ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೨೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ದೇವತೆಗಳ ಆಗಮನ.] ಆತ ಬರಲಿಕ್ಕೆ ಹೊರಟಾಗ ಕಾವಕ್ಕ ನು ಕಲಕಲ ಶಬ್ದ ಮಾಡಿ ಅಳುತ ಹೇಳಿದಳೇನಂದರೆ:-(ತಮಾ ವರುಣಾ, ನನ್ನ ತಲೆಯ ಬುರುಡಿ ಹಾರದ ಹೊರತು, ನನಗೀ ಖಳರಿಂದ ಮುಕ್ತಿ ದೊರಕದು ನಮ್ಮಪ್ಪನು ಬದುಕಿರುವಂತೆ ಕಾಣುವದಿಲ್ಲ. ಇದ್ದಿದ್ದರೆ ನನ್ನಿ ಕಡು ಶೋಚನೀಯ ಸ್ಥಿತಿಯನ್ನು ತಿಳಿದು, ಅವನು ಎಂದೂ ಹೀಗೆ ನಿಶ್ಚಿಂತನಾಗಿ ಕೂರುತ್ತಿರಲಿಲ್ಲ.

  • ಇಂದ್ರ:-ಅಜ್ಞಾ, ತಾವು ಒಮ್ಮೆ ಕರ್ನಾಟಕಕ್ಕೆ ಹೋಗಿ, ಕಾವಕ್ಕ ನನ್ನು ಕಣ್ಣಾರೆ ಕಂಡು ಬರುವದು ಉಕ್ತವಲ್ಲವೆ?

ಬ್ರಹ್ಮ:-ಅಪ್ಪಗಳಿರಾ, ನಾನು ಅಲ್ಲಿಯ ವರೆಗೆ ಹೋಗಿ ಬರುವದು ಹೇಗ? ಗಳಿಗೆ ಬಿಟ್ಟು ಮತ್ತೊಂದು ಗಳಿಗೆ ಕುಳಿತು ನಿಮ್ಮೊಡನೆ ಮಾತಾಡಬೇಕೆಂದರೆ, ಅತ್ಯಂತ ವೃದ್ದಾಪ್ಯದ ಮೂಲಕ ನನ್ನ ತಲೆ ಕೂಡ ಸ್ಥಿರವಾಗಿ ನಿಲ್ಲದಾಗಿರುತ್ತದೆ. ಆಯ್ಕೆ, ತಂಗಿ! ಕಾವಕ್ಕಾ! ಈ ಸ್ಥಿತಿಯಲ್ಲಿ ನನ್ನಿಂದ ನಿನ್ನ ದುಃಖ ನಿವಾರಣವು ಹೇಗಾಗಬೇಕು? ವರುಣ:-ಅಜ್ಞಾ, ಹೇಗಾದರೂ ಮಾಡಿ ನೀವು ಹಿಮ್ಮ ಕಾವಕ್ಕನ ಬಳಿಗೆ ಹೋಗಲೇ ಬೇಕು. ಹೋಗದಿದ್ದರೆ ಮಗಳನ್ನು ಹೊಳೆಯಲ್ಲಿ ತೇಲಿಬಿಟ್ಟು, ಈ ಮುದುವನು ಪ್ರೀತಿಯ ಮಡದಿಯೊ ಡನ ಹೇಗೆ ಸುಖವಾಗಿರುತ್ತಾನ ನೋಡಿರಿ!” ಎಂದು ಜನರಾಡಿಕೊ ಇುತ್ತಿರುವ ಮಾತಿಗೆ ಇಂಬುಗೊಟ್ಟಂತಾಗುವದಿಲ್ಲವೆ?

  • ಬ್ರಹ್ಮ:-ನನ್ನಲ್ಲಿ ಶಕ್ತಿಯಿದ್ದರೆ, ನಾನು ಹೀಗೆ ಮನೆ ಹಿಡ ಕೊಂಡು ಕೂರುತ್ತಿರಲಿಲ್ಲ; ಹಾಗು ಕರ್ಣಾಟಕಕ್ಕೆ ಹೋಗಿ ಬರ ಲಿಕ್ಕೆ ಹಿಂದು ಮುಂದು ನೋಡುತ್ತಿರಲಿಲ್ಲ; ಆದರೆ ವೃದ್ದಾಪ್ಯದ ಮೂಲಕ ಯತ್ನವೇ ಮೀರಿರಲು, ಈ ಸ್ಥಿತಿಯಲ್ಲಿ ಅಲ್ಲಿಯ ವರೆಗೆ ಹೋಗುವ ಬಗೆ ಹೇಗೆ?

ವರುಣ:- ಅಜ್ಞಾ, ನಡೆಯಿರಿ, ನಾವು ನಿಮ್ಮನ್ನು ಇಂಗ್ಲಿನ ಕೃತ ಉಗಿಬಂಡಿಯೊಳಗೆ ಸುಖರೂಪವಾಗಿ ಕರದೆಯುವೆವು. ಬ್ರಹ್ಮ (ದುಃಖದಿಂದ):- ಹೇಗಾದರೂ ಮಾಡಿ ನನ್ನನ್ನು ನನ್ನ ಕಂದಮ್ಮನ ಬಳಿಗೆ ಹಿನ್ನಿರಿ ಅಡಿಗಡಿಗೆ ಬಂಧಿಸಿ, ಅವ ಇನ್ನು ಅಸಹ್ಯ ಕಷ್ಟ ಕಳಪಡಿಸಿರುವದನ್ನು ಕೇಳಿ, ನನ್ನಂಥ ಯಾವ ಹಣ್ಣು ಗಳಿನವನು ಸುಮ್ಮನೆ ಕುಳಿತಾನು? ಈಗಲೆ ವೈಕುಂಠಕ್ಕೆ