ಸಮಾಜವಾದದ ಸಮಸ್ಯೆಗಳು B ಯಾವ ಸಮಾ ಪ್ರತಿ ಸಮಾಜದ ಸಂಪತ್ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವಿರುವ ಸಮಾಜಗಳಲ್ಲೆಲ್ಲಾ ಸ್ವಾಮ್ಯರಹಿತವರ್ಗದ ಸ್ವಾತಂತ್ರ್ಯ ಆರ್ಥಿಕವಾಗಿ ಭಿನ್ನ ವಾಗಿದೆ. ಮೇಲಾಗಿ ವ್ಯಕ್ತಿ ಸ್ವಾತಂತ್ರ್ಯ ಎಲ್ಲ ಕಾಲದಲ್ಲೂ, ಎಲ್ಲ ಸಮಯ ದಲ್ಲೂ ಒಂದೇ ತೆರನಾಗಿಲ್ಲ, ವ್ಯಕ್ತಿಗಳು ಹೊಂದಿರಬೇಕಾದ ಸ್ವಾತಂತ್ರ್ಯವನ್ನು ಸಮಾಜಕಲ್ಯಾಣದ ದೃಷ್ಟಿಯಿಂದ ಮಿತಗೊಳಿಸಲಾಗಿದೆ. ಜವೂ ವ್ಯಕ್ತಿಗಳಿಗೆ ಸ್ವಚ್ಛಾ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾಜಕಲ್ಯಾಣದ ಪರಿಮಿತಿ ಆಯಾ ಸಮಾಜದ ಆರ್ಥಿಕವ್ಯವಸ್ಥೆಯನ್ನು ಅವಲಂಬಿಸಿದೆ. ವ್ಯಕ್ತಿಗಳ ಸ್ವಾತಂತ್ರ್ಯ ಸಮಾಜದ ಆರ್ಥಿಕವ್ಯವಸ್ಥೆ ಎಡೆಕೊಡುವ ಆರ್ಥಿಕಸಂಬಂಧಗಳ- ಕೂಲಿ ಯವನಾಗಿರಲು, ಭಿಕ್ಷುಕನಾಗಿರಲು, ವ್ಯಾಪಾರಗಾರನಾಗಿರಲು, ಲೇವಾ ದೇವಿಯವನಾಗಿರಲು, ಜರ್ಮೀದಾರನಾಗಿರಲು, ಗುಲಾಮರನ್ನು ಹೊಂದಿ ರುವನಾಗಿರಲು, ಕೈಗಾರಿಕೋದ್ಯಮಿಯಾಗಿರಲು, ನಿರುದ್ಯೋಗಿ ಯಾಗಿರಲು, ದಳ್ಳಾಳಿಯಾಗಿರಲು ಇತ್ಯಾದಿ - ಪ್ರತಿಬಿಂಬವಾಗಿದೆ. ಈ ಆರ್ಥಿಕ ಸಂಬಂಧಗಳು ಸಮಾಜ ವಿಕಾಸದ ಪ್ರತಿ ಘಟ್ಟದಲ್ಲ ಪ್ರಾಚೀನ, ಊಳಿಗಮಾನ್ಯ ಮತ್ತು ಬಂಡವಾಳಶಾಹಿ ವ್ಯವಸ್ಥೆ ವಿವಿಧ ರೂಪದಲ್ಲಿವೆ. ಬದಲಾವಣೆ ಹೊಂದಿರುವ, ಹೊಂದುತ್ತಲಿರುವ ಆ ರ್ಥಿಕ ಸಂಬಂಧಗಳು ವ್ಯಕ್ತಿ ಸ್ವಾತಂತ್ರ್ಯದಲ್ಲಿ ಬದಲಾವಣೆ ತಂದಿವೆ. ಬಂಡ ವಾಳಶಾಹಿ ವ್ಯವಸ್ಥೆಯ ಆರ್ಥಿಕ ಸಂಬಂಧಗಳು ನಿರ್ಮೂಲಹೊಂದಿದ ಹಾಗೆ ಹೊಸ ಬಗೆಯ ಸಮಾಜವಾದೀ ಆರ್ಥಿಕ ಸಂಬಂಧಗಳು ಹೊರ ಹೊಮ್ಮುತ್ತವೆ. ಈ ಹೊಸ ಆರ್ಥಿಕ ಸಂಬಂಧಗಳು ಕಲ್ಪಿಸುವ ಹೊಸ 1 - - ಸಮಾಜವಾದಕ್ಕೂ ಗಿಲ್ಫ್ ವಾದಕ್ಕೂ ವ್ಯತ್ಯಾಸವೇ ಇಲ್ಲವೆಂಬ ಸಂಶಯ ಬರ ಬಹುದು, ಈ ಕಾರಣಗಳಿಂದ ಮಾರ್ಕ್ಸ್‌ವಾದದಲ್ಲಿ ಸಮಾನತೆ (ಆರ್ಥಿಕ) ಎಂಬ ಶಬ್ದ ಪಡೆದಿರುವ ಅರ್ಥವನ್ನು ಜ್ಞಾಪಕದಲ್ಲಿಡುವುದು ಬಹಳ ಅಗತ್ಯವಿದೆ. ಸಂಕ್ಷಿಪ್ತ ವಾಗಿ ಹೇಳುವುದಾದರೆ ಆರ್ಥಿಕ ಸಮಾನತೆ ಅಥವ ಆರ್ಥಿಕ ಪ್ರಜಾಸತ್ತೆ ಎಂದರೆ ವರ್ಗ ವ್ಯತ್ಯಾಸಗಳನ್ನು ನಾಶಪಡಿಸುವುದಾಗಿದೆ. ಮಾರ್ಕ್ಸ್-ಏಂಗರ ಅರಿಸ ಲ್ಪಟ್ಟ ಪತ್ರವ್ಯವಹಾರ, ಪುಟ 337 ಲಾರೆನ್ಸ್ ಮತ್ತು ವಿಷಾರ್ ಪ್ರಕಟಣೆ, 1936 (1) ಆರ್ಥಿಕ ಸಂಬಂಧಗಳಲ್ಲಿ ಉಂಟಾಗಿರುವ ಬದಲಾವಣೆಗಳ ಬಗ್ಗೆ ಮತ್ತು ಅವು ವಿವಿಧ ಕಾಲಗಳಲ್ಲಿ ಇದ್ದ ರೂಪಗಳ ಬಗ್ಗೆ 3 ನೇ ಅಧ್ಯಾಯ ನೋಡಿ.
ಪುಟ:ಕಮ್ಯೂನಿಸಂ.djvu/೧೮೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.