪ್ರಸಂಗ ಬೇರೆ ಬಂದಿತು, ವಸಾಹತುಗಳ ಶೋಷಣೆಯಿಂದ ಬರುತ್ತಿದ್ದ ಅಧಿಕ ಲಾಭದ ಚೂರುಪಾರುಗಳನ್ನು ತಮ್ಮ ದೇಶದ ಕಾರ್ಮಿಕವರ್ಗಕ್ಕೆ ಎಸೆದು ಕಾರ್ಮಿಕ ವರ್ಗವನ್ನು ಸಂತೈಸುವುದು ಹಿರಿಯ ಬಂಡವಾಳಶಾಹಿ ರಾಷ್ಟ್ರಗಳಿಗೆ ತಪ್ಪಿ ಹೋಯಿತು. ಮೂರನೆಯದಾಗಿ, ಬಂಡವಾಳಶಾಹಿ ವ್ಯವಸ್ಥೆ ತರುವ ಶೋಷಣೆ ಮತ್ತು ಆರ್ಥಿಕ ದುಃಸ್ಥಿತಿಯಿಂದ ಪಾರಾಗಲು ಸೋವಿಯಟ್ ಕ್ರಾಂತಿ ತೋರಿಸಿದೆ ಹೆದ್ದಾರಿ ವಸಾಹತು ಜನರಮೇಲೆ ಪ್ರಭಾವವನ್ನು ಬೀರಿತ್ತು. ವಸಾಹತು ಗಳು ಸಮಾಜವಾದೀ ಪಥದ ಕಡೆ ಹೋಗುವುದನ್ನು ತಡೆಯುವ ಕೆಲಸ ವಸಾಹತುಗಳನ್ನು ಹೊಂದಿರುವ ಬಂಡವಾಳಶಾಹಿ ರಾಷ್ಟ್ರಗಳಿಗೆ ಪ್ರಾಪ್ತಿ ಯಾಯಿತು. ಅಧಿಕಸಂಖ್ಯೆಯಲ್ಲಿ ಕಾಡತೊಡಗಿದ ಸಮಸ್ಯೆಗಳಿಂದ ಬಂಡವಾಳಶಾಹಿ ಪ್ರಜಾಸತ್ತೆ ರಾಷ್ಟ್ರಗಳು ಎದೆಗುಂದಿದವು. ವಸಾಹತುಗಳ ಮತ್ತು ಮಾರು ಕಟ್ಟೆಗಳ ಸಂರಕ್ಷಣೆಗೆ ಇನ್ನೊಬ್ಬರನ್ನು ಆಶ್ರಯಿಸಿ ರಕ್ಷಣೆ ಪಡೆಯುವ ಪ್ರಸಂಗ ಬಂದಿತು. ಫ್ಯಾಸಿಸ್ಟ್ ರಾಷ್ಟ್ರಗಳೊಡನೆ ಸಂಧಾನಕ್ಕೆ ನಿಂತು ತಮ್ಮ ತಮ್ಮೊಳಗೇ ಪೈಪೋಟಿ ತರವಲ್ಲವೆಂದೂ ಉಭಯ. ಬಂಡವಾಳಶಾಹಿ ರಾಷ್ಟ್ರಗಳಿಗೂ ಹಾನಿಯೆಂದೂ ಹಿಟ್ಲರ್ ಮುಸಲೋನಿಗಳಲ್ಲಿ ಬಂಡ ವಾಳಶಾಹಿ ಪ್ರಜಾಸತ್ತೆ ಸರ್ಕಾರಗಳು ಪ್ರಾರ್ಥಿಸಿದವು. ಸರಕುಗಳ ಉತ್ಪಾ ದನೆ, ಮಾರಾಟ, ಬೆಲೆ, ಲಾಭ ಇವುಗಳ ಬಗ್ಗೆ ಸಂಯುಕ್ತ ಒಪ್ಪಂದ ಗಳನ್ನು ಮಾಡಿಕೊಂಡರು, ರಾಜ್ಯವ್ಯವಸ್ಥೆಯ ಬಗ್ಗೆ ಭಿನ್ನಾಭಿಪ್ರಾಯ ಮತ್ತು ವ್ಯತ್ಯಾಸಗಳಿದ್ದರೂ ಒಂದು ಬಂಡವಾಳಶಾಹಿ ಪ್ರಜಾಸತ್ತ ಇನ್ನೊಂದು ನಿರಂಕುಶ ಫ್ಯಾಸಿಸ್ಟ್ ಪ್ರಭುತ್ವ-ಆರ್ಥಿಕ ವ್ಯವಹಾರ ಮತ್ತು
ಪುಟ:ಕಮ್ಯೂನಿಸಂ.djvu/೧೪೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.