ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಾಜ ವಾದದ ಜನನ ಪಂಕ್ತಿಗಳಾಗಿ ಉಳಿದವು. ನೊಂದವರು, ಇಂಥ ಭೀಕರ ದೃಶ್ಯ ನೋಡ ಲಾರದವರು, ಜಿಗುಪ್ಪೆ ಗೊಂಡು ಆಶ್ರಮ, ಕುಟೀರ ಮುಂತಾದವುಗಳನ್ನು ರಚಿಸಿಕೊಂಡು ಆತ್ಮಶುದ್ದಿಯನ್ನು ಇನ್ನೂ ಮಾಡಿಕೊಳ್ಳುತ್ತಲೇ ಇದ್ದಾರೆ. ಅವರುಗಳ ಆತ್ಮಶುದ್ಧಿಯ ತಪಶ್ಚರ್ಯೆಯ ಫಲ ಸಮಾಜಕ್ಕೆ ತಟ್ಟುತ್ತದೆಂಬ ಆಶಾಭಾವನೆ ಅನೇಕರಲ್ಲಿ ಇನ್ನೂ ನಶಿಸಿಲ್ಲ. ಸಮಾಜ ಮಾತ್ರ ಪೂರ್ವದಂತೆ ಮುಂದುವರಿಯುತ್ತಲೇ ಇದೆ. 15 ನೇ ಶತಮಾನದನಂತರ ಪಾಶ್ಚಿಮಾತ್ಯ ದೇಶಗಳಲ್ಲಿ ರೂಪ ತಾಳಿದ ನಡೆವಳಿಕೆಗಳು ಸಮಾಜವಾದದ ಇತಿಹಾಸದಲ್ಲಿ ಬಹು ಮುಖ್ಯ ವಾದವು. ಸಮಾಜ ಸುಧಾರಣೆ ಹಿತವಚನಗಳಲ್ಲೇ ಪಠ್ಯವಸಾನ ಹೊಂದದೆ ಸುಧಾರಿತ ಸಮಾಜದ ಸಾಧನೆಗಾಗಿ ಶೋಷಿತವರ್ಗ ಚಳವಳಿಯನ್ನು ಆರಂಭಿಸಿತು. ಬರೆಹಗಾರರು ಚಳವಳಿಗೆ ಬೆಂಬಲವಿತ್ತರು, ಕಷ್ಟಮಯ ಬಾಳಿನಿಂದ ಕೂಡಿದ ಸಮಾಜಕ್ಕೆ ಪ್ರತಿಯಾಗಿ ಸುಖೀ ರಾಜ್ಯವೊಂದು ಇದೆ ಎಂದು ಹೇಳುವ ಗ್ರಂಥಗಳು ಹೇರಳವಾಗಿ ಹೊರಬಿದ್ದವು. ಇಂತಹ ಗ್ರಂಥ ವೊಂದನ್ನು ಬರೆದು ಪ್ರಸಿದ್ಧಿಯಾದವನೆಂದರೆ ಇಂಗ್ಲೆಂಡ್ ದೇಶದ ಥಾಮಸ್ ಮೋರ್ ಎಂಬಾತನು ಈತನು ಎಲ್ಲೂ ಇಲ್ಲದ ಆದರ್ಶರಾಜ್ಯ' (Utopia) ಎಂಬ ಗ್ರಂಥವನ್ನು 1516 ರಲ್ಲಿ ರಚಿಸಿ ತಾನಿದ್ದ ಸಮಾಜವನ್ನು ಕಟುವಾಗಿ ಮೂದಲಿಕೆಗೆ ಗುರಿಪಡಿಸಿದನು. ಆದರೆ ಅಂತಹ ರಾಜ್ಯ ಎಲ್ಲಿದೆ, ಅದನ್ನು ಪಡೆಯುವುದು ಹೇಗೆ ಎಂಬ ವಿಷಯಗಳ ಚರ್ಚೆಗೆ ಪ್ರವೇಶಿಸಲಿಲ್ಲ, ಆದು ದರಿಂದ ಥಾಮರ್ಸ ಮೋರ್‌ನ ಗ್ರಂಥ ಕಲ್ಪನಾ ಸಾಹಿತ್ಯವಾಗಿಯೇ ಉಳಿ ದಿದೆ. ಇಂತಹ ಗ್ರಂಥಗಳು ಜನಸಮುದಾಯದಲ್ಲಿ ಸುಖಮಯ ಸಮಾಜ ವೊಂದು ಸಾಧ್ಯವೆಂದೂ ಅಂತಹ ಸಮಾಜವೊಂದು ಇರುವುದೆಂಬ ಭಾವ ನೆಗೂ ಆಸರೆ ಕೊಟ್ಟವು. ಇಂಗ್ಲೆಂಡಿನಲ್ಲಿ 1640 ರಲ್ಲಿ ಉಂಟಾದ ಕ್ರಾಂತಿ ನೊಂದ ಜನಸಮು ದಾಯದ ಚಳವಳಿಗೆ ಬೆಂಬಲ ನೀಡಿತು. ಕ್ರಾಂತಿ ಉಂಟಾಗಲು ಅನೇಕ ಕಾರಣಗಳಿದ್ದವು, ಶೋಷಣೆಗೆ ಒಳಪಟ್ಟ ಜನಸಮುದಾಯವಿದ್ದಿತು. ರಾಜನ ನಿರಂಕುಶವರ್ತನೆ ವ್ಯಾಪಾರೀ ಮತ್ತು ಜರ್ವಾದಾರ ವರ್ಗದವ ರನ್ನು ಉದ್ರೇಕಗೊಳಿಸಿತ್ತು. ಆಚರಣೆಯಲ್ಲಿದ್ದ ಕಟ್ಟಳೆ ಕಾನೂನುಗಳು ವ್ಯಾಪಾರಿವರ್ಗ ಅಡ್ಡಿ ಆತಂಕಗಳಿಲ್ಲದೆ, ರಾಜನ ಮತ್ತು ರಾಜನ ಆಶ್ರಯ