ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨ ವೈಜ್ಞಾನಿಕ ಸಮಾಜವಾದ ಬುದ್ದಿ ಬಲ, ಧಾರ್ಮಿಕ ತತ್ತ್ವಗಳು, ರಾಜಕೀಯ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಇತ್ಯಾದಿಗಳು ತಮ್ಮ ಪ್ರಭಾವವನ್ನು ಬೀರಿವೆ ಮತ್ತು ಬೀರುತ್ತಲಿವೆ ಎಂದೂ ಕೆಲವರು ವಾದಿಸಿದ್ದಾರೆ. ಉದಾತ್ತ ಧೈಯಕ್ಕಾಗಿ ತ್ಯಾಗ ದೇಶಕ್ಕಾಗಿ ಮತ್ತು ನಂಬಿದವರಿಗಾಗಿ ಪ್ರಾಣತ್ಯಾಗ, ಆಧ್ಯಾತ್ಮಿಕ ಚಿಂತನೆ, ಫಲಾಫಲವಿಲ್ಲದ ಕೆಲಸ ಇವುಗಳು ವ್ಯಕ್ತಿಗಳ ಬಾಳಿನಲ್ಲಿ ಇವೆ. ಆದುದರಿಂದ ಮಾರ್ಕ್ಸ್ವಾದದ ಪ್ರಕಾರ ಆರ್ಥಿಕ ಅಂಶ, ರಾಜಕೀಯ, ನ್ಯಾಯ, ಧಾರ್ಮಿಕ ವ್ಯವಸ್ಥೆ ಮತ್ತು ಭಾವನೆಗಳು ಎಲ್ಲವನ್ನೂ ನಿರ್ಧರಿಸುತ್ತವೆ ಎಂದು ಐತಿಹಾಸಿಕ ಭೌತವಾದ ತಿಳಿಸುವುದರಿಂದ, ಅರ್ಥಕ್ಕೆ ಈ ಮಿತಿಮೀರಿದ ಪ್ರಾಧಾನ್ಯತೆ ಮಾರ್ಕ್ಸ್‌ವಾದದಲ್ಲಿ ಅಡಗಿರುವ ದೋಷವಾಗಿದೆ ಎಂದು ಮತ್ತೆ ಕೆಲವರ ಟೀಕೆಯಾಗಿದೆ. ಆರ್ಥಿಕ ಅಂಶ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಮಾರ್ಕ್ಸ್ ಏಂಗೆರು ಹೇಳಿರುವುದು ನಿಜ. ಆದರೆ ಆರ್ಥಿಕ ಅಂಶ ಹೇಗೆ ಮತ್ತು ಯಾವ ಪ್ರಮಾಣದಲ್ಲಿ ನಿರ್ಧರಿಸುತ್ತದೆ ಎಂಬುದರ ಬಗ್ಗೆ ವಿವರಣೆ ಯನ್ನೂ ಇತ್ತಿದ್ದಾರೆ. ಆರ್ಥಿಕ ಅಂಶ ಎಲ್ಲವನ್ನು ನಿರ್ಧರಿಸುತ್ತದೆ ಎಂಬ ಹೇಳಿಕೆಯ ಸಂಪೂರ್ಣ ಅರ್ಥವನ್ನು ಗ್ರಹಿಸದೆ, ಅರೆತೆರೆದ ದೃಷ್ಟಿ ಯಿಂದ ನಿರ್ಧಾರವಾದವನ್ನು ಸಂಕುಚಿತಗೊಳಿಸಿ ಅರ್ಥಮಾಡುವುದಾದರೆ ಎಲ್ಲವೂ ಪ್ರಮಾದವಾಗುತ್ತದೆ ಮತ್ತು ಅಪಾರ್ಥವಾಗುತ್ತದೆ. F ನಿರ್ಧಾರದ ಪ್ರಶ್ನೆಯ ಬಗ್ಗೆ ಮಾರ್ಕ್ಸ್-ಏಂಗೆರು ಈ ಕೆಳಕಂಡ ವಿವರಣೆಯನ್ನಿತ್ತಿದ್ದಾರೆ : ಮೊದಲನೆಯದಾಗಿ, ಐತಿಹಾಸಿಕ ಭೌತವಾದವನ್ನು ಹಲವರು ಪ್ರಯೋಗದಲ್ಲಿ ತರಲು ಯತ್ನಿಸಿರುವಂತೆ ಕೇವಲ ಅದು ಒಂದು ನಾಮಾಂಕ ತವಲ್ಲ (as a mere phrase). ಕಂಡಿದ್ದೆಲ್ಲವನ್ನೂ ನುಡಿದಿದ್ದೆಲ್ಲ ವನ್ನೂ ದೀರ್ಘ ವಿಮರ್ಶೆಗೆ ಒಳಪಡಿಸದೆ, ಈ ನಾಮಾಂಕಿತದಿಂದ ಎಲ್ಲ ಸಮಸ್ಯೆಗಳಿಗೂ ಉತ್ತರ ದೊರಕುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ. ಎರಡನೆಯದಾಗಿ, ಐತಿಹಾಸಿಕ ಭೌತವಾದ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಒಂದು ಸಾಧನ ಮಾತ್ರವಾಗಿದೆ (our couception of history is above all a guide to study), ಎಲ್ಲ ದೇಶಗಳ ಇತಿಹಾಸವನ್ನು ಆಮೂಲಾಗ್ರವಾಗಿಯೂ ಪ್ರತ್ಯೇಕ ಪ್ರತ್ಯೇಕವಾಗಿಯೂ