೫೧ ವೈಜ್ಞಾನಿಕ ಸಮಾಜವಾದದ ಆಧಾರ ಹೊಂದುತ್ತದೆ. ಇದರಲ್ಲಿ ಆಗುವ ಬದಲಾವಣೆಗಳನ್ನು ನಿರ್ದಿಷ್ಟವಾಗಿ ಗುರ್ತಿಸಬಹುದು. ಆರ್ಥಿಕ ಅಸ್ತಿಭಾರದಲ್ಲಿ ಬದಲಾವಣೆಯೇ ಪ್ರಾರಂಭ, ಅದಕ್ಕೆ ಹೊದಿಕೆಯಂತಿರುವ (Superstructure) ರಾಜಕೀಯ ವ್ಯವಸ್ಥೆ, ನ್ಯಾಯ, ತತ್ತ್ವ, ಪಾರಮಾರ್ಥಿಕ ದೃಷ್ಟಿ ಮತ್ತು ಮನೋಭಾವ ಗಳು ಎಲ್ಲವೂ ಬದಲಾವಣೆ ಹೊಂದುತ್ತವೆ. ಇವುಗಳಲ್ಲಿ ಬದಲಾವಣೆಗಳು ಸ್ವಲ್ಪ ನಿಧಾನ ಬದಲಾವಣೆಯಾದ ಆರ್ಥಿಕ ವ್ಯವಸ್ಥೆಗೂ ಹಳೆಯ ಭಾವನೆ ಗಳಿಗೂ ಮತ್ತು ವ್ಯವಸ್ಥೆಗಳಿಗೂ ಹೊಂದಾಣಿಕೆ ಇಲ್ಲವೆಂದು ಮನದಟ್ಟಾಗು ತದೆ. ಈ ರೀತಿಯಾದ ಜಾಗೃತಿ ಜೀವನದಲ್ಲಿರುವ ವಿರೋಧಗಳಿಂದಲೂ ಮತ್ತು ಉತ್ಪಾದನಾ ಸಂಬಂಧಗಳಿಗೂ ಉತ್ಪಾದನಾ ಶಕ್ತಿಗಳಿಗೂ ತಲೆ ದೋರುವ ವಿರಸಗಳಿಂದ ಉಂಟಾಗುತ್ತದೆ. ಉತ್ಪಾದನಾ ಶಕ್ತಿಗಳು ಪೂರ್ಣವಾಗಿ ಅಭಿವೃದ್ಧಿ ಹೊಂದಲು ಮತ್ತು ಅವು ಹಾಗೆ ಅಭಿವೃದ್ಧಿ ಹೊಂದಲು ಪೂರ್ಣ ಅವಕಾಶವಿರುವವರೆಗೂ ಯಾವ ಸಮಾಜ ವ್ಯವಸ್ಥೆಯೂ ಗತಿಸುವುದಿಲ್ಲ, ಮತ್ತು ಹಳೆಯ ಉತ್ಸಾ ದನಾ ವ್ಯವಸ್ಥಾಕ್ರಮದ ಮೇಲೆ ನಡೆಯುತ್ತಿರುವ ಆರ್ಥಿಕ ವ್ಯವಸ್ಥೆ ಸರಿ ಪಕ್ಕ ವಾಗುವವರೆಗೂ ಹೊಸ ಉತ್ಪಾದನಾ ಸಂಬಂಧಗಳು ಮೂಡುವುದಿಲ್ಲ. ಯಾವ ಕೆಲಸವು ಸಾಧ್ಯವೋ ಆ ಕೆಲಸವನ್ನು ಮಾಡುವುದು ಗುರಿಯಾಗು ಇದೆ ; ಮಾನವರು ಅದರಲ್ಲಿ ನಿರತರಾಗುತ್ತಾರೆ. ಆದುದರಿಂದ ಸಮಾಜದ ಬದಲಾವಣೆಗೆ ಯತ್ನಿಸುವ ಕಾರ್ಯಕ್ಕೆ, ಹಾಗೆ ಯತ್ನಿಸಿ ಸಫಲವಾಗುವುದಕ್ಕೆ, ಉತ್ಪಾದನಾ ವ್ಯವಸ್ಥಾಕ್ರಮದಲ್ಲಿ ಸ್ಥಳವಿರಬೇಕು, ಅಥವಾ ಅದಕ್ಕೆ ಸೌಲಭ್ಯ ಗಳಿರಬೇಕು ಅಥವಾ ಸೌಲಭ್ಯಗಳು ಸೃಷ್ಟಿ ಹೊಂದುತ್ತಿರುವ ಸ್ಥಿತಿಯಲ್ಲಿರ ಬೇಕು, ಈ ದೃಷ್ಟಿಯಿಂದ ಗತಿಸಿರುವ ಪ್ರಾಚೀನ ಮತ್ತು ಊಳಿಗಮಾನ್ಯ ಪದ್ದತಿಯ ಆರ್ಥಿಕ ವ್ಯವಸ್ಥೆಗಳು ಸಮಾಜದ ಆರ್ಥಿಕ ವಿಕಾಸದಲ್ಲಿ ಕ್ರಮ ವಾಗಿ ಕಾಣಿಸಿಕೊಂಡ ಘಟ್ಟಗಳಾಗಿವೆ. ಈಗ ಕೊನೆಯ ಘಟ್ಟವಾಗಿ ವಿರಸಗಳನ್ನೊಳಗೊಂಡ ಬಂಡವಾಳ ವ್ಯವಸ್ಥೆ ಮತ್ತು ಸಂಬಂಧಗಳು ಇವೆ. ಬಂಡವಾಳ ವ್ಯವಸ್ಥೆಯ ಗರ್ಭದಲ್ಲಿ ಜನಿಸುತ್ತಿರುವ ಉತ್ಪಾದನಾ ಶಕ್ತಿಗಳು, ಭೌತಿಕ ಸ್ಥಿತಿಗತಿಗಳನ್ನು (Material Conditions) ಕಲ್ಪಿಸಿಕೊಡು
ಪುಟ:ಕಮ್ಯೂನಿಸಂ.djvu/೬೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.