ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ವೈಜ್ಞಾನಿ ಸಮಾಜವಾದ ತಂದಿತ್ತು, ಆರ್ಥಿಕ ವ್ಯವಸ್ಥೆ ಮಾರ್ಪಾಡು ಹೊಂದಿತು. ಊಳಿಗಮಾನ್ಯದ ಬೇಸಾಯದ ಜೊತೆಗೆ ಸಣ್ಣ ಪುಟ್ಟ ಗೃಹಕೈಗಾರಿಕೆ, ಗಿಲ್ಡ್ (ಶ್ರೇಣಿ) ಪದ್ದತಿಯವರೆಗೆ ಉತ್ಪಾದನೆ ವಿಕ್ರಯಕ್ಕಾಗಿ ಸರಕುಗಳ ತಯಾರಿಕೆ ಬಂದಿತ್ತು ಸುಮಾರು 16-17 ನೇ ಶತಮಾನಗಳಲ್ಲಿ ಉಂಟಾದ ವೈಜ್ಞಾನಿಕ ಸಂಶೋಧನೆಗಳು, ಪ್ರಪಂಚದ ಅರಿವು, ಪ್ರಯಾಣ, ವಾಣಿಜ್ಯಗಳಲ್ಲಿ ಕ್ರಾಂತಿ, ಅದಕ್ಕೆ ಸಾಧನಗಳಾಗಿ ನಿರ್ಮಿಸಿಕೊಂಡ ಉಪಕರಣಗಳು, ಕ್ರಮೇಣ ಕೈಗಾರಿಕಾ ಕ್ರಾಂತಿ ಎಲ್ಲವೂ ಉತ್ಪಾದನಾ ಶಕ್ತಿಗಳನ್ನು ಮತ್ತಷ್ಟು ವೃದ್ಧಿ ಗೊಳಿಸಿದವು. ಉತ್ಪಾದನಾ ಕ್ರಮದಲ್ಲಿ ಬದಲಾವಣೆ ಉಂಟಾಯಿತು, ಗಿಫ್ಟ್ ತಯಾರಿಕೆ ನಶಿಸಿತು. ವೇತನಕೊಟ್ಟು, ಒಂದೆಡೆಯಲ್ಲಿ ಕೂಲಿಗಾರರು ಕೆಲಸಮಾಡುವ ಸಣ್ಣ ಪುಟ್ಟ ಕೈಗಾರಿಕೆಗಳನ್ನು ಶ್ರೀಮಂತರು ಮತ್ತು ವ್ಯಾಪಾರಗಾರರು ಸ್ಥಾಪಿಸಿದರು, ಸಿಕ್ಕುವ ಲಾಭ ಅವರನ್ನು ಮತ್ತಷ್ಟು ಪ್ರೇರೇಪಿಸಿತು, ತಮ್ಮ ಕೈಗಾರಿಕಾಲಯಗಳನ್ನು ವಿಸ್ತರಿಸಲು ಹೆಚ್ಚು ಬಂಡವಾಳ ಶೇಖರಿಸಲು, ಪೈಪೋಟಿ ನಡೆಸಿದರು. ಹೆಚ್ಚು ಹೆಚ್ಚು ಕೂಲಿ ಯವರನ್ನು ಕೆಲಸಕ್ಕೆ ನೇಮಿಸಿಕೊಂಡರು. ಹೊಸ ಬಂಡವಾಳ ವ್ಯವಸ್ಥೆಯ ಉದಯವನ್ನು ವಿರೋಧಿಸಿದ ಊಳಿಗ ಮಾನ್ಯ ವ್ಯವಸ್ಥೆಯ ಕಟ್ಟು, ಕಾನೂನು, ರಾಜಕೀಯ ವ್ಯವಸ್ಥೆ, ವ್ಯವಹಾರ, ಧರ್ಮ ಮತ್ತು ನಿರಂಕುಶ ರಾಜರ ಮತ್ತು ಪಾಳೆಯಗಾರರ ಹಕ್ಕು ಬಾಧ್ಯತೆಗಳನ್ನು ಕ್ರಾಂತಿಗಳ ಮೂಲಕ (1640 ಮತ್ತು 1789) ಕಿತ್ತೊಗೆದರು, ಬಂಡವಾಳ ಆರ್ಥಿಕ ವ್ಯವಸ್ಥೆಯ ಉದಯ ಹೊಸ ಉತ್ಪಾದನಾ ಶಕ್ತಿಗಳ ಬೆಳವಣಿಗೆಯ ಜೊತೆಯಲ್ಲಿ ಮೂಡಿತ್ತು, ಮಾರ್ಕ್ಸ್-ಏಂಗೆಲ್ಲರು ಊಳಿಗ ಮಾನ್ಯ ಆರ್ಥಿಕ ವ್ಯವಸ್ಥೆಯ ಗರ್ಭ ದಿಂದ ಜನಿಸಿದ ಬಂಡವಾಳ ವ್ಯವಸ್ಥೆಯ ವಿಮರ್ಶೆಗೆ ಗಮನಕೊಟ್ಟರು. ಗತಿಸಿದ ಆರ್ಥಿಕ ವ್ಯವಸ್ಥೆಗಳು ತಮ್ಮ ಇರುವಿಕೆಯ ಕಾಲದಲ್ಲಿ ವಿರಸಕ್ಕೆ ಆಸ್ಪದಕೊಟ್ಟು ಹೇಗೆ ಗತಿಸಿದವೋ ಅದೇ ರೀತಿ ಬಂಡವಾಳ ಆರ್ಥಿಕ ವ್ಯವಸ್ಥೆಯ ಗರ್ಭದಲ್ಲಿ ವಿರಸ ಗೋಪ್ಯವಾಗಿ ಅಡಗಿದ್ದು ಕ್ರಮೇಣ ಬಂಡ ವಾಳಶಾಹಿ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯಲ್ಲಿ ಪ್ರಕಾಶಮಾನಕ್ಕೆ ಬರು ವುದನ್ನು ಕಂಡರು, ಬಂಡವಾಳ ವ್ಯವಸ್ಥೆ ತನ್ನ ಅಂತ್ಯವನ್ನು ತಾನೇ ತಂದು ಕೊಳ್ಳುವುದನ್ನು ಅದರ ಚಲನವಲನೆಗಳಲ್ಲಿ ಕಂಡರು. ಅವರ ಹಿರಿಯ ಉದ್ದೇಶ ಬಂಡವಾಳ ಆರ್ಥಿಕ ವ್ಯವಸ್ಥೆಯ ಚಲನಾ ನಿಯಮವನ್ನು (The law of motion of capitalist Society) ಕಂಡು