ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ ಕೈಗಾರಿಕಾ ಸರಕುಗಳು ವಿದೇಶಗಳನ್ನು ಹೊಕ್ಕವು. ಅಲ್ಲಿರುವ ಗೃಹ ಕೈಗಾರಿಕೆ, ಸಣ್ಣ ಪ್ರಮಾಣದ ತಯಾರಿಕೆ ಇವುಗಳನ್ನೆಲ್ಲಾ ಮೂಲೆ ಗೊತ್ತಿದವು. ಎಲ್ಲ ದೇಶದವರೂ ಲಾಭದ ಗುಟ್ಟನ್ನರಿತರು. ತಮ್ಮ ತಮ್ಮ ದೇಶಗಳಲ್ಲಿ ಯಂತ್ರಗಳ ಸಹಾಯದಿಂದ ತಯಾರಿಕೆಯನ್ನು ಆರಂಭಿಸಿದರು. ಪೈಪೋಟಿಯಿಂದ ತಮ್ಮ ವಸ್ತುಗಳನ್ನು ಪ್ರಪಂಚದ ಮಾರುಕಟ್ಟೆಯಲ್ಲಿ ವಿಕ್ರಯಮಾಡಲು ಉಪಕ್ರಮಿಸಿದರು. ಇಂಗ್ಲೆಂಡ್ ದೇಶದ ಹಾಗೆ ಖಾಸಗೀ ಉದ್ಯಮದಾರರು ಬಂಡವಾಳವನ್ನು ಹಾಕಿ, ಕೂಲಿಗಾಗಿ ಸಿಗುವ ದುಡಿಮೆ ಗಾರರನ್ನು ತಂದು ದೊಡ್ಡ ದೊಡ್ಡ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿ ದರು, ಕಾರ್ಮಿಕವರ್ಗ ಅಲ್ಲಿಯೂ ಜನಿಸಿತು, ದೇಶ ವಿದೇಶಗಳ ಆರ್ಥಿಕ ಪ್ರತ್ಯೇಕತೆ ಮಾಯವಾಯಿತು. ಎಲ್ಲ ದೇಶಗಳೂ ಬಂಡವಾಳಶಾಹಿ ವ್ಯವಸ್ಥೆಯ ಸೂತ್ರಗಳಿಂದ ಮಾರುಕಟ್ಟೆ ತೀರ್ಮಾನಿಸುವ ಬೆಲೆ ಮತ್ತು ಸಿಗುವ ಲಾಭ- ಬಿಗಿಯಲ್ಪಟ್ಟವು. ಒಂದು ದೇಶದ ಆರ್ಥಿಕವ್ಯವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳು ಇತರ ದೇಶಗಳ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮವನ್ನುಂಟುಮಾಡುವ ಶಕ್ತಿಯುಳ್ಳವಾದವು. ಬಂಡವಾಳ ಆರ್ಥಿಕ ವ್ಯವಸ್ಥೆಯ ಲಕ್ಷಣಗಳು, ಅದರ ಜನನ ಮತ್ತು ಬೆಳವಣಿಗೆ ಇಷ್ಟನ್ನು ಮಾತ್ರ ಚಿತ್ರಿಸುವುದರಲ್ಲೇ ಮಾರ್ಕ್ಸ್-ಏಂಗೆಲ್ಬರು ತೃಪ್ತರಾಗಲಿಲ್ಲ. ಮುಂದುವರಿದು, ಬಂಡವಾಳ ಶೇಖರಣೆ ಆಗಲು ಹೇಗೆ ಸಾಧ್ಯವಾಯಿತು? ಬಂಡವಾಳವೆಂದರೇನು ? ಬಂಡವಾಳವನ್ನು ಉತ್ಪಾದನಾ ಕಾರ್ಯದಲ್ಲಿ ಹಾಕುವುದರಿಂದ ಲಾಭ ಹೇಗೆ ಬರುತ್ತದೆ ? ಯಂತ್ರಗಳ ಸಹಾಯದಿಂದ ಅತ್ಯಧಿಕ ಪ್ರಮಾಣದಲ್ಲಿ ತಯಾರಾಗುತ್ತಿರುವ ಸರಕುಗಳು ಜನರಿಗೆ ಯಥೇಚ್ಛವಾಗಿ ಸಿಕ್ಕುತ್ತಿವೆಯೇ ? ಅದರಿಂದ ಜನಸಮುದಾಯಕ್ಕೆ ಸುಖ ಉಂಟಾಗಿದೆಯೇ ಅಥವಾ ಇಲ್ಲವೇ ? ಬಂಡವಾಳ ಆರ್ಥಿಕವ್ಯವಸ್ಥೆ ಸುಗಮವಾದ ರೀತಿಯಲ್ಲಿ ಮುಂದುವರಿಯಲು ಸಾಧ್ಯವೇ ? ಎಂಬೀ ವಿಷಯ ಗಳ ಬಗ್ಗೆ ಪರಿಶೋಧನೆ ನಡೆಸಿದರು. ಬಂಡವಾಳ ಆರ್ಥಿಕ ವ್ಯವಸ್ಥೆ ಸುಗಮ ವಾಗಿ ನಡೆಯುತ್ತದೆಂದು ಹೇಳುವ ವಾದವನ್ನು ಸುಳ್ಳೆಂದರು. ಮಾರ್ಕ್ಸ್-ಏಂಗೆಲ್ಸರು ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪವನ್ನು ಹೊರಗೆಡುವವರೆಗೂ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಅನೇಕ ಬಗೆಯ ಹಗಲುಗನಸಿನ ಆರ್ಥಿಕವಾದಗಳು ಪ್ರಚಾರದಲ್ಲಿದ್ದವು. ಇದರ ಪ್ರಕಾರ
ಪುಟ:ಕಮ್ಯೂನಿಸಂ.djvu/೭೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.