ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೧೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶಂಕರ ದೀಕ್ಷಿತರು ೭೧ ನನ್ನು ಕರೆದುಕೊಂಡು ಹೋಗಿ ತಮ್ಮ ಬಳಿಯಲ್ಲಿ ಲಕಮಾಪುರದಲ್ಲಿಟ್ಟುಕೊಂಡು ನಾಟಕಾಂತ ಸಾಹಿತ್ಯ ಅಭ್ಯಾಸ ಮಾಡಿಸಿದರು. ವರದಾನದಿಯ ತೀರದಲ್ಲಿದ್ದ ಆ ಹಳ್ಳಿಗೊಮ್ಮೆ ಬಂದ ಬೆಟಗೇರಿಯ ಗುರುಪಾದಯ್ಯನವರೆಂಬ ಸಂಗೀತ ವಿದ್ವಾಂಸರು ಅಲ್ಲಿಯೇ ನಾಲ್ಕಾರು ವರ್ಷ ನಿಂತರು. ಶಂಕರನಿಗೆ ಅವರಲ್ಲಿ ಶಾಸ್ಪೋಕ್ತ ಕರ್ನಾಟಕ ಸಂಗೀತ ಪಾಠವಾಯಿತು. ಅಯ್ಯನವರು ತೀರಿ ಕೊಂಡ ಮೇಲೆ ಶಂಕರ ದೀಕ್ಷಿತರು ಬೆಂಗಳೂರಿಗೆ ಬಂದು ಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆಯಲ್ಲಿ ಆರೇಳು ವರ್ಷ ಸಂಸ್ಕೃತಾಭ್ಯಾಸ ಮಾಡಿ ವಿದ್ವತ್ಸ ರೀಕ್ಷೆಯಲ್ಲಿ ಉತ್ತೀರ್ಣರಾದರು. ದೀಕ್ಷಿತರಿಗೆ ಸಂಗೀತದ ಹುಚ್ಚು ಬಿಟ್ಟಿರಲಿಲ್ಲ. ವಾಮನರಾಯರ ಕಂಪೆನಿ ನಾಟಕ ನೋಡಿದ ಮೇಲಂತೂ ಅದು ಮರುಕಳಿ ಸಿತು. ಶಾಲೆಯ ಓದು ಸಾಕು ಮಾಡಿ ಧಾರವಾಡಕ್ಕೆ ಹೋಗಿ ಪಿತ್ರೆ ವಕೀಲರಲ್ಲಿ ಸಂಗೀತಾಭ್ಯಾಸ ಆರಂಭಿಸಿದರು. ಪಿತ್ರೆಯವರ ಗೆಳೆಯರಾದ ಪ್ರಸಿದ್ದ ಗಾಯನಪಟು ಭಾಸ್ಕರ್ ಬೂವಾ ಅವರು ಆಗ ಧಾರವಾಡದ ಟ್ರೈನಿಂಗ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಅವರ ಶಿಕ್ಷಣದ ನೆರವೂ ದೀಕ್ಷಿತರಿಗೆ ಸಿಕ್ಕಿತು. ಭಾಸ್ಕರ್ ಬೂವಾ ಅವರು ಧಾರವಾಡ ಬಿಟ್ಟ ಮೇಲೆ ದೀಕ್ಷಿತರು ಈಚಲಕರಂಜಿಗೆ ಬಂದು ಬಾಲಕೃಷ್ಣ ಬೂವಾ ಅವರ ಶಿಷ್ಯರಾದರು. ಬಾಲ ಕೃಷ್ಣ ಬೂವಾ ಅವರ ಹಿರಿಯ ಮಗ ಪ್ಲೇಗುಮಾರಿಗೆ ತುತ್ತಾಗಲು ಬೂವಾ ಅವರ ಪರಿಸ್ಥಿತಿ ಕೆಟ್ಟು ಹೋಯಿತು. ಈ ಸಮಯಕ್ಕೆ ಸರಿಯಾಗಿ ದೀಕ್ಷಿತರ ಹಿರಿಯಣ್ಣ ಬಂದು ಅವರನ್ನು ಊರಿಗೆ ಕರೆದೊಯ್ದು, ಲಗ್ನ ಮಾಡಿ ಪುರಾಣ ಹೇಳಲು ಕೂಡಿಸಿದ. ಪೌರಾಣಿಕರಾಗಿ ದೀಕ್ಷಿತರು ಅಪಾರ ಖ್ಯಾತಿಗಳಿಸಿದರು. ಅಕಸ್ಮಾತ್ತಾಗಿ ಹಾನಗಲ್ಲಿಗೆ ಬಂದ ಶಿವಯೋಗಮಂದಿರದ ಪಂಚಾಕ್ಷರಿ ಬೂವಾ ಅವರು ದೀಕ್ಷಿತರ ಗಾಯನಕೇಳಿ ಸಂಗೀತವಿದ್ಯೆಯನ್ನು ರೂಢಿಸಿಕೊಂಡು ಹುಬ್ಬಳ್ಳಿ ಯಲ್ಲಿ ನೆಲಸಬೇಕೆಂದು ಸಲಹೆಯಿತ್ತರು. ದೀಕ್ಷಿತರು ಪಂಚಾಕ್ಷರಿ ಬೂವಾ ಅವರ ಸಲಹೆಯನ್ನು ಶಿರಸ್ಸಿನಲ್ಲಿ ಧರಿಸಿ ಹುಬ್ಬಳ್ಳಿಗೆ ಬಂದು ನೆಲಸಿದರು. ಪಂಚಾಕ್ಷರಿಯವರು ಅವರಿಗೆ ವಿದ್ಯಾದಾನ ಮಾಡಿದುದಲ್ಲದೆ ಹಲವು ಬಗೆಯಲ್ಲಿ ನೆರವಾದರು. ದೀಕ್ಷಿತರ ಗಾಯನಾಭಿಜ್ಞತೆ ಹೊರಗೆ ಪ್ರಕಾಶವಾಗುವ ಒಂದು ಸನ್ನಿ