ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನಕ್ಕೆ ಹಿಂದೆ] ಪಾಲ್ಕುರಿಕೆ ಸೋಮ. 23

                                      ಸಾಧುಗಳು 
               ಜಡಿದುಂ ನುಡಿದುಂ ತಮ್ಮೊ|ಳ್ನಡೆಯಂಪಡಿದೋ ಜಡರನೊಯ್ಯನೆ ಕೃಸೆಯಿಂ|
               ಕಿಡದೆಡೆಗೆಯ್ದಿಪ ಸಾಧುಗ | ಳಡಿದಳಿರ್ಗಳ್ ಕಿಡಿಸುಗಮ್ಮ ಜನ್ಮಶ್ರಮಮಂ ||
                               -------------
                               ಪಾಲ್ಕುರಿಕೆ ಸೋಮ 1 ಸು 1195 
                   ಇವನು ಬಸವಸ್ತುತಿರೂಪವಾದ ಪಂಚರತ್ನವನ್ನೂ ಬರೆದಿದ್ದಾನೆ. 
             ಇದರ ಅಂತ್ಯಶ್ಲೋಕದಿಂದ ಇದು ಏತತ್ಕೃತವೆಂದು ತಿಳಿಯುತ್ತದೆ. ಇದ
             ರಲ್ಲಿ 5 ವೃತ್ತಗಳಿವೆ ಒಂದನ್ನು ತೆಗೆದು ಬರೆಯುತ್ತೇವೆ__
                    ನರಸುರವರಧೀರಾ ನಂದಿಕೇಶಾವತಾರ 
                    ವಿಷಮವಿಷಯದೂರಾ ವಿಶ್ವಲೋಕೈಕ್ಯಸಾರ || 
                    ಗತಕಲಿಮಲಸಂಗಾ ಖ್ಯಾತಿಗೋಷ್ಠೀಪ್ರಸಂಗ
                    ಶರಣು ಬಸವಲಿಂಗಾ ಸಜ್ಜನಾಂಭೋಜಭೃರಂಗ | 
              ಈತನು ಗಂಗೋದಯವೆಂಬಕಾವ್ಯವನ್ನೂ ಬರೆದಿದ್ದಾನೆಂದು ಹೇಳು 
           ತಾರೆ ಇವನ ಶತಕಕ್ಕೆ ಸೋಮಾರಾಧ್ಯಶತಕ ಎಂಬ ಹೆಸರೂ ಉಂಟು.

- ಇವನ ಗಣಸಹಸ್ರನಾಮದ ಆರಂಭದಲ್ಲಿಯೂ ಒಂದೊಂದುಗಣದ ಅಂತ್ಯದ

                  ಲ್ಲಿಯೂ ಗ್ರಂಥಾಂತ್ಯದಲ್ಲಿಯೂ ಕೆಲವು ಪದ್ಯಗಳಿವ, ಸಹಸ್ರನಾಮ ಎಂಬ ಹೆಸರಿ 
                  ದ್ದರೂ ನಮಗೆ ದೊರೆತ ಪ್ರತಿಯಲ್ಲಿ ಒಟ್ಟು 1066 ನಾಮಗಳಿವೆ ಪ್ರಮಧಗಣ 
                  430, ರುದ್ರಗಣ 149, ವೃಷಭಗಣಯೋಗಾಚಾರ್ಯರು 22, ಅರುವತ್ತು ಮೂವರು 
67, ಮೋಡಶರು 16, ತೇರಸರು 13, ದಶಗಣಂಗಳು 10, ಅಮರಗಣ 359.  
                  ಈ ಆಮರಗಣದಲ್ಲಿ ಬಸವ, ಚೆನ್ನಬಸವ ಮುಂತಾದವರ ಹೆಸರುಗಳಲ್ಲದೆ ಈ ಹೆಸರು 
                 ಗಳೂ ಹೇಳಿವೆ:--ಅಮುಗಿದೇವಯ್ಯ, ಗಜೇಶಮಸಣಯ್ಯ, ಕಲಿದೇವಯ್ಯ, ಉರಿಲಿಂಗ 
                 ಪೆದ್ದಯ್ಯ, ಸತ್ಯಕ್ಕೆ, ವೀರಸಂಗಯ್ಯ, ಕೊಡಗೂಸು, ಗುಂಡಬ್ರಹ್ಮಯ್ಯ, ನುಲಿಯ 
                 ಚಂದಯ್ಯ, ಚಿಮ್ಮುಲಿಗೆಬೆಂದಯ್ಯ, ಮೈದುನರಾಮಯ್ಯ, ಹೇರೂರಹೆಣ್ಣು, ವೀರ 
                 ಒಲ್ಲಾಳ, ಏಕಾಂತರಾಮಯ್ಯ, ನಿಂಬಾಣದಗಣೇಶ್ವರ, ಅನಿಮಿಷಯ್ಯ, ಬೊಂತಲ 
                 ದೇವಿ, ಶಿವಲೆಂಕಮಂಚಣ್ಣ, ಸೂರಸಾನಿ, ಮರುಳುಶಂಕರದೇವ, ಸೂಳೆನಂಬಿಯಕ್ಕ,
                      1  Vol 1, 229 2 ಶ್ರೀಮತೇ ವೃಷಭೇಂದ್ರಾಯ ಸೋಮನಾಥೇನ ಧೀಮತಾ | 
                     ಪಂಚರತ್ನಮಿದಂ ದತ್ತಂ ಜ್ಞಾನವೈರಾಗ್ಯಭಕ್ತಿದಂ ||