ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೦೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾಯಾದೇವಿ ಕಡಲ ಜಲ ಕಾನಾಗಿ ಮುಗಿಲಹಲ ಮೋಡವಾಗಿ. ಕಡೆಗೆಲ್ಲ ಮಳೆಯಾಗಿ ಮತೆ ಕಡಲನೇ ಸೇರುವಂತೆ | ಬಿಳಿಬಣ್ಣ ತಲವಾಗಿ ಬಂಗಾರ ಸಿಂಗಾರ ಹಸಿರಾಗಿ ಹೊಳೆದು ಬಲು ಬೀಗಿ ಕಡೆಗೆ ಬಿಳಿ ದಾಗಿಯೇ ಕರಗುತಿಹನು ! ಹಲವು ಕನ್ನಡಿಯಲ್ಲಿ ಒಬ್ಬ ರವಿ ಹಲವಾಗಿ ಕಾಂಬಂತೆ ಮೆರೆಯುತಿವೆ ನಾ ನಾ ಬಣ್ಣ ಇರುವನೊಬ್ಬನೆ ನಾನು ವರ್ಣಭಾನು !! ” ೪. ಕಲೆ ಮತ್ತು ಜೀವನ ; ' ಕಲೆಗಾಗಿ ಕಲೆಯೇ ?” “ಜೀವನಕ್ಕಾಗಿ ಕಲೆಯೇ ?' ಎಂಬ ಎರಡು ಮತಗಳ ಹೋರಾಟವನ್ನು ಈ ನೃತ್ಯನಾಟಕ ಚಿತ್ರಿಸುತ್ತದೆ. ಇವೆರಡರ ಸಮರಸದಲ್ಲಿ ಕಲೆಯ ಸತ್ಯ ಹಾಗೂ ಜೀವನದ ಸತ್ಯ ಅಡಕವಾಗಿದೆಯೆಂಬುದೇ ವಸ್ತು. ಮೂರ್ತಿಶಿಲ್ಪದಲ್ಲಿ ನಿರತನಾಗಿರುವ ಶಿಲ್ಪಿ ತನ್ನ ಕಲೆಯಲ್ಲಿಯೇ ಜೀ ನ ನ ಸಾ ರ್ಥ ಕ ವಿ ದೆ ಯೆಂ ದು ಘಂಟಾಘೋಷವಾಗಿ ಸಾರುತ್ತಾನೆ. ಕಲಾಪ್ರೇಮವೇ ಅವನ ದೃಷ್ಟಿಯಲ್ಲಿ ಪ್ರೇಮ. ಜೀವನದ ಗೆಲುವಾಗಲಿ ಹೆಣ್ಣಿನ ಒಲವಾಗಲಿ ಅವನಿಗೆ ಅರ್ಥಶೂನ್ಯ. “ ಚೆಲುವು ನಲವಿನ ಬಲೆ ಹಾಸಿ. ಕಲೆಯ ಕೈಸೆರೆ ಹಿಡಿಯಲೆಳಸಿಹನು ಬಾಳ ಬೇಟೆಗಾರ. ಆನಂದ ಸೌಂದರ್ಯ ಬರಿ ಹೆಸರು ಬಾಳಕೋಟಲೆಗೆ ಕುದ್ರ ತಿಗಿತ್ತ ಬೆಳಕು, ಬಣ್ಣ ಒಲವು ಹೆಣ್ಣಿನಲಿಲ್ಲ, ಚೆಲುವು ಮ ನದಲ್ಲ ಸುತ್ತ ನೆರೆದೀಬದುಕು ಕಲೆಗೆ ಸಲ್ಲ ALGI

  • ಈ ವಿಷಯವನ್ನು ನಾನು ಲಲಿತಕಲೆ' ಎಂಬ ಲೇಖನದಲ್ಲಿ ಚರ್ಚಿಸಿದ್ದೇನೆ. ಅನುಬಂಧ ತಿ ನೋಡಿ.