ಈ ಪುಟವನ್ನು ಪರಿಶೀಲಿಸಲಾಗಿದೆ
೪೨
ವೈಜ್ಞಾನಿಕ ಸಮಾಜವಾದ

ಒತ್ತಿ ಹೇಳುತ್ತದೆ, ಹೊಸ ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವುದಕ್ಕೆ ತತ್ತ್ವ ಸಾಧ್ಯ ಮಾಡಿಕೊಡದಿದ್ದರೆ ಪ್ರತಿಪಾದನೆಯಾಗಿರುವ ತತ್ವದಲ್ಲಿ ಮಾರ್ಪಾಡು ಅಗತ್ಯವೆಂದು ಸೂಚಿಸುತ್ತದೆ. ಪ್ರತಿ ಸಮಯದಲ್ಲೂ ಸನ್ನಿ ವೇಶ, ಸ್ಥಿತಿಗತಿಗಳು, ತಮ್ಮ ಮತ್ತು ಹೋರಾಟ ಇವುಗಳಲ್ಲಿ ಸಮನ್ವಯ ಇರಬೇಕೆಂದು ವಿಧಿಸುತ್ತದೆ. ಶೋಷಿತವರ್ಗವನ್ನು ಶೋಷಣೆಯಿಂದ ವಿಮುಕ್ತರನ್ನಾಗಿ ಮಾಡುವುದೇ ಮಾರ್ಕ್ಸ್ ತತ್ತ್ವದ ಮೂಲ ಉದ್ದೇಶ ವಾದ್ದರಿಂದ ಅದು ಯಾವಾಗಲೂ ದುಡಿಮೆ ಮಾಡುವ ವರ್ಗದ ಪ್ರತಿನಿಧಿ ಶೋಷಣೆ ಇಲ್ಲವೆಂದು ಹೇಳುವವರನ್ನೂ, ಶೋಷಣೆಯಮೇಲೆ ಮುಸುಕ ನ್ನೆಳೆದು ಅದನ್ನು ಮರೆಮಾಚಿರುವವರನ್ನೂ, ದೈವಸಿಯಾಮಕ, ದೇವರಲ್ಲಿ ಮರೆಹೋಗೆಂದು ಹೇಳುವ ಮತೀಯ ತತ್ತ್ವಗಳನ್ನೂ, ಸತ್ಯಾನ್ವೇಷಣೆಯ ಸೋಗಿನಲ್ಲಿ ಕಾಲಹರಣಮಾಡುತ್ತಿರುವ ವಿದ್ವನ್ಮಣಿಗಳನ್ನೂ, ಅಜ್ಞಾನ ದಿಂದ ಕೂಡಿರುವ ಮೌಡ್ಯ ಜನಸಮುದಾಯಕ್ಕೆ ಅಚ್ಚರಿ ಉಂಟುಮಾಡು ತಿರುವ ರಾಜಮಂತ್ರ ಪ್ರವೀಣರು, ರಾಜ್ಯನೀತಿ ನಿಪುಣರು ಮತ್ತು ಅರ್ಥ ಶಾಸ್ತ್ರ ಪಂಡಿತರನ್ನೂ ಕಟುವಾಗಿ ಟೀಕೆಗೆ ಗುರಿಪಡಿಸಿದೆ. ಕಾರ್ಮಿಕ ವರ್ಗಕ್ಕೆ ಬೇಕಾಗಿರುವ ತತ್ವ ನಿರೂಪಣೆಯನ್ನು ಅಂಜದೆ ನೈಜವಾಗಿ ತಿಳಿಸುತ್ತದೆ, ಆರ್ಥಿಕ ಜೀವನವೇ ಬಾಳಿನ ಆಧಾರ ಸ್ತಂಭವೆಂದು ಒತ್ತಿ ಹೇಳಿ, ಆರ್ಥಿಕ ಜೀವನದ ಇತಿಹಾಸವನ್ನು ಆದಿಯಿಂದ ಬಂಡವಾಳಶಾಹಿ ಸಮಾಜದವರೆಗೆ ನಿರ್ಭಯವಾಗಿ ವಿಶದಪಡಿಸಿದೆ. ಹಾಗೆ ತಿಳಿಸಲು ಹೊರಟು ತನ್ನದೇ ಆದ ಹೊಸ ಸಿದ್ದಾಂತವನ್ನು ಪ್ರತಿಪಾದಿಸಿದ, ಬಂಡ ವಾಳ ಉತ್ಪಾದನಾ ವ್ಯವಸ್ಥೆಯಲ್ಲಿರುವ ವಿರೋಧಾಭಾಸ ಸ್ವಾಮ್ಯಕ್ಕೆ ಮೃತ್ಯು ವಾಗುತ್ತದೆಂದೂ, ಅದನ್ನು ತೊಡೆಯಲು ಕಾರ್ಮಿಕವರ್ಗ ಜನ್ಮತಾಳಿದೆ ಯೆಂದೂ ತಿಳಿಸಿದೆ. ಒಂದು ಪಕ್ಷ ಮಾರ್ಕ್ಸ್‌ವಾದ ಶೋಷಿತವರ್ಗದ ಪಕ್ಷೀಯ ಸಿದ್ಧಾಂತವಾಗಿ ಕಂಡರೆ, ಇರುವ ಮತ್ತು ಹಿಂದಿನ ಸಿದ್ದಾಂತ ಗಳಿಗೆ ವಿರುದ್ಧವಾಗಿದ್ದರೆ, ಅದು ಇತಿಹಾಸದ ಉದ್ದಕ್ಕೂ ಸ್ವಾಮ್ಯ ವರ್ಗ ದಿಂದ ನಡೆದಿರುವ ಶೋಷಣೆಯ ಮತ್ತು ಶೋಷಕವರ್ಗದ ಖಂಡನೆ ಮಾಡುವ ಪಕ್ಷವನ್ನಾಗಿ ಮಾಡಿದೆ. ಸಮಾಜದಲ್ಲಿ ದುಡಿಮೆ ಮಾಡುವ ಜನರಿಗೆ ಮಾತ್ರ ಸ್ಥಳವಿರುವುದರಿಂದ ಶೋಷಣೆಮಾಡುವವರಿಗೆ ಸ್ಥಳವಿಲ್ಲ. ಹಾಗೆಯೇ ಶೋಷಣೆಯನ್ನು ಸಮರ್ಥಿಸುವ ಸಿದ್ದಾಂತಗಳಿಗೂ ಸ್ಥಳವಿಲ್ಲ. ಮಾರ್ಕ್ಸ್