ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೯೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ದ್ವಾರಂ ವೆಂಕಟಸ್ವಾಮಿ ನಾಯಿಡು ಟೀಲು ವಾದ್ಯ (Violin) ಜಗತ್ತಿನಲ್ಲಿ ಅವತರಿಸಿ ಮೂರೂವರೆ ಶತ - ಮಾನಗಳಾಗುತ್ತ ಬಂದಿದೆ. ಸ್ನಾ ಡಿವಾರಿ ಎಂಬ ಇಟಾಲಿರ್ಯ ವಾದ್ಯರಚಕ ಸೊಗಸಾದ ವಾದ್ಯಗಳನ್ನು ಮಾಡಿ ಪಿಟೀಲಿಗೆ ಸ್ಥಾನ ಗಳಿಸಿ ಕೊಟ್ಟ. ಇದರ ಪ್ರತಿಸ್ಪಂದನ ಗುಣ, ನಾದದ ನಿಲುಗಡೆ, ಅನುಕೂಲ ಪ್ರಮಾಣ ಸಂಗೀತಗಾರರಿಗೆ ಪ್ರಿಯವಾಗಿ ಎಲ್ಲೆಡೆಯಲ್ಲಿಯೂ ಪಿಟೀಲು ಪ್ರಸಾರವಾಗಲನುಕೂಲವಾಯಿತು. * ಹಿಂದೂಸ್ಥಾನಕ್ಕೆ ಪಿಟೀಲು ಯಾವಾಗ ಕಾಲಿಟ್ಟಿತು ಎಂದು ಖಚಿತವಾಗಿ ತಿಳಿದು ಬರುವುದಿಲ್ಲ. ಇಂದಿಗೂ ಉತ್ತರ ಹಿಂದೂಸ್ಥಾನದಲ್ಲಿ ಇದರ ಪ್ರಸಾರ ಕಡಿಮೆ. ದಕ್ಷಿಣ ಹಿಂದೂಸ್ಥಾನದಲ್ಲಿ ಪಿಟೀಲು ಪ್ರಥಮ ಸ್ಥಾನವನ್ನು ಗಳಿಸಿ ಕೊಂಡಿದೆ. ಮಂಗಳೂರಿಗೆ ಬಂದು ನೆಲಸಿ ಕ್ರಿಸ್ತ ಧರ್ಮ ಪ್ರಸಾರ ಮಾಡಿದ ಪಾದ್ರಿಗಳಿಂದ ಇದು ದಕ್ಷಿಣಕ್ಕೆ ಬಂದು ನಿಂತಿತೆಂದು ಊಹಿಸಬಹುದು. ಅಣ್ಣಾಶಾಸ್ತ್ರಿಗಳು, ತಿರುಕೋಡಿಕಾವಿಲ್ ಕೃಷ್ಣ ಅಯ್ಯರ್ ಸಿಟಿಲನ್ನು ರೂಢಿಸಿಕೊಂಡು, ಅದರ ಸಾಧ್ಯತೆಯನ್ನು ಹೊರಗೆಡವಿದರು. ಕರೂರು. ದೇವಡು ಅಯ್ಯರ್ ಮತ್ತು ಗೋವಿಂದಸ್ವಾಮಿ ಸಿಳ್ಳೆಯವರು ಪಿಟೀಲು ವಾದ್ಯವಾದನದಲ್ಲಿ ಅಸಾಧಾರಣ ಕೌಶಲ್ಯವನ್ನು ಗಳಿಸಿದರು. ಪಿಟೀಲು ಶುದ್ದ ದೇಶೀ ವಾದ್ಯವಲ್ಲ. ಪ್ರತಿಭಾಶಾಲಿಗಳಾದ ವಾದ್ಯ ವಿದರು ಇದನ್ನು ಭಾರತೀಯ ಸಂಗೀತಕ್ಕೆ ಅಳವಡಿಸಿಕೊಂಡಿದ್ದರೂ ಹದಿ ನಾರಾಣೆ ಸಾಮರಸ್ಯ ಸಾಧಿಸಿದೆ ಎಂದು ಹೇಳಲು ಬರುವಂತಿಲ್ಲ. ಪಿಟೀಲಿಗೆ