ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದದ ಸಮಸ್ಯೆಗಳು ೧೫೬ ಆದುದರಿಂದ ಬಂಡವಾಳಶಾಹಿ ಉತ್ಪಾದನಾಕ್ರಮ-ಉತ್ಪಾದನಾ ಸಾಧನ ಗಳನ್ನು ಖಾಸಗಿಯಾಗಿ ಹೊಂದಿ ಲಾಭ ಮತ್ತು ಶೋಷಣೆಯ ದೃಷ್ಟಿಯಿಂದ ನಡಸುವ ಉತ್ಪಾದನೆವನ್ನು ನಿರ್ಮೂಲಗೊಳಿಸಿ, ಜನ ಸಮುದಾಯಕ್ಕೆ ಉಪಯೋಗವಾಗುವ ದೃಷ್ಟಿಯಿಂದ ಶೋಷಣೆಗೆ ಅವಕಾಶ ವಿಲ್ಲದಿರುವ ರೀತಿಯಲ್ಲಿ ಉತ್ಪಾದನೆ ನಡೆಯಬೇಕು. ಈ ರೀತಿ ಆಗಬೇಕಾ ದರೆ ಉತ್ಪಾದನಾ ಸಾಧನಗಳಮೇಲೆ ಸಾಮೂಹಿಕ ಸ್ವಾಮ್ಯವನ್ನು ಹೊಂದು ವುದರ ಮೂಲಕ ಮಾತ್ರ ಸಾಧ್ಯ. ಸಾಮೂಹಿಕ ಸ್ವಾಮ್ಯವೇ ಸಮಾಜ ಸ್ವಾಮ್ಯವಾಗಿದೆ, ಸಮಾಜೀಕರಣವಾಗಿದೆ. 1 ಸಮಾಜೀಕರಣ ಮತ್ತು ಸಮಾಜವಾದೀ ವ್ಯವಸ್ಥೆಯ ಆವಶ್ಯಕತೆ ಈ ರೀತಿ ಇರುವಾಗ ಉತ್ಪಾದನಾ ಸಾಧನಗಳ ಮೇಲೆ ಇರುವ ಖಾಸಗೀ ಸ್ವಾಮ್ಯವನ್ನು ನಾಶಗೊಳಿಸದ ಆರ್ಥಿಕ ನೀತಿ ಸಮಾಜವಾದೀ ಆರ್ಥಿಕ ನೀತಿಯಾಗಲಾರದು, ಯಾವುದೇ ಆರ್ಥಿಕ ನೀತಿಯನ್ನು ಸಮಾಜವಾದೀ ನೀತಿಯೆ ಅಥವಾ ಅಲ್ಲವೆ ಎಂಬುದನ್ನು ನಿರ್ಧರಿಸಬೇಕಾದರೆ ಸಮಾಜದ ಸಂಪತ್ತು ಸಾಧನಗಳಲ್ಲಿರುವ ಖಾಸಗೀ ಸ್ವಾಮ್ಯದ ಬಗ್ಗೆ ಇರುವ ಧೋರಣೆ ಯನ್ನು ಮೊದಲು ಪರೀಕ್ಷಿಸಬೇಕು. ಸಮಾಜವಾದ ಖಾಸಗೀ ಸ್ವಾಮ್ಯದ ಬಗ್ಗೆ ತನ್ನ ಧೋರಣೆಯನ್ನು ಸ್ಪಷ್ಟಪಡಿಸಿದೆ. 2 ಉತ್ಪಾದನಾ ಸಾಧನ ಗಳ ಸಮಾಜೀಕರಣ, ತತ್ ಪರಿಣಾಮವಾಗಿ ವರ್ಗಗಳ ವಿನಾಶ ಸ್ವಾಮ್ಯವುಳ್ಳವರು, ಸ್ವಾಮ್ಯ ಇಲ್ಲದವರು-ಸಮಾಜವಾದೀ ವ್ಯವಸ್ಥೆಯಾಗಿದೆ. ಆದುದರಿಂದ, ಇದಲ್ಲದೆ ಬೇರೊಂದು ವಿಧದ ಸಮಾಜವಾದವೆಂದರೆ ಸ್ವಾಮ್ಯಕ್ಕೆ ಧಕ್ಕೆ ತರದ ಆರ್ಥಿಕ ನೀತಿಯಾಗುತ್ತದೆ. ಹೀಗಿರುವಾಗ ಮಧ್ಯಮಮಾರ್ಗದ ಆರ್ಥಿಕ ನೀತಿ, ಭಾವಪ್ರಧಾನದ ಅಥವಾ ಕೇವಲ ಗುರಿ ಘೋಷಣೆಯ 4 ಸಮಾಜವಾದ ಇವುಗಳೆಲ್ಲವೂ ಸಮಾಜದ ಸಂಪತ್ ಸಾಧನಗಳಲ್ಲಿ ಖಾಸಗೀಸ್ವಾಮ್ಯವನ್ನೂ, ಬಂಡವಾಳ ಆರ್ಥಿಕವ್ಯವಸ್ಥೆಯನ್ನೂ ಸಂರಕ್ಷಿಸುವ ಆರ್ಥಿಕ ನೀತಿಗಳಾಗಿವೆ. (1) ಅಧ್ಯಾಯ 2, 3 ಮತ್ತು 4, ದ, ನೋಡಿ, (2) ಪುಟ ೭೭, ದ, ನೋಡಿ (3) ಪುಟ ೧೩೮, ದ, ನೋಡಿ (4) ಅಧ್ಯಾಯ 2, ದ. ನೋಡಿ. ಸಿ