ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೩೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ದೇವತೆಗಳ ಆಗಮನ ದಲೂ, ತಾನು ಗುಪ್ತ ವೇಷದಿಂದ ಕರ್ನಾಟಕಕ್ಕೆ ಬಂದುದರಿಂದಲೂ ಅಲ್ಲಿ ಪಿಟ್ಟೆಂದು ಮಾತಾಡದೆ, ಬಂದ ದಾರಿಯಿಂದ ಹಿಂದಿರುಗಿದನು. ಪೌಳಿಗೆ ಬಂದ ಬಳಿಕ ಅವನು ಆ ಸಂಗತಿಯನ್ನು ನಾರಾಯಣಾದಿ ಗಳಿಗೆ ತಿಳಿಸಿ, ತನ್ನ ಮಧುಕರಿಯ ಅನ್ನವನ್ನೆಲ್ಲ ಜಲಚರಗಳಿಗೆ ನೀಡಿ, ತಾನು ಪುನಃ ಸ್ನಾನಮಾಡಿ ಸಾವಿರ ಗಾಯತ್ರೀ ಜಪ ಮಾಡಿದನು. ಅಂದು ಅವನಿಗೆ ಉಪವಾಸವೇ ಘಟಿಸಿತು (« ಈ ಭೂಲೋಕದಲ್ಲಿ ಈ ತರದ ಅನಾಚಾರಗಳಾಗಹತ್ತಿರುವದರಿಂದಲೇ ಇಲ್ಲಿಯ ಪ್ರಾಣಿ ಗಳಿಗೆ ಈ ಬಗೆಯ ಕಷ್ಟಕರ ಪ್ರಸಂಗಗಳುಂಟಾಗಿರುತ್ತವೆ'ಂದು ಅವನು ಸಂತಾಪದಿಂದ ನುಡಿದನು. ತಮ್ಮಾ ನಾರಾಯಣಾ, ಈ ಅತ್ಯಾಚಾರದ-ದು ರ್ನಡತೆಯ ಜನರ ಸಂಸರ್ಗವು ನನಗೆ ಬೇಕಾಗಿಲ್ಲ. ನಡೆಯಿರಿ, ನೆಟ್ಟಗೆ ನಮ್ಮ ಕಾವೇರಿಯಿದ್ದಲ್ಲಿಗೆ ಹೋಗಿ, ಆಕೆಯ ಯೋಗಕ್ಷೇವುವನ್ನಷ್ಟು ತಿಳಕೊಂಡವರೇ ಮರಳಿ ದೇವಲೋಕಕ್ರ ಹೋಗೋಣ, ಇಲ್ಲಿ ಕೆಲಕಾಲ ವಾಸಿಸಿದರೆ ಸಂಗಾತ್ ಸಂಜಾ ಯತೇ ಕಾಮಃ.........' ಎಂಬಂತೆ ಈ ದುರುಳರ ಸಂಸರ್ಗದಿಂದ ನನಗೂ ನಷ್ಟಬುದ್ಧಿಯುಂಟಾಗಬಹುದು' ಎಂದು ಬ್ರಹ್ಮ ನಾಡಿ ' ಕ್ಕೆ ನಾರಾಯಣನು:-ಅಣ್ಣಾ, ಆಷ್ಟು ಭಯಪಡುವ ಕಾರಣ ವಿಲ್ಲ ಪಾಪ! ಆ ಹೆಣ್ಣು ಮಗಳಿಗೆ ವಾರೆಂಬದು ಗೊತ್ತಿರದ ರಿಂದಲೇ ಅವಳಿಂದ ಈ ಪ್ರಮಾದವು ಘಟಿಸಿತು. ಈಗ ಈ ಭೂ ಲೋಕದಲ್ಲಿ ಅಷ್ಟೊಂದು ಮಡಿ-ಮೈಲಿಗೆಯ ಆಡಂಬರವು ಉಳಿ ದಿರುವದಿಲ್ಲ. ಅಲ್ಪ-ಸ್ವಲ್ಪ ಇದ್ದರೆ ಇನ್ನೂ ಈ ಮಧ್ಯ ಕರ್ನಾಟಕ ದೇಶದಲ್ಲಿಯೇ ಇರಬೇಕು, ಉತ್ತರ ಹಾಗು ದಕ್ಷಿಣ ಪ್ರಾಂತಗ ಇಲ್ಲಿ ಅದು ನಾವಶೇಷವಾಗಿರುತ್ತದೆ ಇದಕ್ಕೆ ಕಾಲಮಾಹಾ ತ್ಮವೇ ಕಾರಣವಲ್ಲದೆ ಮತ್ತೇನು? ಇರಲಿ, ಈಗ ಅಷ್ಟೊಂದು ತ್ವರೆಯಿಂದ ಕಾವೇರಿಯ ಕಡೆಗೆ ಹೋಗುವ ಕಾರಣವಿಲ್ಲ ಮಹಾ ಸ್ಥಾನಗಳಲ್ಲಿ ತ್ರಿರಾತ್ರಗಳನ್ನಾದರೂ ಕಳೆಯಬೇಕೆಂದು ತಾವೇ ತ್ಯಾದಿಗಳಲ್ಲಿ ಹೇಳಿರುವಿರಲ್ಲವೆ? ಅಂದಮೇಲೆ ಈ ನೃಸಿಂಹನಾಡಿ ಯಲ್ಲಿ ಮರುದಿನ ಇದ್ದು, ನಾಲ್ಕನೆಯದಿನ ಬೆಳಿಗ್ಗೆ ಇಲ್ಲಿಂದ ಹೊರ ಡೋಣವಂತೆ, ಎಂದು ಹೇಳಿ ಬ್ರಹ್ಮನ, ಸಂತಾಪವನ್ನು ತುಸ ಶಾಂತ ಮಾಡಿದನು. ಬ್ರಹ್ಮಾದಿ ದೇವತೆಗಳು ನೃಸಿಂಹವಾಡಿಯಲ್ಲಿ ಮೂರುದಿನ