ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ ಬ್ರಹ್ಮ:- ಬನ್ನಿರಿ; ಮಕ್ಕಳಿರಾ ಬನ್ನಿರಿ, ತಮ್ಮಾ, ಈಗಲೀಗ ನನ್ನ ಕಣ್ಣುಗಳು ಕಾಣುವದಿಲ್ಲ ಈ ಮುದುಕನದೇನು, ಕೂಲು ಮುಂದೆ ಕಾಲು ಹಿಂದಾಗಿ ಹೋದವು ಮಕ್ಕಳಿರಾ, ಇಂಥ ಹತ್ತಿ ಲ್ಲದ ಹೊತ್ತಿನಲ್ಲಿ ಇಲ್ಲಿಗೆ ನೀವು ಬಂದ ಕಾರಣವೇನು? ಸ್ವರ್ಗದಲ್ಲಿ ದೈತ್ಯರ ಕಾಟವೇನೂ ಇಲ್ಲವಷ್ಟೇ? ಇಂದ್ರ: - ಈ ವರೆಗೆ ಯಾವ ದೈತ್ಯರ ಕಾಟವೂ ಇುವದಿಲ್ಲ; ಆದರೆ ಇನ್ನು ಮೇಲೆ ಬೇಗನೆ ಆಗುವ ಸಂಭವವಿರುತ್ತದೆ. ಬ್ರಹ್ಮ:-ಅದಾವ ಆಂಥ ಉನ್ನತ ದೈತ್ಯ ನು? ಇಂದ್ರ:-ಪ್ರಾಚೀನ ದೈತ್ಯರಲ್ಲ; ಆಧುನಿಕ ದೈತ್ಯರಾದ ಇಂಗ್ಲಿಷರು.

  • ಈ ಸಂಗತಿಯನ್ನು ಕೇಳಿ ಬ್ರಹ್ಮನ ಮುಖವು ಬಾಡಿತು. ಪೂರ್ವ ಕಾಲದಲ್ಲಾದ ದೈತ್ಯರ ಉಪಟಳವು ನೆನಪಿಗೆ ಬರಲು, ಅವನ ದೇಹಯಷ್ಟಿ ಯು ಥರಥರನೆ ನಡುಗಲಾರಂಭಿಸಿತು ಆಗ ಅವನು ಗದ್ದ ದಕಂಠದಿಂದ ಇಂದ್ರನನ್ನು ಕುರಿತು, ಈ ಬಗ್ಗೆ ವೇದಿದ್ದಲ್ಲಿ ಏನು ಬರೆದಿದೆಂಬದನ್ನು ನೋಡೋಣ ನಡೆ' ಎಂದು ನುಡಿದು, ಅವ ಕೊಡನೆ ತನ್ನ ಬಿಡಾರಕ್ಕೆ ನಡೆದನು. ಮನೆಯ ಒಂದು ಮೂಲೆ ಯಲ್ಲಿ ಜೀರ್ಣಅರಿವೆಯ ಗಂಟುಗಳಲ್ಲಿ ಕಟ್ಟಿಟ್ಟ ತಾಡವಾಲೆಯ ಪುಸ್ತಕಗಳನ್ನು ತಕ್ಕೊಂಡು, ಕಣ್ಣಿಗೆ ಜಾಳೀಸ ಹಾಕಿಕೊಂಡು ನೋಡತೊಡಗಿದನು, ಎಷ್ಟೋ ಕಾಲದ ವರೆಗೆ ಏಕಾಗ್ರಚಿತ್ತದಿಂದ ಸೋಡಿದ ಬಳಿಕ:-ಇಂದ್ರಾ, ಈ ಇಂಗ್ಲಿಷರಿಂದ ದೇವತೆಗಳಿಗೇನೂ

ತೊಂದರೆಯಾಗುವದಿಲ್ಲ. ಇವರ ರಾಜ್ಯ ಕಾಲದಲ್ಲಿ ನಮಗೆ ಹಿಂದು ಬಗೆಯಿಂದ ಹಿತವೇ ಆಗಬಹುದಾಗಿದೆ, ಎಂದು ನುಡಿದು ಮುಗುಳು ನಗೆಯುಳ್ಳವನಾದನು. ಆಗ ಇಂದ್ರನು ಬ್ರಹ್ಮನನ್ನು ಕುರಿತು ಕೇಳಿದನೇನಂದರೆ:- (ಆಜ್ಞಾ, ಇಂಗ್ಲಿಷರ ರಾಜ್ಯದಲ್ಲಿ ತಮಗೆ ನಗೆ ಬರುವಂಥ ಅಂಥ ಯಾವ ಪ್ರಸಂಗಗಳು ಉಂಟಾಗುವವು?' ಬ್ರಹ್ಮ:-ಮಕ್ಕಳಿರಾ, ಈ ಇಂಗ್ಲಿಷರ ರಾಜ್ಯ ಕಾಲದಲ್ಲಿ ಪತಿತಪಾವನಿಯ ದ್ರವಮಯಿಯ ಆದ ಭಾಗೀರಥಿಯು- ಕಾವೇ ರಿಯು.ಪುನಃ ನನ್ನ ಕಮಂಡಲುವಿನಲ್ಲಿ ಪ್ರಾಪ್ತಳಾಗುವಳು ಅಯ್ಕೆ ಪಾಪ ಆ ಹುಡುಗಿಯನ್ನು ಭಗೀರಥನು ಯಾವಾಗ ಭೂಲೋ