ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೯೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦ ಕರ್ನಾಟಕದ ಕಲಾವಿದರು ದೊರೆತಿರುವ ಸೀಮಾತೀತ ಪ್ರಾಶಸ್ತ್ರದಿಂದ ಭಾರತೀಯ ವಾದ್ಯಗಳು ಮೂಲೆಗುಂಪಾದವು. ಉತ್ತರ ಹಿಂದೂಸ್ಥಾನದಲ್ಲಿ ಸಿತಾರ, ದಿಲ್‌ರುಬಾ ಇಸ್ರಾಜ್, ಸಾರಂಗಿ ವಾದ್ಯಗಳಿರುವಂತೆ ದಕ್ಷಿಣದಲ್ಲಿ ಕಿನ್ನರಿ, ಮುಖವೀಣೆ, ಮಹಾನಾಟಕವೀಣೆ, ಇತ್ಯಾದಿ ವಾದ್ಯಗಳಿದ್ದವು. ಅವೆಲ್ಲ ಪಿಟೀಲಿನ ಹೊಡೆತಕ್ಕೆ ಸಿಕ್ಕಿ ಮ್ಯುಸಿಯಂ ಸೇರಿವೆ. ಸಮಕಾಲೀನರಲ್ಲಿ ದ್ವಾರಂ ವೆಂಕಟಸ್ವಾಮಿ ನಾಯಿಡು, ಶಿವರುದ್ರಪ್ಪ, ಪಾಪಾ ವೆಂಕಟರಾಮಯ್ಯರ್, ರಾಜಪ್ಪ (ದಿವಂಗತ ಶ್ರೀ ತಾಯಪ್ಪನವರ ಮಕ್ಕಳು) ಟಿ. ಚೌಡಯ್ಯ ಪಿಟೀಲು ವಾದ್ಯವಾದನದಲ್ಲಿ ಉಚ್ಛಶ್ರೇಣಿಯ ಸಿದ್ದಿಯನ್ನು ದೊರಕಿಸಿಕೊಂಡಿದ್ದಾರೆ. ಅವರ ವಿದ್ವತ್ತು, ಸಾಧನೆ, ರಸ ಸಿದ್ದಿಗಳಿಗಾಗಿ ನಾವು ಈ ವಾದ್ಯಕ್ಕೆ ಬೆಲೆಕೊಡಬೇಕಾಗಿದೆ. ದ್ವಾರಂ ವೆಂಕಟಸ್ವಾಮಿ ನಾಯಿಡು ಆ೦ಧ್ರರ ಪ್ರಸಿದ್ದ ದ್ವಾರಂ ಮನೆತನಕ್ಕೆ ಸೇರಿದವರು. ಇವರ ಪೂರ್ವಜರು ಯುದ್ಧ ವಿದ್ಯಾ ಪ್ರವೀ ಣರು. ಇವರ ತಂದೆ ಬೆಂಗಳೂರು ಸೈನ್ಯ ಭಂಡಾರದ ಅಧಿಕಾರಿಗಳಾಗಿದ್ದು ದ ರಿಂದ ವೆಂಕಟಸ್ವಾಮಿ ನಾಯಿಡು ಬೆಂಗಳೂರಿನಲ್ಲಿಯೇ (೩ ನವೆಂಬರ್ ೧೮೯೩) ಜನನ ಪಡೆದರು. ಕೀರ್ತಿಶೇಷ ಸಂಗಮೇಶ್ವರ ಶಾಸ್ತ್ರಿಗಳ ಶಿಷ್ಯ ರಾದ ಇವರು ಅಣ್ಣಂದಿರು ಕೃಷ್ಣಯ್ಯ ನಾಯಡು, ದ್ವಾರಂ ಅವರ ಸಂಗೀತ ಶಿಕ್ಷಣಾಚಾರ್ಯರಾದರು. ಮನೆತನದಲ್ಲಿ ಸಂಗೀತ ಸಂಸ್ಕೃತಿ ಮೊದಲಿನಿಂ ದಲೂ ಬೆಳೆದು ಬಂದಿದ್ದುದರಿಂದ ದ್ವಾರಂ ಸಂಗೀತದ ವಾತಾವರಣದಲ್ಲಿಯೇ ಬೆಳೆಯಲು ಅನುಕೂಲವಾಯಿತು. ಚಿಕ್ಕಂದಿನಲ್ಲಿಯೇ ಸಂಗಮೇಶ್ವರ ಶಾಸ್ತ್ರಿ, ತಿರುಕ್ಕೋಡಿಕಾವಿಲ್ ಕೃಷ್ಣ ಅಯ್ಯರ್, ನಂದಿಗ್ರಾಮ ವೆಂಕಣ್ಣ ಸಂತುಲು, ಕೋನೇರಿರಾಜಪುರಂ ವೈದ್ಯನಾಥ ಅಯ್ಯರ್, ಗೋವಿಂದಸ್ವಾಮಿ ಪಿಳ್ಳೆ ಇವರ ಸಂಗೀತ ಸುಧಾಸರಸ್ಸಿನಲ್ಲಿ ಮೀಯುವ ಅವಕಾಶ ದ್ವಾರಂ ಅವರಿಗೆ ಸಿಕ್ಕಿತು. ಸಂಗೀತದಲ್ಲಿ ಕಲಿಕೆಗಿಂತ ಕೇಳಿಕೆ ಪ್ರಧಾನವಾದುದ ರಿಂದ ದ್ವಾರಂ ಸಂಗೀತ ಕಲೆ ಕಲಿಯಲು ಈ ಅತಿರಥ ಮಹಾರಥರ ಸಂಗೀ ತವೂ ಕಾರಣವಾಯಿತು. ಹದಿಮೂರನೆಯ ವಯಸ್ಸಿನಲ್ಲಿಯೇ ದ್ವಾರಂ ವೆಂಕಣ್ಣ ಪಂತಲು ಅವರ ಸಹಾಯಕ ವಾದ್ಯಗಾರರಾಗಿ ಕಛೇರಿಗೆ ಕುಳಿತರು. ಇಪ್ಪತ್ತನೆಯ