ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೫೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ [ಕರ್ನಾಟಕಕ್ಕೆ ಬ್ರಹ್ಮ ನಿಗೆ ಬವಳಿಯೇ ಬಂದಿತು! ಮಿಕ್ಕಾದವರು ಅವನನ್ನು ಸಾವ ರಿಸಿ ಹಿಡಿದರು, ಕೆಲವು ಕ್ಷಣಗಳ ನಂತರ ಎಲ್ಲರೂ ಆ ಗುಮಟದ ಮೇಲಿನ ಪ್ರದೇಶವನ್ನೂ, ಅಲ್ಲಿಂದ ಕಾಣುವ ವಿಜಾಪುರದ ಹಾಳು ಪಟ್ಟಣವನ್ನೂ, ಸುತ್ತುವರೆದ ಕೋಟೆ-ಕೊತ್ತಳಗಳನ್ನೂ ನಿರೀಕ್ಷಿಸಿ, ಕೆಳಗಿಳಿದು ಬಂದರು ಬಳಿಕ ಊರೊಳಗೆ ಹೋಗಿ ಯಾವನೋ ಒಬ್ಬ ಭಾವಿಕನಲ್ಲಿ ಸ್ವಾನ- ಭೋಜನಗಳನ್ನು ತೀರಿಸಿದರು, ಸಾಯಂಕಾಲದಲ್ಲಿ ಜುಮ್ಮಾ ಮಸೀದೆ, ಉಪ್ಪಲೀಬುರುಜು, ಮುಲುಖಮೈದಾನತೋಫು, ಆಸಾರೆ ಮಹಾಲು, ಚಾಂದಬಾವಡಿ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದರು ಅವುಗಳಲ್ಲಿ ಈ ಪ್ರಚಂಡವಾದ ಉಪ್ಪಲೀಬುರುಜಿನ ಮೇಲೆ ಆ ಭಯಂಕರ ತೋ ಘನ್ನು ಹ್ಯಾಗೆ ಏರಿಸಿರಬಹುದೆಂಬದನ್ನು ತರ್ಕಿಸಿಲಾರದೆ, ದೇವತೆಗಳೆಲ್ಲರೂ ಮನೆಗೆ ಬಂದು ಸಯಾತ್ಮಿಕ ಗಳನ್ನು ತೀರಿಸಿಕೊಂಡು, ರಾತ್ರಿಯ ಗಾಡಿಯಿಂದ ಹಂಪಿಗೆ ಹೋಗು ವದಕ್ಕಾಗಿ ಸ್ಟೇಶನ್ನಿಗೆ ಹೆ.೧ರಟರು. ಆಗ ಬ್ರಹ್ಮ ನು ವರುಣನನ್ನು ಕುರಿತು:-ತಮ್ಮಾ, ಇಂತಿಂಥ ಪ್ರಚಂಡವಾದ ಇಮಾರತುಗಳನ್ನು ಕಟ್ಟಿಸಿದಂಥ ಆ ಬಾದಶಹನು ಒಳ್ಳ ವೈಭವಶಾಲಿಯಾಗಿರಬಹುದಲ್ಲವೆ? ವರುಣಾ, ಈ ಊರಲ್ಲಿ ನಮ್ಮ ಹಿಂದೂ ದೇವ-ದೇವತೆಗಳ ಮಂದಿರಗಳಿಗಿಂತ ದೇವರಿಲ್ಲದ ಹಿಂದ) ಬಗೆಯ ಹಾಳು ಇಮಾರತುಗಳೇ ವಿಶೇಷವಾಗಿ ಕಾಣುವ ವಲ್ಲ? ಅವಕ್ಕೇನನ್ನು ವರು? ವರುಣ:-ಅಜ್ಜಾ, ಇಲ್ಲಿಯ ಅದಿಲ್‌ಶಹ ಬಾದಶನು ಹಿಳ್ಳೆ ವೈಭವಶಾಲಿಯಾಗಿದ್ದನು. ಇವನಾದರೂ ಉತ್ತರಹಿಂದುಸ್ತಾನ ದೊಳಗಿನ ಮೊಗಲ ಬಾದಶಹರಂತ ಮುಸಲ್ಮಾನ ಜಾತಿಯವನೇ ಆಗಿದ್ದರೂ, ರಾಜಕೀಯ ಬಾಬಿನಲ್ಲಿ ಅವರ ಇವರ ನಡುವೆ ವೈಷಮ್ಮ ವಿದ್ದಿತು, ಅದರಿಂದ ಅದಿಲ್‌ಶಹನು ಮೊಗಲರಿಂದ ದಿಲ್ಲಿ-ಆಗ್ರಾ ಗಳಲ್ಲಿ ಕಟ್ಟಿಸಲ್ಪಟ್ಟ ಇಮಾರತುಗಳಿಗಿಂತ ಶ್ರೇಷ್ಠವಾದ ಕಟ್ಟಡ ಗಳನ್ನು ಕಟ್ಟಿಸಬೇಕೆಂಬ ಹೇತುವಿನಿಂದ ಇವುಗಳನ್ನು ಕಟ್ಟಿಸಿರು ತಾನೆ; ಆದರೆ ಅವನು ಕಟ್ಟಿಸಲು ಸಂಕಲ್ಪಿಸಿದ್ದ ಎಲ್ಲ ಆಮಾರ ತುಗಳು ಅವನ ಆಳಿಕೆಯಲ್ಲಿ ಸಂಪೂರ್ಣವಾಗಲಿಲ್ಲ.” ಇಷ್ಟೇ ಅಲ್ಲ, ಅವನಿಂದ ಕಟ್ಟಿಸಲ್ಪಟ್ಟ ಕಟ್ಟಡಗಳಲ್ಲಿ ಎಷ್ಟೋ ಕಟ್ಟಡಗಳು ಬಿದ್ದು