ಸಮಾಜವಾದ ಮತ್ತು ಭಾರತ ೧೮೭ ಮನೋಭಾವವನ್ನು ಹೊಂದಿಲ್ಲವೆಂದು ದೂರುವವರು ಅದರ ಅಂತರ ರಾಷ್ಟ್ರೀಯತೆಯನ್ನು ಅರ್ಥಮಾಡಿಕೊಳ್ಳಲು ಇಷ್ಟವಿಲ್ಲದವರಾಗಿದ್ದಾರೆ.
- ವಿವಿಧ ದೇಶಗಳ ಕಾರ್ಮಿಕರೇ ಒಂದುಗೂಡಿ' ಎಂದು ಮಾರ್ಕ್ಸ್ ನುಡಿ
ವನ್ನು, ಕಾರ್ಮಿಕವರ್ಗದ ಚಳವಳಿ ಎಲ್ಲೆ? ಇರಲಿ ಅದರ ಸ್ವರೂಪ ಒಂದೇ, ಬಂಡವಾಳಶಾಹಿ ವ್ಯವಸ್ಥೆಯ ವಿರಸಗಳನ್ನು ನಿರ್ಮೂಲಮಾಡಲು ಮಾರ್ಕ್ಸ್-ಏಂಗೆಲ್ಸರು ಸೂಚಿಸಿರುವ ವೈಜ್ಞಾನಿಕ ಸಮಾಜವಾದದ ಮಾರ್ಗ ದಿಂದ ಅಥವಾ ಬೇರೊಂದು ವಿಧದ ಸಮಾಜವಾದದ ಮೂಲಕ ಸಾಧ್ಯವೇ- ಧರ್ಮ ಸಮಾಜವಾದ, ಆಧ್ಯಾತ್ಮಿಕ ಸಮಾಜವಾದ, ಪ್ರಜಾಸತ್ತೆ ಸಮಾಜ ವಾದ, ಗಾಂಧೀ ಸಮಾಜವಾದ, ಸರೋದಯ - ಎಂಬ ಪ್ರಶ್ನೆ ಉಳಿದಿದೆ. ಐತಿಹಾಸಿಕ ಭೌತವಾದ, ಹೆಚ್ಚಿಗೇ ಮಾಲ್ಯ, ವರ್ಗಹೋರಾಟ, ಕಾರ್ಮಿಕವರ್ಗದ ಕ್ರಾಂತಿಕಾರಕ ಚ ತವಳಿ, ಬಂಡವಾಳಶಾಹಿ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ಯ ಮೂಲೋತ್ಪಾಟನೆ, ಕಾರ್ಮಿಕ ವರ್ಗದ ಏಕೈಕ ಪ್ರಭುತ್ವ ಮಾರ್ಕ್ಸ್ ವಾದದ ಲಕ್ಷಣಗಳಾಗಿವೆ. ಉತ್ಪನ್ನ ಸಾಧನಗಳ ಸಮಾಜೀಕರಣ, ಬಂಡವಾಳವರ್ಗದ ನಿರ್ಮೂಲ, ಬಂಡವಾಳವರ್ಗದಿಂದ ಬರುವ ಪ್ರತಿಭಟನೆಯನ್ನು ಮುರಿಯಲಿಕ್ಕಾಗಿ ಇರುವ ಕಾರ್ಮಿಕವರ್ಗದ ಏಕೈಕ ಪ್ರಭುತ್ವ, ವರ್ಗರಹಿತ ಮತ್ತು ಶೋಷಣಾರಹಿತ ಸಮಾಜವ್ಯವಸ್ಥೆ, ಉತ್ಪಾದನೆ ಹೆಚ್ಚಿಸಲು ಯೋಜನೆಗಳು ಸಮಾಜ ಸಮಸ್ಯೆಗಳ ಬಗ್ಗೆ ವೈಜ್ಞಾ ನಿಕಮನೋಭಾವ, ವಿಜ್ಞಾನದ ಬಳಕೆ, ತಾಂತ್ರಿಕ ಮುಂದೋಟ ಇವೇ ಸಮಾಜವಾದೀ ವ್ಯವಸ್ಥೆಯಾಗಿವೆ. ಬಂಡವಾಳಶಾಹಿ ವ್ಯವಸ್ಥೆಯ ವಿರಸ ಗಳು ಸಮಾಜವಾದೀ ವ್ಯವಸ್ಥೆಯನ್ನು ಆವಶ್ಯಕವಾಗಿಯೂ ಅನಿವಾರ್ಯ ವಾಗಿಯೂ ಮಾಡಿವೆ. ಆದುದರಿಂದ ಸಮಾಜವಾದೀ ವ್ಯವಸ್ಥೆ ಯ ಸ್ಥಾಪನೆ ಬೇರೆ ಯಾವ ಹೆಸರಿನಲ್ಲೇ ನಡೆಯಲಿ-ಸಮಾಜವಾದೀ ಮಾದ ರಿಯ ಸಮಾಜ ರಚನೆ ಎಂದೇ ಇರಲಿ-ಉತ್ಪಾದನಾ ವಸ್ತು ಗಳ ಮೇಲಿರುವ ಖಾಸಗೀ ಸ್ವಾಮ್ಯ ದ ಬಗ್ಗೆ ಮತ್ತು ಬಂಡವಾಳ ವರ್ಗದ ನಿರ್ಮೂಲದ ಬಗ್ಗೆ ಯಾವ ಧೋರಣೆಯನ್ನು ಮತ್ತು ಕಾರ್ಯಕ್ರಮವನ್ನು ಅಧಿಕಾರದಲ್ಲಿರುವ ವರ್ಗ ಕೈಗೊಳ್ಳುತ್ತ ದಂಬುದು ಮುಖ್ಯವಾದದ್ದು. ಈ ವಿಷಯಗಳ ಬಗ್ಗೆ ಖಚಿತ ಅಭಿ