4022 ವೈಜ್ಞಾನಿಕ ಸಮಾಜವಾದ ರಾಜಕೀ ಸೂಚಿಸಿದೆ. ಶೋಷಣೆಯಿಂದ ಪಾರಾಗಬೇಕಾದರೆ ಕಾರ್ಮಿಕರು ಕಾರ್ಯ ನಿರತರಾಗಬೇಕು ಸಂಘಟನೆ ಸಾಧಿಸಬೇಕು ಎಂದು ತಿಳಿಸಿದೆ. ಯದಿಂದ ದೂರಸರಿಯದೆ ಕಾರ್ಮಿಕವರ್ಗ ರಾಜಕೀಯದಲ್ಲಿ ಪ್ರವೇಶಿಸಬೇ ಕೆಂದು ಸೂಚಿಸಿದೆ. ಕಾರ್ಯಾಚರಣೆ ಏತಕ್ಕಾಗಿ, ಹೇಗೆ ನಡೆಸಬೇಕು ಮತ್ತು ಕಾರ್ಯದ ಗುರಿ ಏನು ಎಂಬುದನ್ನು ವಿಶದಪಡಿಸಿದೆ. ಕಾರ್ಯಾ ಚರಣೆ ವಿಸ್ತಾರಗೊಂಡಂತೆ, ಚಳವಳಿ ಮುಂದೆ ಸಾಗಿದಂತೆ, ಸ್ಥಳ, ಕಾಲ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ತತ್ತ್ವವನ್ನು ರೂಪಿಸಿಕೊಳ್ಳಬೇ ಕಂದು ತಿಳಿಸಿದೆ. له ವೈಜ್ಞಾನಿಕ ಸಮಾಜವಾದದ ಅನ್ವಯದಬಗ್ಗೆ ಹಲವರು ಮಾರ್ಕ್ಸ್ ಏಂಗೆಲ್ಪರ ವಾದಸರಣಿಯಲ್ಲಿ ಒಂದು ದೋಷವಿದೆ ಎಂದು ವಾದಿಸಿದ್ದಾರೆ. ಇವರ ವಾದಸರಣಿ ಈ ರೀತಿ ಇದೆ : ಬಂಡವಾಳಶಾಹಿ ಉತ್ಪಾದನಾಕ್ರಮ ಎಡೆಕೊಟ್ಟಿರುವ ವಿರಸಗಳೇ ಸಮಾಜವಾದದ ಆಗಮವನ್ನು ಅನಿವಾರ್ಯ ವನ್ನಾಗಿ ಮಾಡಿವೆ ಎಂದೂ, ಮತ್ತು ಕೈಗಾರಿಕಾ ಕಾರ್ಮಿಕವರ್ಗ ಸಮಾಜ ವಾದದ ಆಗಮನದ ಕರ್ತೃಗಳಾಗಿದ್ದಾರೆಂದೂ ಮಾರ್ಕ್ಸ್-ಏಂಗರು ತಿಳಿಸಿದ್ದಾರೆ. ವ್ಯವಸಾಯವೇ ಪ್ರಾಧಾನ್ಯವಾಗಿ ಉಳ್ಳ ಹಿಂದುಳಿದ ದೇಶ ಗಳಲ್ಲಿ ಕೈಗಾರಿಕಾ ಉದ್ಯಮಗಳಾಗಲೀ ಅಥವಾ ಕೈಗಾರಿಕಾ ಕಾರ್ಮಿಕ ವರ್ಗವಾಗಲೀ ಇಲ್ಲದಿರುವುದರಿಂದ ಸಮಾಜವಾದದ ಪ್ರಶ್ನೆಯೇ ಉದ್ಭವಿಸು ವುದಿಲ್ಲ. ಎರಡನೆಯದಾಗಿ, ಬಂಡವಾಳಶಾಹಿ ವ್ಯವಸ್ಥೆ ಅಭಿವೃದ್ಧಿ ಹೊಂದಿ ರುವ ದೇಶಗಳಾದ ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಇತರ ದೇಶಗಳಲ್ಲಿ ಸಮಾಜವಾದ ಅನಿವಾರ್ಯವಾಗಿ ಆಗಮಿಸಿಯೂ ಇಲ್ಲ ಮತ್ತು ಕಾರ್ಮಿಕವರ್ಗವನ್ನು ಮಾರ್ಕ್ಸ್‌ವಾದ ಆಕರ್ಷಿಸಿಯೂ ಇಲ್ಲ. ಆದುದರಿಂದ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಮಾರ್ಕ್ಸ್-ಏಂಗೆರು ಮಾಡಿರುವ ವಿಮರ್ಶೆ ತಪ್ಪಾಗಿದೆ ಮತ್ತು ಅವರು ನುಡಿದಂತೆ ಸಮಾಜವಾದದ ಆಗಮನ ಅನಿವಾರ್ಯವಾಗಿಲ್ಲ. ೮. ಮೇಲೆ ಹೇಳಿದ ವಾದದಲ್ಲಿ ತಿರುಳಿಲ್ಲ, ಮಾರ್ಕ್ಸ್-ಏಂಗರು ತಮ್ಮ ಕಾಲದ ಬಂಡವಾಳಶಾಹಿ ವ್ಯವಸ್ಥೆಯನ್ನು ವಿಮರ್ಶೆಗೆ ಗುರಿಮಾಡಿ ಸಮಾಜ (1) 4 ನೇ ಅಧ್ಯಾಯ ನೋಡಿ.
ಪುಟ:ಕಮ್ಯೂನಿಸಂ.djvu/೧೯೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.