೬೫ ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪ ಎರಡನೆಯದಾಗಿ, ಸಮಾಜದ ಆರ್ಥಿಕ ವ್ಯವಹಾರಗಳಲ್ಲಿ “ಸರಬರಾಜು ಮತ್ತು ಗಿರಾಕಿ” ಎಂಬ ಆರ್ಥಿಕ ನಿಯಮವು (Law of supply and demand) ಬಂಡವಾಳಶಾಹಿ ವ್ಯವಸ್ಥೆಯನ್ನು ಸುಗಮವಾಗಿ ಮುಂದುವರಿ ಸಲು ಕಾರಣವಾಗಿದೆ. ಸಮಾಜದ ಆರ್ಥಿಕ ಅ೦ಗ ವಿಶೇಷಗಳಾದ ಖಾಸಗೀ ಸ್ವಾಮ್ಯ, ಖಾಸಗೀ ಉತ್ಪಾದನೆ, ಕೆಲಸಕ್ಕೆ ತಕ್ಕ ಕೂಲಿ, ಇತ್ಯಾದಿಗಳಲ್ಲಿ ಈ ಆರ್ಥಿಕ ನಿಯಮ ಸಂಬಂಧವನ್ನು ಕಲ್ಪಿಸಿ ಇವುಗಳು ವಿಶೇಷವಾಗಿ ಏರದಂತೆಯೂ ಅಥವ ತಗ್ಗ ದಂತೆಯೂ ಪರಮಾವಧಿಗಳನ್ನು (limits) ವಿಧಿಸಿದೆ ಮತ್ತು ಪ್ರತಿ ಆರ್ಥಿಕ ಅಂಗ ವಿಶೇಷಗಳಲ್ಲಿ ಸ್ವಯಂ ಹೊಂದಾ ಣಿಕೆಯನ್ನು (Self-Adjustments) ತಂದಿದೆ. ಆದುದರಿಂದ, ಆರ್ಥಿಕ ವ್ಯವಸ್ಥೆಯಲ್ಲಿರುವ ಈ ಸ್ವಯಂ ಹೊಂದಾಣಿಕೆಯನ್ನು ರಕ್ಷಿಸುವುದು ಸರ್ಕಾ ರದ ಕರ್ತವ್ಯವಾಗಿದೆ ; ಸರ್ಕಾರವು ಆರ್ಥಿಕ ಕ್ಷೇತ್ರದಲ್ಲಿ ಪ್ರವೇಶಿಸದಿರು ವುದರ ಮೂಲಕ ಈ ಕರ್ತವ್ಯವನ್ನು ಪರಿಪಾಲಿಸಿದಂತಾಗುತ್ತದೆ ಈ ಮೇಲ್ಕಂಡ ವಾದವನ್ನು ಹುರುಳಿಲ್ಲದ ಮತ್ತು ವಾಸ್ತವಾಂಶ ಗಳಿಗೆ ದೂರವಾದ ವಾದವೆಂಬುದನ್ನು ತೋರಿಸುವುದು ಮಾರ್ಕ್ಸ್-ಏಂಗೆಲ್ಲ ರಿಗೆ ಅಷ್ಟು ಕಷ್ಟವಾಗಲಿಲ್ಲ. ಉತ್ಪಾದನೆಯಲ್ಲಿ ಎಲ್ಲರೂ ಸಮಭಾಗಿಗಳಾಗಿ ರುವುದಾದರೆ ಎಲ್ಲರೂ ತಾವು ದುಡಿಮೆ ಮಾಡಿದುದಕೆ ತಕ್ಕ ಪ್ರತಿಫಲವನ್ನು ಪಡೆಯುತ್ತಿರುವುದಾದರೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾಣುವ ಶ್ರೀಮಂತಿಕೆ, ಬಡತನ, ನಿರುದ್ಯೋಗ, ದುಃಸ್ಥಿತಿ ಎಲ್ಲವೂ ಹೇಗೆ ಉಂಟಾ ದು, ಹೇಗೆ ಬಂದವು ? ಸಮಾಜದ ಒಂದು ವರ್ಗದಲ್ಲಿ ಸಂಪತ್ತು ಕೇಂದ್ರೀ ಕೃತವಾಗಲೂ, ಹಣ ಸಂಗ್ರಹವಾಗಲೂ ಹೇಗೆ ಸಾಧ್ಯವಾಯಿತು ?
- ಬಡವಾಳಶಾಹಿ ವ್ಯವಸ್ಥೆಯ ಉತ್ಪಾದನಾ ಕಾರ್ಯದಲ್ಲಿ ನೆರವಾಗಿರುವ
ಕಾರ್ಮಿಕವರ್ಗಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲದಿರುವುದರಿಂದಲೂ ಮತ್ತು ಕಾರ್ಮಿಕವರ್ಗ “ಶೋಷಣೆಗೆ ತುತ್ತಾಗಿರುವುದರಿಂದಲೂ ಬಂಡವಾಳ ಶಾಹಿ ವ್ಯವಸ್ಥೆಯಲ್ಲಿ ವೈಪರೀತ್ಯಗಳು ಉಂಟಾಗಿರುವುದಾಗಿ ಮಾರ್ಕ್ಸ್- ಏಂಗೆಲ್ಪರು ತಿಳಿಸಿದರು. ಜನಸಮುದಾಯಕ್ಕೆ ಸುಖ ಶಾಂತಿಗಳನ್ನು ತರು ವುದು ಬಂಡವಾಳ ಆರ್ಥಿಕ ವ್ಯವಸ್ಥೆಯಿಂದ ಸಾಧ್ಯವೇ ಇಲ್ಲವೆಂದೂ, ಆರ್ಥಿಕ ದುಃಸ್ಥಿತಿ, ನಿರುದ್ಯೋಗ, ಆರ್ಥಿಕ ಏರಿಳಿತಗಳು, ಪೈಪೋಟಿ, ಲಾಭದಾಹ, ಯುದ್ದ ಇವು ಬಂಡವಾಳಶಾಹಿ ವ್ಯವಸ್ಥೆಗೆ ಅಂಟುಬಿದ್ದಿವೆ ಎಂದೂ, ಇದಕ್ಕೆಲ್ಲಾ (1) ಆರ್ಥಿಕ ಕ್ಷೇತ್ರದಲ್ಲಿ ಸರ್ಕಾರ ಪ್ರವೇಶಿಸಕೂಡದೆಂಬ ಧೋರಣೆ
- ಸರ್ಕಾರದ ತಾಟಸ್ಥ ನೀತಿ ” (Laissez-faire) ಎಂದು ಹೆಸರು ಪಡೆದಿದೆ.
1917 ರ ವರೆಗೂ ಈ ನೀತಿ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರ ಉಸಿರಾಗಿತ್ತು. (See-Rise of European Liberalism-H, J, Laski).