ವೈಜ್ಞಾ ಸಮಾಜವಾದದ ಸಮಸ್ಯೆಗಳು ಅಧ್ಯಾಯ 9. ಜ್ಞಾನಿಕ ಅಥವಾ ಆಧುನಿಕ ಸಮಾಜವಾದದ ಹುಟ್ಟು, ಅದರ ಇತಿ ಹಾಸ ಅದರ ಸ್ವರೂಪ ಮತ್ತು ರಷ್ಯಾ, ಚೀಣಾ ಮೊದಲಾದ ರಾಷ್ಟ್ರಗಳಲ್ಲಿ ಅದು ಕಾರ್ಯಗತವಾಗುತ್ತಲಿರುವುದು, ಇತ್ಯಾದಿ ಸಂಗತಿಗಳನ್ನು ಹಿಂದಿನ ಅಧ್ಯಾಯಗಳಲ್ಲಿ ನೋಡಿದ್ದಾಗಿದೆ. ಈಗ ಆಧುನಿಕ ಸಮಾಜವಾದಕ್ಕೆ ಸಂಬಂ ಧಿಸಿರುವ ಕೆಲವು ಸಮಸ್ಯೆಗಳನ್ನು ಚರ್ಚಿಸುವುದು ಆವಶ್ಯಕವಾಗಿದೆ. ಮೊದಲ ನೆಯದಾಗಿ, ಆಧುನಿಕ ಸಮಾಜವಾದಕ್ಕೆ ಪ್ರತಿಯಾಗಿ, ಮತ್ತು ಆ ವಾದ ದಂತೆ ಕಾರ್ಯಗತ ಹೊಂದುತ್ತಲಿರುವ ವ್ಯವಸ್ಥೆಗೆ ಪ್ರತಿಯಾಗಿ ಬೇರೊಂದು ವಿಧದ ಸಮಾಜವಾದ ಅಥವಾ ಸಮಾಜವಾದೀ ವ್ಯವಸ್ಥೆ ಇರಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಮಾರ್ಕ್ಸ್-ಏಂಗೆರು ತಮ್ಮ ವಾದ ಹೊರತು ಮಿಕ್ಕ ಎಲ್ಲ ಸಮಾಜವಾದೀ ತತ್ತ್ವಗಳು ಕಲ್ಪನಾ ಸಮಾಜವಾದ, ಅಥವಾ ಅದೇ ಜಾತಿಗೆ ಸೇರಿರುವ ಸಮಾಜವಾದವೇ ವಿನಾ ವೈಜ್ಞಾನಿಕ ಸಮಾಜ ವಾದವಾಗಲಾರದೆಂದು ಉತ್ತರವಿತ್ತಿದ್ದಾರೆ. ವೈಜ್ಞಾನಿಕ ಸಮಾಜವಾದೀ ತತ್ತ್ವಕ್ಕೆ, ಕಾರ್ಮಿಕವರ್ಗದ ಚಳವಳಿಗೆ ಸಮಾಜವಾದೀ ವ್ಯವಸ್ಥೆಗೆ ಬಂಡ ವಾಳಶಾಹಿ ವ್ಯವಸ್ಥೆಯಲ್ಲಿರುವ ವಿರಸಗಳೇ ಎಡೆಕೊಟ್ಟಿವೆ ಎಂದೂ ಕಾರ್ಮಿಕವರ್ಗದ ಹೋರಾಟದ ಫಲವಾಗಿ ಸಮಾಜವಾದೀ ವ್ಯವಸ್ಥೆ ಅನಿವಾರ್ಯವಾಗಿ ಜನ್ಮ ತಾಳುವುದೆಂದೂ ತಿಳಿಸಿದ್ದಾರೆ. ಸಮಾಜವಾದೀ ವ್ಯವಸ್ಥೆಯನ್ನು ನಿರ್ಧರಿಸುವ ಲಕ್ಷಣಗಳನ್ನು ಮಾರ್ಕ್ಸ್ ಏಂಗೆರು ತಮ್ಮ ತತ್ತ್ವದಲ್ಲಿ ವರ್ಣಿಸಿದ್ದಾರೆ. ಸಮಾಜದ ಉತ್ಪಾದನಾ ಸಾಧನಗಳನ್ನು ಸಮಾಜೀಕರಣ ಮಾಡುವುದೇ ಬಂಡವಾಳಶಾಹಿ ವ್ಯವಸ್ಥೆ ತಂದೊಡ್ಡಿರುವ ವಿರಸಗಳನ್ನೂ, ವರ್ಗಗಳನ್ನೂ ತೊಡೆಯುವ ಮಾರ್ಗ, ಉತ್ಪಾದನಾ ಸಾಧನಗಳು ಸಮಾಜೀಕರಣವಾಗಿರುವುದೇ ಆಧುನಿಕ ಸಮಾಜವಾದೀ ವ್ಯವಸ್ಥೆಯ ಮುಖ್ಯ ಲಕ್ಷಣ ಮತ್ತು ಅಡಿಪಾಯ, ಆದು ದರಿಂದ ಉತ್ಪಾದನಾ ಸಾಧನಗಳ ಸಮಾಜೀಕರಣವಿಲ್ಲದಿರುವ ಆರ್ಥಿಕ ವ್ಯವಸ್ಥೆಗಳೆಲ್ಲವೂ ಸಮಾಜವಾದದ ಸೋಗಿನಲ್ಲಿ ಸ್ವಾಮ್ಯವನ್ನು ಸಂರಕ್ಷಿಸುವ,
ಪುಟ:ಕಮ್ಯೂನಿಸಂ.djvu/೧೬೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.