________________
ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ ೬೯ ಆದರೆ ಎಲ್ಲವೂ ಸುಗಮವೆಂದು ಅಣಿಮಾಡಿಕೊಳ್ಳುವುದರಲ್ಲಿಯೇ ಕನಸು ಭಗ್ನವಾಗುತ್ತದೆ. ಯಾವುದು ಏನೇ ಆಗಲಿ ಲಾಭಕ್ಕೆ ಧಕ್ಕೆ ಬರದ ರೀತಿಯಲ್ಲಿ ಉತ್ಪಾದನೆ ನಡೆಯಬೇಕು. ಲಾಭದಾಯಕ ಉತ್ಪಾದನೆ ನಡೆಯುವುದಕ್ಕೆ ಎಷ್ಟು ಕನಿಷ್ಠ ಸಂಖ್ಯೆ ದುಡಿಮೆಯವರು ಬೇಕೋ ಅಷ್ಟಕ್ಕೆ ಮಾತ್ರ ಜೀವದಾನದ ಕೂಲಿ ಕೊಡುತ್ತಿರುವಾಗ, ಮತ್ತು ಜೊತೆಗೆ ನಿರುದ್ಯೋಗಿಗಳ ತಂಡವಿರುವಾಗ, ಬಂಡವಾಳಶಾಹಿ ವ್ಯವಸ್ಥೆ ಆಧುನಿಕ ಯಂತ್ರೋಪಕರಣಗಳ ಸಹಾಯದಿಂದ ಹೇರಳವಾಗಿ ಉತ್ಪನ್ನ ಮಾಡುತ್ತಿ ರುವ ಸರಕುಗಳನ್ನು ಕೊಳ್ಳುವವರು ಯಾರು ? ಅವುಗಳ ಮಾರಾಟವೆಲ್ಲಿ ? ಬಂಡವಾಳ ಆರ್ಥಿಕವ್ಯವಸ್ಥೆ ಸುಗಮವಾಗಿ ನಡೆಯಲು ಉತ್ಪನ್ನ ವಾದ ಸರಕುಗಳು ಮಾರಾಟವಾಗಬೇಕು. ಬಂಡವಾಳಗಾರನು ತಯಾರಿ ಸಿದ ಸರಕುಗಳ ಮೌಲ್ಯವನ್ನು ಹಣದ ರೂಪದಲ್ಲಿ ಪುನಃ ಪಡೆಯಬೇಕು. ಸರಕುಗಳು ಮಾರುಕಟ್ಟೆಯಲ್ಲಿ ವಿಕ್ಷಯವಾದ ಹೊರತೂ ಹಣ ಬರುವ ಹಾಗಿಲ್ಲ. ಕೊಳ್ಳುವವರು ಯಾರಿದ್ದಾರೆ ? ಕೊಳ್ಳುವ ಜನರಲ್ಲಿ ಹೆಚ್ಚು ಮಂದಿ ಜೀವದಾನದ ಕೂಲಿಯವರು ಅಥವಾ ನಿರುದ್ಯೋಗಿಗಳು. ಇವರು ತಯಾರಾದ ಪದಾರ್ಥಗಳನ್ನು ಕೊಳ್ಳುವುದು ಸಲ್ಲದ ಮಾತು, ಸರಕುಗಳು ಗಿರಾಕಿಗಳೇ ಇಲ್ಲದೆ ನಿಲ್ಲುವುವು ? ಇದೇ ಸೂಚನೆ, ತಯಾರಿಸುವ ಬಂಡ ವಾಳಗಾರನು ತನ್ನ ಸರಕುಗಳನ್ನು ಮತ್ತಷ್ಟು ಸುಲಭ ದರದಲ್ಲಿ ತಯಾರಿಸ ಬೇಕು, ಇಲ್ಲವೆ ತನ್ನ ಉದ್ಯಮವನ್ನು ಮುಚ್ಚಬೇಕು, ಇಲ್ಲವೆ ಸುಲಭ ದರದಲ್ಲಿ ವಿಕ್ರಯಿಸಲು ಮತ್ತಷ್ಟು ಕೂಲಿ ಕಡಿಮೆ ಮಾಡಬೇಕು, ಇಲ್ಲವೆ ಮತ್ತಷ್ಟು ಯಂತ್ರಗಳಿಂದ ಸಹಾಯಪಡೆದು ಹೆಚ್ಚು ಉತ್ಪಾದನೆಯನ್ನು ಇರುವ ದುಡಿಮೆಯವರಿಂದ ಪಡೆಯಬೇಕು, ಅಥವ ಲಾಭದ ಪ್ರಮಾಣ ವನ್ನು ಕಡಿಮೆಮಾಡಿಕೊಳ್ಳಲು ಬಂಡವಾಳಗಾರನು ಸಿದ್ದನಿರಬೇಕು. ಕೊನೆಯದು ಸಾಧ್ಯವೇ ಇಲ್ಲ. ಉಳಿದ ಮಾರ್ಗಗಳೆಂದರೆ ಮಡಿಮೆವರ್ಗಕ್ಕೆ ಮತ್ತಷ್ಟು ಕಡಿಮೆ ಕೂಲಿ ಕೊಡುವುದು ಅಥವಾ ಮತ್ತಷ್ಟು ಕೆಲಸಗಾರರನ್ನು ಕೆಲಸದಿಂದ ತೆಗೆಯುವುದು, ಇದರಿಂದ ಆಗುವ ಪರಿಣಾಮವೆಂದರೆ ದುಡಿಮೆ ಗಾರರ ಕೊಳ್ಳುವ ಶಕ್ತಿಯನ್ನು ಕಡಿಮೆ ಕೂಲಿ ಮತ್ತು ನಿರುದ್ಯೋಗ ಇನ್ನೂ ಕಡಿಮೆಮಾಡುತ್ತವೆ. ಬಂಡವಾಳಗಾರನ ಸರಕುಗಳು ಕೊಳ್ಳುವರಿಲ್ಲದೆ ಮಾರುಕಟ್ಟೆಯಲ್ಲಿ ಉಳಿಯುತ್ತವೆ. ಸಮೃದ್ಧಿಯ ಮಧ್ಯದಲ್ಲಿ ದಾರಿದ್ರ