೧೭೮ ವೈಜ್ಞಾನಿಕ ಸಮಾಜವಾದ ಯನ್ನು ಅಡಗಿಸಲು ಬಂಡವಾಳವರ್ಗ ಅಶಕ್ತವಾಗಿದೆಯೋ ಮತ್ತು ಸಮಾ ಜವಾದಿ ವ್ಯವಸ್ಥೆಯನ್ನು ಸ್ಥಾಪಿಸಲು ಧೈಯಪೂರಿತವಾದ ವ್ಯವಸ್ಥಿತ ಕಾರ್ಮಿಕವರ್ಗದ ಸಂಘಟನೆ ಇರುವುದೋ ಅಲ್ಲೆಲ್ಲಾ ಸಮಾಜವಾದೀ ಚಳ ವಳಿ ವಿಜಯಗಳಿಸುತ್ತದೆ. ಉಳಿದಕಡೆ ಕಮ್ಯೂನಿಸ್ಟ್ ಪಕ್ಷ ಬಂಡವಾಳ ವರ್ಗದ ಎದುರು ಕಕ್ಷಿಯಾಗಿ ನಿಲ್ಲುತ್ತದೆ. ವೈಜ್ಞಾನಿಕ ಸಮಾಜವಾದ ಕೇವಲ ಕೈಗಾರಿಕೆಯಲ್ಲಿ ಮುಂದುವರಿದಿ ರುವ ಬಂಡವಾಳಶಾಹಿ ರಾಷ್ಟ್ರಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂಬ ವಾದ ಮಾರ್ಕ್ಸ್ವಾದವನ್ನು ಸಂಕುಚಿತಗೊಳಿಸುವ, ಬಂಡವಾಳಶಾಹಿ ವ್ಯವ ಸ್ಥೆಯ ಚಲನವಲನೆಗಳ ಬಗ್ಗೆ (the law of motion) ಮಾರ್ಕ್ಸ್- ವಿಂಕ್ಸಲರು ಇರುವ ವಿವರಣೆಯನ್ನು ನಿರ್ಲಕ್ಷಿಸುವ ಮತ್ತು ಮಾರ್ಕ್ಸ್ ಏಂಗೆರ ವಾದದ ಪ್ರತಿಪಾದನಾನಂತರ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಪರಿಗಣಿಸುವ ದೃಷ್ಟಿಕೋನವಾಗುತ್ತದೆ. ಇರುವ ಮೊದಲನೆಯದಾಗಿ, ಬಂಡವಾಳಶಾಹಿ ವ್ಯವಸ್ಥೆಯ ಲಕ್ಷಣಗಳು ಕೈಗಾರಿಕೆಯಲ್ಲಿ ಮುಂದುವರಿದ ಮತ್ತು ಕಾರ್ಮಿಕವರ್ಗ ಆರ್ಥಿಕವ್ಯವಸ್ಥೆಗೇ ಮಾಸಲಲ್ಲ. ದುಡಿಮೆಯವರಿಂದ ಉತ್ಪಾದನೆ ನಡೆದು ಲಾಭದೃಷ್ಟಿಯಿಂದ ಮತ್ತು ಮಾರುಕಟ್ಟೆಯ ದೃಷ್ಟಿಯಿಂದ ಸರಕುಗಳು ಎಲ್ಲೆಲ್ಲಿ ತಯಾರಾಗುತ್ತಿವೆಯೋ ಅಲ್ಲೆಲ್ಲಾ ಬಂಡವಾಳಶಾಹಿ ವ್ಯವಸ್ಥೆಯ ಲಕ್ಷಣಗಳು ಇವೆ. ಆಧುನಿಕ ಬೇಸಾಯ ಬಂಡವಾಳಶಾಹಿ ಬೇಸಾಯದ ರಂಗವಾಗಿದೆ. ಮಾರುಕಟ್ಟೆಯ ದೃಷ್ಟಿಯಿಂದ ಉತ್ಪಾದನೆ ನಡೆಯುತ್ತಿದೆ. ಉತ್ಪಾದನಾ ಸಾಧನವಾದ ಭೂಮಿ ಜಮಿನ್ದಾರವರ್ಗಕ್ಕೆ ಸೇರಿದ್ದಾಗಿ, ಶೋಷಣೆಗೆ ಸಿಲುಕಿರುವ ಅಗಾಧ ರೈತಸ್ತೋಮವಿದೆ. ಎರಡನೆಯದಾಗಿ, ಕೈಗಾರಿಕಾ ರಾಷ್ಟ್ರಗಳು ಕೈಗಾರಿಕಾ ರಾಷ್ಟ್ರಗ ಳಾಗಿಯೇ ಜನಿಸಿದವು ಮತ್ತು ಮುಂದೂ ಇರುವುವು; ವ್ಯವಸಾಯವೇ ಪ್ರಾಧಾನ್ಯವಾಗಿವುಳ್ಳ ರಾಷ್ಟ್ರಗಳು ಮತ್ತು ಹಿಂದುಳಿದ ರಾಷ್ಟ್ರಗಳು ಮುಂದೆಯೂ ಸಹ ಹಾಗೇ ಇರುವುವು ಎಂಬ ತಪ್ಪು ಭಾವನೆ ಮಾರ್ಕ್ಸ್ ವಾದ ವನ್ನು ಅಪಾರ್ಥಮಾಡಿಕೊಳ್ಳುವುದಕ್ಕೆ ಕಾರಣವಾಗಿದೆ. ಈ ತಪ್ಪು ವಿವಿಧದೇಶ ಗಳಲ್ಲಿರುವ ಅಸಮ ಬೆಳವಣಿಗೆ' (The law of uneven develop- ment) ನಿಯಮವನ್ನು ನಿರ್ಲಕ್ಷಿಸುವಂತೆ ಮಾಡಿದೆ. ಯಾವ ರಾಷ್ಟ್ರವೂ
ಪುಟ:ಕಮ್ಯೂನಿಸಂ.djvu/೧೯೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.