ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೯೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ.] ೮೫ ಅಷ್ಟರಲ್ಲಿ ವರುಣನು ಮುಂದೆ ಬಂದು:-ಹಿಂದಿನಿಂದ ನಿಮಗೆ ಈ ಮಠದ ವಿಸ್ತಾರವನ್ನೆಲ್ಲ ಹೇಳುತ್ತೇನೆ ಈಗ ಬಿಸಿಲಾಯಿತು, ಸ್ನಾನಕ್ಕೆ ನಡೆಯಿರಿ, ಎಂದನು. ಬಳಿಕ ಎಲ್ಲರೂ ಸ್ನಾನಕ್ಕೆ ಹೂ ದರು, ತುಂಗಾನದಿಯ ವಿಶಾಲವಾದ ಫರಸುಗಲ್ಲಿನ ಮೇಲೆ ಬ್ರಹ್ಮ ನನ್ನು ಕೂರಿಸಿದರು. ವರುಣ ಇಂದ್ರಾದಿಗಳು ನದಿಯ ನೈರ್ಮಲ್ಯ ವನ್ನು ನೋಡಿ ಸಂತೋಷಬಟ್ಟು, ಪ್ರವಾಸದಲ್ಲಿ ಹೊಲಸಾದ ತಮ್ಮ ಬಟ್ಟೆಗಳನ್ನೆಲ್ಲ ಸ್ವಚ್ಛವಾಗಿ ಹಿಗದರು; ಹಾಗು ನಾರಾ ಯಣ-ಬ್ರಹ್ಮದೇವರ ಬಟ್ಟೆಗಳನ್ನೂ ಒಗೆದು ಒಣಗಹಾಕಿದರು. ಬಟ್ಟೆಗಳು ಹಿಣಗಲು, ವರುಣನು ಸ್ನಾನ ಮಾಡಿದನು ನಂತರ ನಾರಾಯಣಾದಿಗಳು ಸ್ನಾನಕ್ಕೆ ಇಳಿದರು. ಬ್ರಹ್ಮ ನಿಗೆ ಮೊದಲೇ ವೃದ್ದಾಪ್ಯ; ಅದರಲ್ಲೂ ದೀರ್ಘ ಪ್ರವಾಸದ ಮೂಲಕ ಉಂಟಾದ ಆಶಕ್ಕ ತೆ;ಹೀಗಿರುವಾಗ ಆ ಶೀತಲ ನೀರಿನಲ್ಲಿ ಕಾಲಿಟ್ಟ ಕೂಡಲೆ ಅವನಿಗೆ ಚಳಿ ಬಂದವು, ಅಂದು ಬ್ರಹ್ಮ ನಿಂದ ಆಹಿ ಕವನು ಮಾಡ ಲಿಕ್ಕಾಗಲಿಲ್ಲ. ನಾರಾಯಣಾದಿಗಳು ಅವನನ್ನು ಹಿಂದು ಬೆಚ್ಚನ್ನ ಸ್ಥಳದಲ್ಲಿ ಮಲಗಿಸಿದರು. ಮು೦ದೆ ತಾಸೆರಡು ತಾಸುಗಳಲ್ಲಿ ಬ್ರಹ್ಮನ ಶೀತ ನಿವಾರಣವಾಯಿತು. ಅವನು ಎದ್ದು ಕುಳಿತನು. ಅಷ್ಟರಲ್ಲಿ ಮಠದಲ್ಲಿ ಊಟದ ಗಂಟೆಯ ಸಪ್ಪಳವಾಯಿತು, ವರುಣಾದಿಗಳು ಮಡಿಗಳನ್ನು ಟ್ಟುಕೊಂಡರು. ಬ್ರಹ್ಮನು ಊಟಕ್ಕೆ ಹಿಗ್ಗೆಂದನು. ಆಗ ನಾರಾಯಣನು ಅವನಿಗೆ ತಿಳಿ ಹೇಳಿ ಕರಕೊಂಡು ನಡೆದನು ಭೋಜನೋತ್ಸರದಲ್ಲಿ ದೇವತೆಗಳು ಮಠದಲ್ಲಿಯೂ, ಊರ ಲ್ಲಿಯೂ ಅಡ್ಡಾಡಿದರು, ವಿದ್ಯಾಶಂಕರ, ಮಲ್ಲಿಕಾರ್ಜುನ ಮೊದ ಲಾದ ದೇವಸ್ಥಾನಗಳು ಅವರಿಗೆ ಆನಂದವನ್ನುಂಟುಮಾಡಿದವು. ಮರುದಿನ ಅವರು ಗಂಗಾಮಲಕ್ಕೆ ಹೋಗಿ ಅಲ್ಲಿಯ ಪವಿತ್ರ ಸ್ಥಳ ಗಳನ್ನು ನೋಡಿ ಬಂದರು. ಬಳಿಕ ಅವರು ಮೂರು ದಿನ ಅಲ್ಲಿದ್ದು ಜಗದ್ಗುರುಗಳ ದರುಶನ ಹೊಂದಿ ಮುಂದೆ ಉಡುಪಿಗೆ ಪ್ರಯಾಣ ಮಾಡಿದರು. ಉಡುಪಿ. ಉಡುಪಿಯ ದಕ್ಷಿಣ ಕಾನಡಾ ಜಿಲ್ಲೆ ಯಲ್ಲಿ ಪ್ರಸಿದ್ಧವಾದ ಕ್ಷೇತ್ರವು, ಇಲ್ಲಿ ದೈತ ಮತ ಪ್ರವರ್ತಕರಾದ ಶ್ರೀಮತ ಮಧ್ಯಾ