ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದ ಮತ್ತು ಭಾರತ ೧೮೫ ಸಮಾಜ ವಿಕಾಸದಲ್ಲಿ ಬಂಡವಾಳಶಾಹಿ ಉತ್ಪಾವನ ಕ್ರಮ ಕಟ್ಟ ಕಡೆಯ ಘಟ್ಟ ವಾಗಿದೆ ಎಂದೂ, ಬಂಡವಾಳಶಾಹಿ ವ್ಯವಸ್ಥೆಯ ಸಹ ಇತರ ಘಟ್ಟಗಳು ನಶಿಸಿ ದಂತೆ ಇದೂ ನಶಿಸುತ್ತದೆಂದೂ, ಅದು ಹಾಗೆ ನಶಿಸಲು ಅದು ಎಡೆ ಕೊಟ್ಟಿರುವ ವಿರಸಗಳೆ: ಕಾರಣವಾಗಿದೆ ಎಂದೂ ತನ್ನ ಅಂತ್ಯವನ್ನು ತಾನೇ ತಂದುಕೊಳ್ಳು ಇದೆ ಎಂದೂ, ಬಂಡವಾಳಶಾಹಿ ವ್ಯವಸ್ಥೆಯ ಅಂತ್ಯ ಸಮಾಜವಾದೀ ವ್ಯವಸ್ಥೆಯ ಆಗಮನಕ್ಕೆ ನಾಂದಿ ಎಂದೂ ತಿಳಿಸಿದನು. ಅದರಂತೆ ಶ್ರೀ ಡಾಂಗ ಮತ್ತು ಶ್ರೀ ಕೊಸಾಂಬೀ ಅವರು ಉತ್ಪದನಾಕ್ರಮ ಎಡೆಕೊಡುವ ಆರ್ಥಿಕ ವ್ಯವಸ್ಥೆಯ ಆಧಾರದಮೇಲೆ ಪ್ರಾಚೀನ, ಊಳಿಗಮಾನ್ಯ ಮತ್ತು ಬಂಡವಾಳಶಾಹಿ ಘಟ್ಟಗಳು ಭಾರತದ ಇತಿಹಾಸದಲ್ಲೂ ಕಂಡುಬರುತ್ತವೆಂದು ವಾದಿಸಿದ್ದಾರೆ. ಈ ಮೇಲ್ಕಂಡ ವಾದಕ್ಕೆ ಸಮರ್ಥನೆಯೂ ಸಿಗುತ್ತದೆ, ಕೌಟಿಲ್ಯನ ಅರ್ಥಶಾಸ್ತ್ರ' ವನ್ನು ಓದಿದರೆ ಪ್ರಾಚೀನ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ದಾಸ್ಯ ಪದ್ಧತಿ ಇತ್ತೆಂಬುದು ವ್ಯಕ್ತವಾಗಿ ಕಾಣುತ್ತದೆ. ( ಕೌಟಲ್ಯನ ಅರ್ಥಶಾಸ್ತ್ರ', ಡಾ. ಶಾಮಾಶಾಸ್ತ್ರಿಗಳು ಸಂಪುಟ 1951, ಪುಟ 131, 137, XIII ನೇ ಆಧ್ಯಾಯ ಮತ್ತು ಪುಟ 253, 255 260). ಆದರೆ ಈ ದಾಸ್ಯ ಪದ್ಧತಿ ಯೂರೋಪಿ ನಲ್ಲಿ ಗುಲಾಮಗಿರಿ ಇದ್ದಂತೆ ಇದ್ದಿತೇ, ದಾಸ್ಯ ಕ್ಕೂ ಜಾತಿ ಪದ್ಧತಿಗೂ ಏನು ಸಂಬಂಧವಿತ್ತು, ದಾಸ್ಯ ಯಾವ ಕಾಲದಲ್ಲಿ ಕೊನೆಗೊಂಡಿತು, ದಾಸ್ಯ ಕೊನೆಗೊಂಡ ಮೇಲೆ ಯಾವ ಆರ್ಥಿಕ ಸಂಬಂಧಗಳು ಬಂದವು, ಭಾರತದಲ್ಲಿ ಊಳಿಗಮಾನ್ಯ ಪದ್ದ ) ಯೂರೋಪು ಖಂಡದಲ್ಲಿ ಇದ್ದಂತೆ ಇತ್ತೇ ಅಥವಾ ಬೇರೆ ಯಾವ ರೂಪದಲ್ಲಿ ಇದಿ ಕು ಎಂದು ಆರಂಭವಾಯಿತು, ಇತ್ಯಾದಿಗಳ ಬಗ್ಗೆ ಖಚಿತ ವಿವರಗಳು ಇನ ದೊರೆಯಬೇಕಾಗಿದೆ. ಆದುದರಿಂದ 20 ನೇ ಶತಮಾನಕ್ಕೆ ಹಿಂದೆ ಇಡ ಆರ್ಥಿಕ ವ್ಯವಸ್ಥೆಯ ಬಗ್ಗೆ ನಿರ್ವಿವಾದದ ಕೆಲವು ಲಕ್ಷಣಗಳನ್ನು ಮಾತ್ರ ಇಲ್ಲಿ ತಿಳಿಸ ಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಉತ್ಪಾದನೆಯು ಬಹು ಹಿಂದ.ಳಿದ ಉಪಕರ ಣಗಳ ಸಹಾಯದಿಂದ ನಡೆಯುತ್ತಿದ್ದಿತು, ಗುಲಾಮರು (ದಾಸ) ಮತ್ತು ಶೂದ್ರರು ಉತ್ಪಾದನೆ ಮಾಡುತ್ತಿದ್ದರು. ಭೂಮಿ ಖಾಸಗೀ ಸ್ವಾಮ್ಯಕ್ಕೆ ಒಳಪಟ್ಟ `ತು ಸ್ವಾವಲಂಬೀ ಆರ್ಥಿಕ ವ್ಯವಸ್ಥೆ ಇದ್ದಿತು. ರಾಜನಿಗೆ ಸಲ್ಲುತ್ತಿದ್ದ ಭಾಗ ಮತ್ತು ಹೆಚ್ಚುವರಿ ಉತ್ಪಾದನೆ ಸರಕುಗಳಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಿತು, ಈ ರೀತಿಯ ಉತ್ಪಾದನಾ ವ್ಯವಸ್ಥೆ 10 ಮತ್ತು 11 ನೇ ಶತಮಾನಗಳವರೆಗೂ ಮುಂದು ವರೆಯಿತು. ತದನಂತರ ಪರಕೀಯರಿಂದ ಧಾಳಿ, ಧಾಳಿಯ ಫಲವಾಗಿ ದೇಶದಲ್ಲಿ ವಿಷ್ಣವ, ಅವ್ಯವಸ್ಥೆ ಮತ್ತು ಪಾಳೆಯಗಾರಿಕೆ ಇವು ಉತ್ಪಾದನಾ ಸಂಬಂಧಗಳಲ್ಲಿ ಹಲವು ಬದಲಾವಣೆಗಳನ್ನು ತಂದವು. ಸಣ್ಣ ಪುಟ್ಟ ರಾಜರುಗಳು ಮತ್ತು ಪಾಳೆಯ Tಾರರು ಭೂ ಮಾಲೀಕರಾದರು, ಜೊತೆಗೆ, ಜೋಡಿ, ಇನಾಂ, ಅಗ್ರಹಾರ, ಜಹಗೀರ್", ಇತ್ಯಾದಿ ರೂಪಗಳಲ್ಲಿ ಹಲವರು ಭೂಮಿಯನ್ನು ಪಡೆದು ಜರ್ಮಾ