ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪ ೬೬ ರುವ ಸ್ವಾಮ್ಯ ಬಲ ಕಾರ್ಮಿಕವರ್ಗವನ್ನು ಶೋಷಣೆಗೆ ಈಡುಮಾಡಿ ಲಾಭ ತರುತ್ತಿರುವುದಾಗಿ ತಿಳಿಸಿದರು. ಒಂದನೆಯದಾಗಿ, ನಿರುದ್ಯೋಗದಿಂದ ನರಳುತ್ತಿರುವ ಕಾರ್ಮಿಕರ ದುಡಿಮೆಗೆ ಸರಿಸಮಾನ ಪ್ರತಿಫಲವನ್ನು ಪಡೆಯುವುದು ಅಸಾಧ್ಯದ ಮಾತು, ನಿರುದ್ಯೋಗಿಗಳು ಕೆಲಸ ಸಿಕ್ಕಿದರೆ ಸಾಕೆಂದು ಹಾತೊರೆಯುತ್ತಿರುತ್ತಾರೆ. ನಿರುದ್ಯೋಗಿ ಕೊಟ್ಟಷ್ಟು ಕೂಲಿಯನ್ನು ತೆಗೆದುಕೊಂಡು ದುಡಿಮೆಮಾಡು ತ್ತಾನೆ. ಕಡಿಮೆ ಕೂಲಿಗೆ ಮೊದಲಿನಷ್ಟೇ ಉತ್ಪಾದನೆ ನಡೆಯುವುದರಿಂದ ಉಳಿತಾಯ ಲಾಭವಾಗುತ್ತದೆ ಅಥವಾ ದುಡಿಮೆಗಾರನು ಹೆಚ್ಚಿಗೇ ಮೌಲ್ಯವನ್ನು ಉತ್ಪಾದಿಸಿ ಬಂಡವಾಳಷ್ಣನಿಗೆ ಕೊಡುತ್ತಾನೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದಷ್ಟೂ ಅದಕ್ಕೆ ಹೆಚ್ಚು ಜೀವಕಳೆ ಬರುತ್ತದೆ. ಕಾರ್ಮಿಕರಲ್ಲೇ ಪೈಪೋಟಿ ಉಂಟಾಗಿ ಬಂಡವಾಳ ಗಾರರಿಗೆ ಹೆಚ್ಚು ಕೂಲಿಗಾರರು ದುಡಿಮೆಗೆ ಸಿಗುತ್ತಾರೆ : ಹೆಚ್ಚು ಲಾಭ ಹೊಂದಲು ಅವಕಾಶವಾಗುತ್ತದೆ. ಎರಡನೆಯದಾಗಿ, ಹುಡುಗರನ್ನೂ, ಹೆಂಗಸರನ್ನೂ ಕೂಲಿಗೆ ನೇಮಿಸಿ ಕೊಂಡು ಕಡಿಮೆ ಕೂಲಿ ಕೊಡುವುದರ ಮೂಲಕ ಅಥವಾ ಗಂಡಾಳಿನಷ್ಟೇ ಅವರಿಂದ ದುಡಿಸಿಕೊಳ್ಳುವುದರ ಮೂಲಕ ಲಾಭ ಹೆಚ್ಚಾಗುತ್ತದೆ. ಮೂರನೆಯದಾಗಿ, ಕೂಲಿಗೆ ತೆಗೆದುಕೊಂಡ ದುಡಿಮೆಯವರನ್ನು ನಿಗದಿಯಾದ ಅವಧಿಗಿಂತ ಹೆಚ್ಚು ಕಾಲ ದುಡಿಸಿಕೊಳ್ಳುವುದರಿಂದ ಲಾಭ ಬರುತ್ತದೆ, ನಾಲ್ಕನೆಯದಾಗಿ, ಯಂತ್ರಗಳಮೇಲೆ ದುಡಿಮೆಗಾರರನ್ನು ದುಡಿಸಿ, ಸಹಸ್ರಪಾಲು ಹೆಚ್ಚಿಗೇ ಉತ್ಪಾದನೆ ಆಗುತ್ತಿದ್ದರೂ ಕರಾರಿನಂತೆ ಕೂಲಿ ಕೊಡುವದರಿಂದ ಲಾಭ ಬರುತ್ತದೆ, 2 ಈ ಹಲವು ಬಗೆಯಲ್ಲಿ ಹೆಚ್ಚಿಗೆ ದುಡಿಮೆ ಯಿಂದ ಆಗುವ ಹೆಚ್ಚು ಉತ್ಪಾದನೆ ಅಥವಾ ಹೆಚ್ಚಿಗೇ ಮೌಲ್ಯದ ಅಪಹರಣ ಲಾಭಕ್ಕೂ ಬಂಡವಾಳ ಶೇಖರಣೆಗೂ (Accumalation of Capital), ಶ್ರೀಮಂತರು ಇನ್ನೂ ಶ್ರೀಮಂತರಾಗುವುದಕ್ಕೂ, ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಇನ್ನೂ ಅಧೋಗತಿಗೆ ಇಳಿಯುವುದಕ್ಕೂ ಮೂಲಕಾರಣ ವಾಗಿದೆ, ಇವೇ ಬಂಡವಾಳಶಾಹಿ ಉತ್ಪಾದನೆಯ ಅಂತರಾಳವಾಗಿದೆ. ಅಷ್ಟೇ 2. ದೃಷ್ಟಾಂತಕ್ಕೆ 48 ನೇ ಪುಟವನ್ನು ನೋಡಿ.