ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೯೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೊದಲ ಸುಬ್ಬರಾಯಜಾತಕಿಯಗೆಲಸದುದ್ಧಿಯಿಲ್ಲದ ಎ. ಸುಬ್ಬರಾಯರು ಮಧುರವಾಗಿ ಹಾಡುವವರು ಸಿಕ್ಕುವುದು ದುರ್ಲಭ. ಸುಬ್ಬರಾಯರ ಸಂಗೀತದಲ್ಲಿ ಸೊಗಸು ತುಂಬಿರುವುದಕ್ಕೆ ಅವರು ಶ್ರುತಿಗೆ ಕೊಡುವ ಪ್ರಾಧಾನ್ಯವೇ ಕಾರಣ. ಕರ್ನಾಟಕ ಪದ್ದತಿಯ ಗಾಯಕರು ಶ್ರುತಿಬದ್ದವಾಗಿ ಹಾಡಿದರೆ ಇದು ಹಿಂದೂಸ್ತಾನಿ ಸಂಗೀತವಾಯಿತು' ಎಂದು ಹೇಳುವಷ್ಟು ನಮ್ಮ ಅಜ್ಞಾನ ಬೆಳೆದಿದೆ. ಕರ್ನಾಟಕ ಪದ್ದತಿಗಾಗಲಿ ಹಿಂದೂಸ್ಥಾನಿ ಪದ್ದತಿಗಾಗಲಿ ಶ್ರುತಿ ಪ್ರಧಾನ. ಶ್ರತಿಶುದ್ದಿಯಿಲ್ಲದವರು ಹಾಡುವ ಹವ್ಯಾಸಕ್ಕೆ ಹೋಗಬಾರದು. ಲಯಗೆಲಸದಲ್ಲಿ ಸುಬ್ಬರಾಯರು ತೋರುವ (ಖಚಿತತೆ' ಅವರ ಅಭಿಜಾತಕಲೆಯ ಕಳಶವಾಗಿದೆ. ಸುಬ್ಬರಾಯರು ಕಲ್ಯಾಣಿ, ತೋಡಿ, ಶಂಕರಾಭರಣ, ಕಾಂಬೋದಿ ಮೊದಲಾದ ಘನರಾಗಗಳನ್ನು ಕಲಾಪೂರ್ಣವಾಗಿ ಹಾಡುವುದಲ್ಲದೆ ಶಿವಪಂತು ವರಾಳಿ, ಮೋಹನ, ಕೀರವಾಣಿ, ಶ್ರೀರಂಜಿನಿ, ವಸಂತ ರವಿ ಮೊದಲಾದ ರಾಗಿಣಿಗಳನ್ನೂ ಅಷ್ಟೇ ವೈಭವಯುಕ್ತವಾಗಿ ಹಾಡುತ್ತಾರೆ. ವಿದ್ಯೆ ಗ ನು ಗುಣ ವಾ ದ ಸ್ವಾಭಿಮಾನವೂ ಸುಬ್ಬರಾಯರಲ್ಲಿದೆ. ಸ್ವಾಭಿಮಾನ ಅಹಂಕಾರಕ್ಕೆ ಡೆಕೊಡದಂತೆ ಎಚ್ಚರವಾಗಿರುವುದು ಸುಬ್ಬರಾಯರ ಹೆಚ್ಚುಗಾರಿಕೆ. ಅರಿಯಾಕುಡಿ, ಶಮ್ಮಂಗುಡಿ, ಜಿ. ರ್ಎ. ಬಾಲಸುಬ್ರಹ್ಮಣ್ಯಂ, ಎಂ. ಎಸ್. ಸುಬ್ಬಲಕ್ಷ್ಮಿ, ಎಂ. ಎಲ್. ವಸಂತಕುಮಾರಿ ಮೊದಲಾದ ತಮಿಳು ವಿದ್ವಾಂಸರನ್ನೂ ಆರ್. ಕೆ. ಶ್ರೀಕಂಠನ್, ಚಿಂತಲಪಲ್ಲಿ ರಾಮಚಂದ್ರರಾವ್, ಎಂ. ಆರ್. ದೊರೆಸ್ವಾಮಿ ಮೊದಲಾದ ಕನ್ನಡ ವಿದ್ವಾಂಸರನ್ನೂ ಹೃತೂರ್ವಕ ಮೆಚ್ಚಿಕೊಂಡಿದ್ದಾರೆ. ಹಾಡುಗಾರಿಕೆಯಲ್ಲದೆ ಪಿಟೀಲು ವಾದ್ಯವಾದನದಲ್ಲಿಯೂ ಸುಬ್ಬರಾಯರಿಗೆ ಪರಿಶ್ರಮವಿದೆ. ತ್ಯಾಗರಾಜರ, ದೀಕ್ಷಿತರು, ಪುರಂದರಾದಿ ದಾಸರ ಕೀರ್ತನೆಗಳನ್ನು ಸುಬ್ಬರಾಯರು ಹಾಡುವುದಲ್ಲದೆ ಗೀತ ಗೋವಿಂದದ ಶ್ಲೋಕಗಳನ್ನೂ ಶಿವಶರಣರ ವಚನಗಳನ್ನೂ ಭಾವಪೂರ್ಣವಾಗಿ ಹಾಡುತ್ತಾರೆ. ಮಹಾದೇವಿಯಕ್ಕನ ವಚನಗಳೆಂದರೆ ಸುಬ್ಬರಾಯರಿಗೆ ತುಂಬ ಗೌರವ. ಭಾರತೀಯ ಸಂಗೀತದ ವ್ಯಾಪ್ತಿಯನ್ನು ವಿಸ್ತರಿಸಿ, ಅದು ರಾಷ್ಟ್ರ ಜೀವನದ ಉತ್ಕರ್ಷಕ್ಕೆ ನೆರವಾಗುವಂತೆ ಮಾಡಬೇಕೆನ್ನುವುದು ಸುಬ್ಬರಾಯರ