ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೫೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೩ ವರನಟ ಹಂದಿಗನೂರ ಸಿದ್ದರಾಮಪ್ಪ ಸಿದ್ದರಾಮಪ್ಪನವರು ಸೇರಿದರು. ಒಂದು ವರ್ಷಾನಂತರ ವಾಣೀವಿಲಾಸ ಕಂಪೆನಿ, ಅಲ್ಲಿಂದ ಕಂದಗಲ್ಲ ಹನುಮಂತರಾಯರ ' ಲಲಿತ ಕಲೋದ್ಧಾರ ಮಂಡಳಿ.' ಅಲ್ಲಿ ಅಕ್ಷಯಾಂಬರ' ನಾಟಕದಲ್ಲಿ ಇವರ ಕೃಷ್ಣನ ಪಾತ್ರ ಪ್ರಸಿದ್ದಿಗೆ ಬಂತು. ಮುಂದೆ ' ಮ್ಯಾರಂಜನ ನಾಟಕ ಕಂಪೆನಿ' - ಉಷಾ ಸ್ವಯಂವರ ನಾಟಕದಲ್ಲಿ ಇವರ ಬಾಣಾಸುರನ ಪಾತ್ರ ಜನರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ವಿಶ್ವ ರಂಜನ ಕಂಪೆನಿ ಒಡೆದುಹೋಗಲು ಸಿದ್ದರಾಮಪ್ಪನವರು ತಮ್ಮ ಸ್ವಂತ ವಿಶ್ವ ರಂಜನ' ಕಂಪೆನಿಯನ್ನು ಸ್ಥಾಪಿಸಿ ನಡೆಸಿಕೊಂಡು ಬಂದರು. , ನಾನು ಧಾರವಾಡದಲ್ಲಿ ಸಿದ್ದರಾಮಪ್ಪನವರನ್ನು ಕಂಡಾಗ ಅವರು ಸ್ವಂತ ಕಂಪೆನಿಯ ಮಾಲಿಕರಾಗಿದ್ದರು, ಆ ಕಂಪೆನಿಯ ಆಸ್ತಿಯೆಲ್ಲಾ ಅವರೇ-ಅವರನ್ನು ಬಿಟ್ಟರೆ ಕೆಲವು ಹರಕು ಮುರುಕು ಫರದೆಗಳು-ಹಲವು ಕೆಲಸಕ್ಕೆ ಬಾರದ ನಟರು, ಹೆಚ್ಚು ಕಡಿಮೆ ಇದೇ ಪರಿಸ್ಥಿತಿಯಲ್ಲಿ ಬಸವರಾಜ ಮನ್ಸೂರ್ ಅವರೂ ಒಂದು ಕಂಪೆನಿ ನಡಸು ದ್ದ ರು. ಧಾರವಾಡದ ಗೆಳೆಯರೂ ನಾನೂ ವಿಚಾರಮಾಡಿ ಸಿದ್ದರಾಮಪ್ಪ ಮತ್ತು ಬಸಮಾಜ ಇವರು ಕಂಪೆನಿಗಳನ್ನು ಕೂಡಿಸಿ, ಹೊಸದಾಗಿ ಎಲ್ಲ ರಂಗೋಪಕಣಗಳನ್ನು ಮಾಡಿಸಿ, ಇವರಿಬ್ಬರು ಕಲಾವಿದರ ಸೇವೆಗೆ ಬೇಕಾದ ಅನುಕೂಲ್ಯಗಳನ್ನೊದಗಿಸ. ಬೇಕೆಂದು ನಿಶ್ಚಯಿಸಿದೆವು. ಆದರೆ ನಮ್ಮ ನಿಶ್ಚಯ ಒಂದು ಸವಿಗನಸಾಯಿತು. ಅನೇಕ ಕಾರಣಗಳಿಂದ ಅದು ಕಾರ್ಯರೂಪಕ್ಕೆ ಬರಲಿಲ್ಲ. ನಾನು ೧೯೪೩ರಲ್ಲಿ ನಾಡಹಬ್ಬಕ್ಕೆ ಆಮಂತ್ರಿತನಾಗಿ ವಿಜಾಪುರಕ್ಕೆ. ಹೋದೆ. ಆಗ ಅಲ್ಲಿ ಸಿದ್ದರಾಮಪ್ಪನವರ ಕಂಪೆನಿ ನಡೆದಿತ್ತು. ಪ್ರತಿನಿತ್ಯ ನಾಟಕ, ಮುಂಜಾನೆಯಿಂದ ಸಂಜೆಯವರೆಗೆ ಭಾಷಣ ಮಾಡಿ ಮಾಡಿ ನನಗೆ, ಸಾಕಾಗಿ ಹೋಗುತ್ತಿತ್ತು. ರಾತ್ರಿ ೧೧ಘಂಟೆಯ ನಾಟಕ ಆರಂಭವಾಗುತ್ತಿದ್ದುದು ೧೨-೧೨|| ವರೆಗೆ : ಮು ಗಿ ಯು . ದ್ದು ದು ೫ ಅಥವಾ ೬ಕ್ಕೆ, ನಾನು ವಿಜಾಪುರದಲ್ಲಿ ಇದ್ದ ಆರು ದಿನವೂ ಆರು ನಾಟಕ ನೋಡಿದೆ. ಪ್ರತಿರಾತ್ರಿ ಜಾಗರಣೆ, ಸಿದ್ದರಾಮಪ್ಪನವರನ್ನು ರಂಗದ ಮೇಲೆ ನೋಡಿದರೆ ಸಾಕು ಆಯಾಸ, ಆಲಸ್ಯ ಎರಡೂ ಮರೆಯಾಗುತ್ತಿತ್ತು, . ಅವರ ಕಂಪೆನಿ ಜೀ ರ್ಣಾ ನ ಸೈ ಯಲ್ಲಿ ತು, ನಟರು, ನಾಟಕ 13