________________
ವೈಜ್ಞಾನಿಕ ಸಮಾಜ ವಾದದ ರಿಂದ ಪ್ರತಿಪಾದಿತವಾದ ಬಂಡವಾಳಷಾಹಿ ಅರ್ಥಶಾಸ್ತ್ರಕ್ಕೆ (Capitalist Economics) ವಿಪುಲ ಪುರಸ್ಕಾರ ಸಿಕ್ಕಿತು, ಬಂಡವಾಳಷಾಹಿ ಆರ್ಥಿಕ ವ್ಯವಸ್ಥೆ ಸಕಲರಿಗೂ ನ್ಯಾಯವನ್ನೂ ಅವರವರ ಯೋಗ್ಯತಾನುಸಾರ ಸುಖ ಸಂಪತ್ತುಗಳನ್ನೂ ದೊರಕಿಸಿಕೊಟ್ಟಿದೆ ಎಂದು ಸಾರಲಾಯಿತು. ಕಾರ್ಮಿ ಕರ ಶೋಷಣೆಯೆ ಇಲ್ಲವೆಂದು ಬಂಡವಾಳಷಾಹಿ ಅರ್ಥಶಾಸ್ತ್ರ ಸಮರ್ಥಿ ಸಿತು, ಆದರೆ ವಾಸ್ತವವಾಗಿ ಕಾರ್ಮಿಕವರ್ಗದ ಸ್ಥಿತಿಗತಿಗಳೇ ಬೇರೆಯಾಗಿ ದ್ದವು. ಬಂಡವಾಳ ವ್ಯವಸ್ಥೆಯ ಬಗ್ಗೆ ಎಲ್ಲ ಸಮರ್ಥನೆಯೂ ಕಾರ್ಮಿಕ ವರ್ಗದ ಚಳವಳಿಯನ್ನು ತಡೆಗಟ್ಟಲು ಅಶಕ್ತವಾದವು. ಕಾರ್ಮಿಕವರ್ಗದ ಪ್ರತಿಭಟನೆ ಮತ್ತು ಚಳವಳಿಗೆ ಶೋಷಣೆ ಮುಖ್ಯ ಕಾರಣವಾಯಿತು. ಶೋಷಣೆ ತಪ್ಪಿ ಎಲ್ಲರಿಗೂ ನ್ಯಾಯ ಸಿಗುವಂತಹ ವ್ಯವಸ್ಥೆ ಬಗ್ಗೆ ಜಿಜ್ಞಾಸೆ ಪ್ರಾರಂಭವಾಯಿತು. ಖಾಸಗೀ ಸ್ವಾಮ್ಯವನ್ನು ನಾಶಪಡಿಸಿದಹೊರತು ಶೋಷಣೆ ತಪ್ಪಿದ್ದಲ್ಲವೆಂದೂ, ಶೋಷಣೆಗೂ ಆರ್ಥಿಕ ಅಸಮಾನತೆಗೂ ಖಾಸಗೀಸ್ವಾಮ್ಯವೇ ಕಾರಣವೆಂದೂ, ಆರ್ಥಿಕ ಸಮಾ ನತೆಯಿಂದ ಮಾತ್ರ ಸಮಾಜದಲ್ಲಿ ನ್ಯಾಯಸ್ಥಾಪನೆ ಸಾಧ್ಯವೆಂದೂ ಭಾವನೆ ಬೇರೂರಿತು. ಹೀಗೆ ಸಮಾಜವಾದ ಜನ್ಮತಾಳಿತು, ಆದರೆ ಸಮಾಜವಾದೀ ಸಮಾಜವನ್ನು ತರುವುದು ಹೇಗೆ ? ಸಮಾಜ ವಾದೀ ಸಮಾಜ ಬಂದರೂ ಅಲ್ಲಿ ಸಮಾನತೆ ಹೇಗಿರಬೇಕು, ಇವುಗಳನ್ನು ತರುವುದಕ್ಕೆ ಯಾರು ಮುಂದಾಳತ್ವ ವಹಿಸಬೇಕು. ಅಂತಹ ಸಮಾಜದಲ್ಲಿ ಸರ್ಕಾರ, ಆಡಳಿತ, ಹಕ್ಕು ಬಾಧ್ಯತೆಗಳು ಹೇಗಿರಬೇಕು, ನ್ಯಾಯ ಸಮಾಜ ಎಂದರೇನು, ಎಂಬೀ ವಿಷಯಗಳು ಚರ್ಚೆಗೆ ಆಕರವಾದವು. ಸಮಾಜ ವಾದಿಗಳಲೆ ಏಕಾಭಿಪ್ರಾಯವಿರಲಿಲ್ಲ. ಹಲವರು ಹಲವು ರೀತಿಯಲ್ಲಿ ಸಮಾಜವಾದೀ ಸಮಾಜವನ್ನು ಬಣ್ಣಿಸಿದರು. ಕೆಲವರು ಬುದ್ದಿ ಶಕ್ತಿಯ ಬಲ ದಿಂದ ನ್ಯಾಯ ಸಮಾಜವನ್ನು ರಚಿಸಿ ಅದನ್ನು ಪ್ರದರ್ಶಿಸಿದರೆ ಜನರು ಮೆಚ್ಚಿ ಅನುಸರಿಸುವರೆಂದು ತಿಳಿಸಿದರು. ಇನ್ನು ಕೆಲವರು ಸ್ವಾಮ್ಯವನ್ನು ನಾಶಪಡಿಸಿದರೆ ಸಾಕು, ಮಿಕ್ಕದ್ದೆಲ್ಲವೂ ತನ್ನಷ್ಟಕ್ಕೆ ತಾನೆ ರೂಪಗೊಂಡು ನ್ಯಾಯ ಲಭಿಸುವುದೆಂದು ತಿಳಿಸಿದರು. ಮತ್ತೆ ಕೆಲವರು ಮನಃ ಪರಿವರ್ತ ನೆಯ ಮೂಲಕ, ಸ್ವಾಮ್ಯವರ್ಗವನ್ನು ಒಲಿಸಿಕೊಳ್ಳುವುದರ ಮೂಲಕ, ಅವರಲ್ಲಿ ದಾನ ಧರ್ಮ ಬುದ್ಧಿಯನ್ನು ಉತ್ಪನ್ನ ಮಾಡುವುದರ ಮೂಲಕ