ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೨೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ? ೧೫ ದೇಹಕ್ಕೂ ಅನಾರೋಗ್ಯವಾಗದಿರದು. ಬರುವಾಗ್ಗೆ ಮರೆಯದಲಿ ಕೊರಳಪಟ್ಟಿಗಾಗಿ ಬಿಳೇಉಂಣೆಯನ್ನು ತಕ್ಕೊಂಡು ಬನ್ನಿರಿ” ಎಂದು ಹೇಳಿದಳು." ಆ ಬಳಿಕ ನಾರಾಯಣನು ಇಂದ್ರ-ವರುಣರ ಬಳಗ ಬಂದು:- ನಡೆಯಿರಿ, ನಮ್ಮ ಬೋಲಾನಾಥನನ ಕರೆದೊಯ್ಯೋಣ. ಅವನು ಸಂಗಡ ಬರದಿದ್ದ 6 ಮೊ'ಜು ಆಗಲಿಕ್ಕಿಲ್ಲ, ಎಂದಂದು ರಥವನ್ನಾ ರೋಹಿಸಲು, ಅವರೆಲ್ಲರೂ ಧೃತಗತಿಯಿಂದ ಕೈಲಾಸಕ್ಕೆ ನಡೆದರು. ಕೈಲಾಸ. ಇಂದು ಮಕರಸಂಕ್ರಾಂತಿಯಾದುದರಿಂದ ಪಾರ್ವತಿಯು ಹಿಟ್ಟಿನ ಹೋಳಿಗೆಗಳನ್ನು ಮಾಡುತ್ತ ಪಾಕಶಾಲೆಯಲ್ಲಿ ಕುಳಿತಿದ್ದಳು; ಹಾಗು ದೇವಾಧಿದೇವನಾದ ಮಹಾದೇವನು ಅವಳ ಬಳಿಯಲ್ಲಿಯೇ ಕುಳಿ ತುಕೊಂಡು ಷಣ್ಮುಖನಿಗೆ ಸಿಟ್ಟು ಮಾಡುತ್ತಿದ್ದನು. ಆಗ ಪಾರ್ವ ತಿಯು... ಇದ್ದ ಎರಡು ಮಕ್ಕಳನ್ನು ಪಿಸಿಹಿಡಿದವರ ಹಾಗೆ ಹಗ ಲೆಲ್ಲ ಹೀಗೇಕೆ ಬಯ್ಯುತ್ತಿರುತ್ತೀರಿ? ಈ ಕಾರ್ತಿಕನು ಮೊದಲೇ ತುಸ ಗರ್ವಿಷ್ಟನು ಬಹಳ ದಿನಗಳ ತರುವಾಯ ಈಗೆಲ್ಲಿಯೋ ಮನಗೆ ಬಂದಿರುತ್ತಾನೆ, ನಿಮ್ಮ ಈ ಪರಿಯ ಬಿರಿನುಡಿಯಿಂದ ಮತ್ತ ಇವನೆಲ್ಲಾದರೂ ಓಡಿ ಹೋದನೆಂದರೆ, ಇವನನ್ನು ಹುಡುಕಿ ತರು ವದಕ್ಕಾಗಿ ನೀವೇ ಎಡತಾಕಬೇಕಾಗುವದಲ್ಲವೆ? ಎಂದು ಪತಿ ಯನ್ನು ಕುರಿತು ಒಂದಿಷ್ಟು ಉಚ್ಚ ಕಂಠದಿಂದ ಗದ್ದರಿಸಿದಳು, ಇದೇ ಸಮಯದಲ್ಲಿ ನಂದಿಯು ಅಲ್ಲಿಗೆ ಬಂದು ಶಿವನನ್ನು ಕುರಿತು:- ಅಪ್ಪಾ, ಸಣ್ಣ ಧಣೇರು ಮತ್ತೆ ಇಬ್ಬರು ಗೃಹಸ್ಥರೊಡನೆ ಮಹಾದೇ ವರ ಬೆಟ್ಟಗಂದು ಹೊರಗೆ ಬಂದಿರುತ್ತಾರೆ, ಎಂದು ನಿವೇದಿಸಿದನು. ನಂದಿಯ ನುಡಿಯನ್ನು ಕೇಳಿ ಮಹಾದೇವನು ಅಂತರಂಗದಲ್ಲಿ ಸಂಪೂರ್ಣವಾಗಿ ಬೆದರಿ, ಅಪರ್ಣೆಯನ್ನುದ್ದೇಶಿಸಿ:-ಪ್ರಿಯ ನನ್ನ-ಮೂರ್ಖನ-ಯಾವ ಅನಿಷ್ಟ ವಂದ ವಾಣಿಯ ಲಭಾಂಶದಿಂದ ಮತ್ತಾವ ದೈತ್ಯನೊ ಮತ್ತನಾಗಿ ಪುನಃ ಸ್ವರ್ಗಕ್ಕೆ ದಾಳಿಯಿಟ್ಟಂತೆ ತೋರುತ್ತದೆ. " ಅದರಿಂದಲೇ ನಾರಾಯಣಾದಿ ದೇವತೆಗಳು ನನ್ನ