ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸೌಂದಯ್ಯೋ ಪಾಸಕ ಮಿಣಜಿಗಿ ೧೫ ವಾಗುವ ರೀತಿಯಲ್ಲಿ ಮುಂಬದಿಯಲ್ಲಿ ಸಣ್ಣ ಕಮಲದ ಕೊಳ, ಒಂದು ಮೊಗ್ಗೆ, ಒಂದು ಅರೆಅರಳಿದ ಪು, ಒಂದು ಪೂರ್ಣ ವಿಕಾಸಗೊಂಡ ಕಮಲ. ಸೌಂದರ್ಯ ತನ್ನ ಪೂರ್ಣವಿಲಾಸವನ್ನು ಮೈವೆತ್ತು ಬಂದಂತಿದೆ * ತೊಡಿ' ಚಿತ್ರ, ಹೆಚ್ಚು ಕಡಿಮೆ ಇದೇ ಮಟ್ಟಕ್ಕೆ ನಿಲ್ಲುವುದು ಮಿಣಜಿಗಿಯವರ * ಮೇಘ ಮಲ್ಲಾರ' ಚಿತ್ರ, ಪಹರಿ ಚಿತ್ರಗಳಲ್ಲಿ ' ಮೇಘ' ರಾಗ, ಶಿವ ಆಕಾಶದತ್ತ ಮುಖಮಾಡಿ ನಾಟ್ಯವಾಡಿದಂತೆಯೂ, ಪರಿಣಾಮವಾಗಿ ಮಳೆ ಬಂದಂತೆಯೂ ಚಿತ್ರಿಸಲ್ಪಡುತ್ತದೆ. ಮೇಘ ಕಾಫಿ ಥಾಟಿನಿಂದ ಹುಟ್ಟಿತೆಂದು ಅತೀಯಾ ಬೇಗಂ ಅವರ ಅಭಿಪ್ರಾಯ, ಶಾಸ್ತ್ರಕಾರ ಲೋಚನ ಇದು ಥಾಟ್ ರಾಗವೆಂದೂ, ಇದರಿಂದ ಮೇಘ ಮಲ್ಲಾರ, ಗೌಡ ಸಾರಂಗ, ಬಿಲಾವಲ್, ದೇಶ್, ಛಾಯಾನಟ ರಾಗಗಳು ಹುಟ್ಟುತ್ತವೆಂದೂ ಅಭಿಪ್ರಾಯ ಪಡುತ್ತಾನೆ. ಮಧ್ಯಾನ್ನಾನಂತರ ಮಳೆಗಾಲದಲ್ಲಿ ಹಾಡತಕ್ಕ ರಾಗವೆಂದು ಇದಕ್ಕೆ ಪ್ರಸಿದ್ದಿ ದೊರೆತಿದೆ. ಮಿಣಜಿಗಿಯವರು ತಮ್ಮ 'ಮೇಘ ಮಲ್ಲಾರ' ದಲ್ಲಿ ಪ್ರಕೃತಿಗೆ ಹೆಚ್ಚು ಪ್ರಾಧಾನ್ಯ ಕೊಟ್ಟಿದ್ದಾರೆ. ಮಳೆ ಬರುವ ಸಂಜೆಯ ನೋಟ. ಮುಂಬದಿಯಲ್ಲಿ ಒಬ್ಬ ರಮಣಿ ದೋತಾರ ಹಿಡಿದು ನುಡಿಸುತ್ತಿದ್ದಾಳೆ. ಎಮರಿಗೆ ಮಯೂರ ಗರಿಗೆದರಿಕೊಂಡು ನಾಟ್ಯ ನಾಡುತ್ತಿದೆ. ಆಕೆಯ ಬಲಬದಿಗೆ ಎರಡು ಜಿಂಕೆಗಳು ನಿಂತಿವೆ. ಮುಂದೆ ಎರಡು ಬಕಪಕ್ಷಿಗಳು. ರಮಣಿ ಗಂಭೀರಮುದ್ರೆಯನ್ನು ತಾಳಿದ್ದಾಳೆ. ಸಂಗೀತದಲ್ಲಿ ಅವಳ ಮನಸ್ಸು ಲೀನವಾಗಿದೆ. ವಾದ್ಯ ನುಡಿಸುವಾಗ ಅವಳ ಬೆರಳುಗಳಿಂದ ನಾದ ಚಿಮ್ಮುತ್ತಿದೆ. ಇಡಿಯ ಚಿತ್ರ ಚೇತನಮಯವಾಗಿದೆ. ಮೇಘ ಮಲ್ಲಾರದಲ್ಲಿ ಪುರುಷಾಕೃತಿಯನ್ನು ತೋರಿಸದೆ, ಸ್ತ್ರೀಯನ್ನು ಚಿತ್ರಿಸಿದುದಕ್ಕೆ ಲಾಕ್ಷಣಿಕರು ಆಕ್ಷೇಪಿಸಬಹುದು. ಜಲಕ್ಷಾಮದಿಂದ ಶೋಷಿತವಾದ ಜನಕ್ಕೆ ಜಲ ದಾನಮಾಡುವ ತತ್ವವೇ ರಾಗಭಾವವೆಂದು ಒಪ್ಪಿಕೊಂಡರೆ, ಆ ಶುಭಕೆಲಸದ ನಿರ್ವಹಣ ಹೆಣ್ಣಿಗೂ ಸೇರಿದುದೆಂದು ಸಮಾಧಾನ ತಂದುಕೊಳ್ಳಬಹುದು. - ಮಿಣಜಿಗಿಯವರ ಪ್ರತಿಭಾನ್ವಿತ ಕಲಾ ಸೃಷ್ಟಿಗೆ, ಅವರ ಅನನ್ಯ ಸೌಂದ ರೊಪಾಸನೆಗೆ ಮಾಲಕಂಸ, ತೋಡಿ, ಮೇಘ ಮಲ್ಲಾರಗಳು ಸಾಕು.