ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನಕ್ಕೆ ಹಿಂದೆ] ಮಲ್ಲಿಕಾರ್ಜುನ 27

    ಗಳಿಸುವ ಕೋವು ಶಂಖಮರುಣಚ್ಛವಿ ಕೆಂಪಿನ ಮಂಡಲಂ ರತ 
    ಕ್ಕೆಳಸುವ ಕೋಕಮಬ್ಬ ವಿಕಸಂ ಸಲೆ ಸೂರ್ಯನ ವರ್ಣನಕ್ರಮಂ ||
                    ---------
    ಜನಿಸಿದ ತಾಣಮೇಂ ಕಿವುದೆ ವಾರ್ಧಿ ಸಹೋದರಿಯೇಂ ದರಿದ್ರೆಯೇ | 
    ಘನತರಭಾಗ್ಯಲಕ್ಷ್ಮಿಯೊಡಹುಟ್ಟಿದನೇಂ ಲಘುವೇ ಹಿಮಾಂಶು ಭಾ || 
    ವನೆನಿಪನೇನೊ ಜಾವಳನೆ ಕೃಷ್ಣನುಮೆಂಬುದುಕೇಳ್ದು ಮರ್ತ್ಯರೆ |
    ನ್ನನೆ ಮಿಗೆ ಕರ್ಚಿ ಕೊಲ್ವರೆನುತೂಳ್ವಾವೊಲಾರ್ದುದು ಶಂಖನಿಸ್ವನಂ ||
    ಮೂಡಣಸಂಜೆ ಕೆಂದಳಿರ ಕಾವಣದಂತಿರೆ ಚಂದ್ರಮಂಡಲಂ |
    ಬಾಡಿದ ಮಾಧವೀಮಧುರಮಂಜರಿಯಂತಿರೆ ತಾರಕಾಳಿ ನೀ || 
    ರೋಡಿ ಕಳಿಲ್ದು ಬಿಳ್ದಿ ಕುವೂಗೆಣೆಯಾಗಿರೆ ತಣ್ಣನಪ್ಪೆಲರ್ |
    ತೀಡೆ ತಪೋವನಂಬೊಲತಿಪಾವನಮಾಯ್ತು ನಭಂ ಪ್ರಭಾತದೊಳ್ ||
                      \ ಋತು 
    ವರ್ಣನೀಯಾಂಶಗಳು---
    ತರುಮೃಗಪಕ್ಷಿ ಮೇಘಒಳವಾಯುದಿಶಾಜವಕಾಯಭೋಗಭಾ |
    ಸ್ಕರವಿಧುರಾತ್ರಿವಾಸರಸುರಾಲಯ? ಪರ್ಬಿರತೋಪಚಾರಸಿಂ ||
    ಧುರಮದಜನ್ಮ ಯಾನಮದನೋದಯಸಸ್ಯವಿಶೇಷಭಾವದೊಳ್ | 
    ಪರಿಣತನಪ್ಪವಂಗೆ ಋತುವರ್ಣನವಿಸ್ತರಮೊಪ್ಪಿ ತೋರಿಗುಂ ||
                   -----=-
    ಮದನನ ದಂಡು ಮಲ್ಲಿಗೆಯ ಬಂಡು ಪಿಕಾಳಿಯ ತೊಂಡು ಪೂತ ಚೂ |
    ತದ ತನಿಗೊರ್ಬು ಮಾಧವಿಯ ಪರ್ಬು ತಮಾಲದ ಮರ್ಬು ರಾಜಕೀ || 
    ರದ ತನಿಸೊರ್ಕು ಕಾಮಿಜನದುರ್ಕು ವಿಯೋಗಿಯ ಸೆರ್ಕು ಕೂಡೆ ಬಂ |
    ದುದು ಮಧುವಾಸರಂ ವಿವಿಧಕೇಸರಮುದ್ಧತಧೂಳಿಧೂಸರಂ ||
    ಪಿಂಗಳಮಾದ ನೆಲ್ಲ ತೆನೆಯಂ ನಲಿಗರ್ಚೀದ ರಕ್ತಚಂಚು ಪ |
    ಕ್ಪoಗಳ ಶಾಡ್ವಲಚ್ಛವಿ ಮನಂಗೊಳೆ ಪಾರುವ ಕೀರಮಾಲೆ ರೋ ||
    ದೋಂಗಣಮೆಂಬ ಪಟ್ಟಣದೊಳೊಪ್ಪುವ ಬೆಳ್ಮುಗಿಲೆಂಬ ಬಳ್ಳಿಮಾ | 
    ಡಂಗಳ ಪೊನ್ನ ಮಾಣಿಕದ ಪಚ್ಚೆಯ ತೋರಣದಂತೆ ರಂಜಿಕುಂ ||
                      x1 ವನಕ್ರೀಡೆ
    ವರ್ಣನೀಯಾಂಶಗಳು---
    ವನಪಾಲರ್ ಪೇಳ್ವಿ ಭೂಪರ್‌ ತರುಣಿಯರೊಡನಾ ನಂದನಕ್ಕೆಯ್ದೆ ಪೋಪಾ|